ನವದೆಹಲಿ, ಅ.23: ಈಗಾಗಲೇ ಮೋದಿಯವರು ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಇದೀಗ ಗುಜರಾತ್ನಲ್ಲಿ ರೈತರಿಗಾಗಿ ‘ಕಿಸಾನ್ ಸೂರ್ಯೋದಯ ಯೋಜನೆ’ ಸೇರಿದಂತೆ ಮೂರು ಪ್ರಮುಖ ಯೋಜನೆಗಳನ್ನು ಪ್ರಧಾನಿ ನರೇಂದ್ರ ಮೋದಿಯವರು ಅ. 24ರಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಲಿದ್ದಾರೆ ಎಂಬ ಮಾಹಿತಿಯನ್ನು ಪ್ರಧಾನಮಂತ್ರಿ ಕಾರ್ಯಾಲಯ ಗುರುವಾರ ಸ್ಪಷ್ಟಪಡಿಸಿದೆ.
“ಕಿಸಾನ್ ಸೂರ್ಯೋದಯ ಯೋಜನೆ” ಅಲ್ಲದೆ,ಯೇ ಎನ್. ಮೆಹ್ತಾ ಹೃದ್ರೋಗ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರ ಮಕ್ಕಳ ಹೃದಯ ಚಿಕಿತ್ಸಾ ಆಸ್ಪತ್ರೆ ಹಾಗೂ ಅಹಮದಾಬಾದ್ ಸರ್ಕಾರಿ ಆಸ್ಪತ್ರೆಯಲ್ಲಿ ಟೆಲಿ-ಹೃದ್ರೋಗ ಮೊಬೈಲ್ ಅಪ್ಲಿಕೇಶನ್ ಅನ್ನು ಉದ್ಘಾಟಿಸಲಿದ್ದಾರೆ. ಪ್ರಧಾನಿಯವರು ಗಿರ್ನಾರ್ನಲ್ಲಿನ ರೋಪ್ವೇಯನ್ನು ಕೂಡಾ ಉದ್ಘಾಟಿಸಲಿದ್ದಾರೆ ಎಂದು ತಿಳಿದು ಬಂದಿದೆ.
ನೀರಾವರಿ ಯೋಜನೆಗಾಗಿ ಹಗಲು ವೇಳೆಯಲ್ಲೂ ವಿದ್ಯುತ್ ಸರಬರಾಜು ಮಾಡಲು ಮುಖ್ಯಮಂತ್ರಿ ವಿಜಯ್ ರೂಪಾನಿ ನೇತೃತ್ವದಲ್ಲಿ, ಗುಜರಾತ್ ಸರ್ಕಾರ ಇತ್ತೀಚೆಗೆ ‘ಕಿಸಾನ್ ಸೂರ್ಯೋದಯ ಯೋಜನೆ’ ಘೋಷಿಸಿತ್ತು. ಈ ಯೋಜನೆಯಡಿ ರೈತರ ಜಮೀನುಗಳಿಗೆ ಬೆಳಿಗ್ಗೆ 5 ರಿಂದ ರಾತ್ರಿ 9 ರವರೆಗೆ ವಿದ್ಯುತ್ ಸರಬರಾಜು ಮಾಡಲಾಗುತ್ತದೆ. ಯೋಜನೆಯ ಪ್ರಸರಣ ಮೂಲಸೌಕರ್ಯಗಳನ್ನು ಸ್ಥಾಪಿಸಲು ರಾಜ್ಯ ಸರ್ಕಾರದಿಂದ 3,523 ಕೋಟಿ ರೂ.ನಿಗದಿಪಡಿಸಿದೆ.
ಯು ಎನ್ ಮೆಹ್ತಾ ಸಂಸ್ಥೆ ಇದೀಗ ಹೃದಯ ಚಿಕಿತ್ಸೆಯಲ್ಲಿ ಭಾರತದ ಅತಿದೊಡ್ಡ ಆಸ್ಪತ್ರೆಯಾಗಲಿದೆ. ಜೊತೆಗೆ ವಿಶ್ವದರ್ಜೆಯ ವೈದ್ಯಕೀಯ ಸೌಲಭ್ಯಗಳನ್ನು ಹೊಂದಿರುವ ವಿಶ್ವದಲ್ಲಿರುವ ಕೆಲವೇ ಮುಖ್ಯ ಆಸ್ಪತ್ರೆಗಳ ಸಾಲಿಗೆ ಸೇರಲಿದೆ. ಗಿರ್ನಾರ್ನಲ್ಲಿ ಪ್ರಧಾನ ಮಂತ್ರಿ ರೋಪ್ವೇಯನ್ನು ಕೂಡಾ ಉದ್ಘಾಟಿಸುವುದರೊಂದಿಗೆ ಗುಜರಾತ್ ಜಾಗತಿಕ ಪ್ರವಾಸೋದ್ಯಮ ನಕ್ಷೆಯಲ್ಲಿ ಪ್ರಮುಖ ಸ್ಥಾನವನ್ನು ಪಡೆಯಲಿದೆ. ಆರಂಭದಲ್ಲಿ 25-30 ಕ್ಯಾಬಿನ್ಗಳು ಇರಲಿದ್ದು, ಪ್ರತಿ ಕ್ಯಾಬಿನ್ ನಲ್ಲಿ 8 ಜನರು ಸಾಗುವ ಸಾಮರ್ಥ್ಯ ಹೊಂದಿದೆ. ರೋಪ್ ವೇ ಉದ್ದ 2.3 ಕಿ.ಮೀ ಆಗಿದೆ.