ಪಾಕ್ ಪರ ಘೋಷಣೆ ಕೂಗಿದ್ರೂ ಚಾರ್ಜ್ ಶೀಟ್ ಸಲ್ಲಿಸದ ಇನ್ಸ್ ಪೆಕ್ಟರ್ ಅಮಾನತು

ಚಾರ್ಜ್ ಶೀಟ್ ಸಲ್ಲಿಕೆ ಮಾಡಲು ವಿಳಂಬ ಮಾಡಿದ ಕಾರಣಕ್ಕೆ ಪೊಲೀಸ್ ಇನ್ಸ್‌ಪೆಕ್ಟರ್ ಅಮಾನತು ಮಾಡಲಾದ ಘಟನೆ ಇಂದು ಹುಬ್ಬಳ್ಳಿಯಲ್ಲಿ  ನಡೆದಿದೆ. ೨೦೨೦ ಫೆ.೧೪ ರಂದು ಹುಬ್ಬಳ್ಳಿಯ ಕೆ.ಎಲ್ಇ ಇಂಜಿನಿಯರಿಂಗ್ ಕಾಲೇಜಿನ ಮೂವರು ವಿದ್ಯಾರ್ಥಿಗಳು ಪಾಕಿಸ್ತಾನ ಪರ ಘೋಷಣೆಯನ್ನು ಕೂಗಿದ್ದರು . ಆದ್ರೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಜಾಕ್ಸನ್ ಡಿಸೋಜಾ ಚಾರ್ಜ್ ಶೀಟ್ ಸಲ್ಲಿಸಲು ಹಿಂದೆ ಮುಂದೆ ನೋಡಿದ್ದಾರೆ .ಈ ಕಾರಣಕ್ಕಾಗಿ  ಜಾಕ್ಸನ್ ಡಿಸೋಜರನ್ನು ಉತ್ತರ ವಲಯ ಐಜಿಪಿ ರಾಘವೇಂದ್ರ ಸುಹಾಸ ಪೊಲೀಸ್  ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಇನ್ನು ಯಾವುದೇ ಪ್ರಕರಣಗಳು ಇದ್ದರೂ ; ಆ ಪ್ರಕರಣಕ್ಕೆ ಚಾರ್ಜ್ ಶೀಟ್ ಸಲ್ಲಿಸಲು ೯೦ ದಿನದ ಅವಕಾಶವಿರುತ್ತೆ. ಆದ್ರೆ . ಚಾರ್ಜ್ ಶೀಟ್ ಸಲ್ಲಿಕೆ ಮಾಡದ ಕಾರಣ ಆರೋಪಿಗಳಿಗೆ ಜಾಮೀನು ಸಿಕ್ಕಿತ್ತು. ಅಂದಹಾಗೆ ಫೆಬ್ರವರಿ 14ರಂದು ಪುಲ್ವಮಾ ದಾಳಿ ನಡೆದು ವರ್ಷ ಪೂರೈಸಿದ ಸಂದರ್ಭದಲ್ಲಿ ಕೆಎಲ್‌ಇ ಕಾಲೇಜಿನಲ್ಲಿ ಹುತಾತ್ಮ ಯೋಧರನ್ನು ಸ್ಮರಿಸಲು ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.ಇಂಥಹ ಸಂದರ್ಭದಲ್ಲಿ ಈ ಮೂವರು ವಿದ್ಯಾರ್ಥಿಗಳಾದ ವಿದ್ಯಾರ್ಥಿಗಳಾದ ಅಮೀರ್, ಬಾಸಿತ್, ತಾಲೀಬ್ ಕಾಲೇಜಿನ ಹಾಸ್ಟೆಲ್‌ನಲ್ಲಿ ಪಾಕ್ ಸೇನೆಯ ಹಾಡಿಗೆ ನೃತ್ಯ ಮಾಡಿದ್ದಲ್ಲದೆ ಪಾಕಿಸ್ತಾನ ಪರವಾದ ಘೋಷಣೆಗಳನ್ನು ಕೂಗಿದ್ದರು. ಇನ್ನು ಈ ವಿದ್ಯಾಥರ್ಥಿಗಳು ಕಾಶ್ಮೀರ ಮೂಲದವರೆಂದು ತಿಳಿದು ಬಂದಿದೆ.

Exit mobile version