ಬಲವಂತವಾಗಿ ಯಾರಿಗೂ ಲಸಿಕೆ ನೀಡುವುದಿಲ್ಲ: ಸುಪ್ರೀಂ ಕೋರ್ಟ್‌ಗೆ ಸ್ಪಷ್ಟನೆ ನೀಡಿದ ಕೇಂದ್ರ ಸರ್ಕಾರ.

supreme court

ಕೋವಿಡ್ ಲಸಿಕೆಯನ್ನು ಹಲವು ರಾಜ್ಯಗಳಲ್ಲಿ ಕಡ್ಡಾಯ ಮಾಡಲಾಗಿದ್ದು, ಶಾಲೆ, ಕೆಲಸ, ಯಾವುದೆ ಸಮಾರಂಭಕ್ಕೆ ಹೋಗಬೇಕಾದರೂ, ಎರಡು ಡೋಸ್ ಲಸಿಕೆ ಪಡೆದಿರಬೇಕು ಎಂದು ಇತ್ತು .ಮತ್ತು ಲಸಿಕೆ ಪಡೆಯದೆ ಇರುವವರಿಗೆ ಕೆಲವು ಸೌಲಭ್ಯ ಕೊಡುವುದಿಲ್ಲ ಎಂದು ಹೇಳಿದ್ದರು. ಹಲವು ಗ್ರಾಮಗಳ ಭಾಗಗಳಲ್ಲಿ ಬಲವಂತವಾಗಿ, ಮನೆ ಮನೆಗೆ ಹೋಗಿ ಜನರಿಗೆ ಲಸಿಕೆ ಹಾಕುತ್ತಿದ್ದರು .ಅದರೆ ಈಗ ಕೋವಿಡ್ ಲಸಿಕೆ ಯಾರಿಗೂ ಒತ್ತಾಯವಾಗಿ ನೀಡುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ಗೆ  ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

ಹಲವು ಗ್ರಾಮೀಣ ಭಾಗಗಳಲ್ಲಿ ದಮ್ಮಯ್ಯ ಎಂದು ಬೇಡಿಕೊಂಡರೂ ಬಿಡದೆ ಬಲವಂತವಾಗಿ ಲಸಿಕೆ ಹಾಕಿರುವ ವಿಡಿಯೋ ಬಹಳ ವೈರಲ್ ಆಗಿವೆ. ಇದರ ಮಧ್ಯೆಯೇ ಲಸಿಕೆ ಪಡೆಯಲು ಯಾರಿಗೂ ಬಲವಂತ ಮಾಡಾಬಾರದು ಎಂದು ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸಕಾ೯ರ ಮಾಹಿತಿ ನೀಡಿದೆ. ಕೇಂದ್ರ ಆರೋಗ್ಯ ಸಚಿವಾಲಯ ಹೊರಡಿಸಿರುವ ಕೋವಿಡ್ ಮಾರ್ಗ ಸೂಚಿಯಲ್ಲಿ ಇದನ್ನು ಹೇಳಲಾಗಿದೆ ಮತ್ತು ಈ ಮಾರ್ಗ ಸೂಚಿ ಪ್ರಕಾರ ಯಾವುದೆ ವ್ಯಕ್ತಿಗೆ ಬಲವಂತವಾಗಿ ಲಸಿಕೆ ನೀಡುವಂತಿಲ್ಲ ಎಂದು ಕೇಂದ್ರ ಸರ್ಕಾರ. ಹೇಳಿದೆ.

Exit mobile version