ಬಿಬಿಎಂಪಿ ಚುನಾವಣಾ ಚೆಂಡು ಹೈಕೋರ್ಟ್‌ ಅಂಗಳದಲ್ಲಿ

ಬೆಂಗಳೂರು, .20: ರಾಜ್ಯದಲ್ಲಿ ಬಿಬಿಎಂಪಿಗೆ ಶೀಘ್ರ ಚುನಾವಣೆ ನಡೆಸಬೇಕೆಂದು ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮಾಜಿ ಸದಸ್ಯ ಶಿವರಾಜ್, ಅಬ್ದುಲ್ ವಾಜೀದ್ ಮತ್ತು ಕೆಪಿಎಂಸಿ ಕಾಯ್ದೆಯು ಸರ್ಕಾರದ ತಿದ್ದುಪಡಿ ಪರಿಗಣಿಸದಂತೆ ಕೋರಿ ಚುನಾವಣಾ ಆಯೊಗದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಮುಖ್ಯ ನ್ಯಾಯಾಧೀಶರಾದ ಓಕಾ ವಿಭಾಗೀಯ ಪೀಠವು ವಿಚಾರಣೆಯನ್ನು ನವೆಂಬರ್ 10ಕ್ಕೆ ಮುಂದೂಡಲಾಗಿದೆ.

ಚುನಾವಣಾ ಆಯೋಗದ ಪರ ವಕೀಲ ಕೆ.ಎನ್.ಫಣೀಂದ್ರ ತಮ್ಮ ವಾದ ಮಂಡಿಸಿ 250 ವಾರ್ಡ್‍ಗಳಿಗೆ ಹೆಚ್ಚಿಸಲು ಅವಕಾಶವಿರುವ ಕೆಎಂಸಿ ಕಾಯ್ದೆಗೆ ತಿದ್ದುಪಡಿ ತರಲು ಸರ್ಕಾರ ಮುಂದಾಗಿದೆ. ಇದನ್ನು ಪರಿಗಣಿಸಬಾರದೆಂದು ಮನವಿ ಮಾಡಿದರು.

198 ವಾರ್ಡ್‍ಗಳಿಗೆ ಚುನಾವಣೆ ಮಾಡಲು ನ್ಯಾಯಾಲಯ ಸೂಚನೆ ನೀಡಬೇಕು. ಈಗಾಗಲೇ  ಮೀಸಲಾತಿ ಮತದಾರರ ಪಟ್ಟಿ ರೆಡಿಯಾಗಿದೆ. ಹಾಗಾಗಿ ಪ್ರಸ್ತುತ ಇರುವ ವಾರ್ಡ್‍ಗಳಿಗೆ ಚುನಾವಣೆ ನಡೆಸಬೇಕೆಂದು ಮನವಿ ಮಾಡಿದರು.

ಶಿವರಾಜ್ ಅವರ ವಕೀಲರಾದ ರವಿವರ್ಮ ಕುಮಾರ್ ಅವರು ಬಿಬಿಎಂಪಿಗೆ ಶೀಘ್ರ ಚುನಾವಣೆ ನಡೆಸಬೇಕು ಹಾಗೂ ಹಾಲಿ ಇರುವ ವಾರ್ಡ್‍ಗಳಿಗೆ ಚುನಾವಣೆ ನಡೆಸಲು ಮನವಿ ಮಾಡಿದರು. ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯ ಆಕ್ಷೇಪಣೆಗಳಿದ್ದಲ್ಲಿ ಅರ್ಜಿ ಸಲ್ಲಿಸಲು ಸರ್ಕಾರಕ್ಕೆ ಸೂಚನೆ ನೀಡಿದೆ.

Exit mobile version