ಭಾರತಕ್ಕೆ ಮತ್ತೆ ಲಗ್ಗೆ ಇಡಲಿದೆಯಾ ಟಿಕ್‌ಟಾಕ್?

ನವದೆಹಲಿ, ನ. 16: ಭಾರತೀಯ ಬಳಕೆದಾರರ ಡೇಟಾ ಪ್ರೈವಸಿ ಕಾಪಾಡುವ ಹಿನ್ನೆಲೆ ಕೇಂದ್ರ ಸರ್ಕಾರ ಚೀನಾ ಮೂಲದ ಹಲವಾರು ಆ್ಯಪ್‌ಗಳನ್ನು ನಿಷೇಧಿಸಿತು. ಅವುಗಳ ಪೈಕಿ ಪಬ್-ಜಿ ಗೇಮ್ ಮತ್ತು ಟಿಕ್​ಟಾಕ್ ಆಯಪ್​ ಜನಪ್ರಿಯ ಆಯಪ್​ಗಳು. ಈ ಆಯಪ್​ಗಳನ್ನು ಕಳೆದುಕೊಂಡ ಅದೆಷ್ಟೋ ಬಳಕೆದಾರರು ಈಗಲೂ ಈ ಆಯಪ್​ಗಳು ಮತ್ತೆ ವಾಪಸ್ಸಾಗಲಿವೆ ಎಂಬ ಸಣ್ಣದೊಂದು ನಿರೀಕ್ಷೆ ಇಟ್ಟುಕೊಂಡಿದ್ದಾರೆ ಎಂದರೆ ಸುಳ್ಳಾಗದು.

ಉದ್ಯೋಗಿಗಳಿಗೆ ಬರೆದಿರುವ ಪತ್ರದಲ್ಲಿ, ಡೇಟಾ ಗೌಪ್ಯತೆ ಮತ್ತು ಭದ್ರತಾ ಅಗತ್ಯಗಳನ್ನು ಪೂರೈಸಲು ಕಂಪನಿಯು ಕ್ರಮಗಳನ್ನು ಕೈಗೊಂಡಿದೆ ಮತ್ತು ಸಕಾರಾತ್ಮಕ ಫಲಿತಾಂಶಗಳ ಬಗ್ಗೆ ಆಶಾವಾದಿಯಾಗಿದೆ ಎಂದು ಟಿಕ್ ಟಾಕ್ ಇಂಡಿಯಾ ಮುಖ್ಯಸ್ಥ ನಿಖಿಲ್ ಗಾಂಧಿ ಹೇಳಿದ್ದಾರೆ. ಇದರೊಂದಿಗೆ ಭಾರತದಲ್ಲಿ ಮತ್ತೆ ಟಿಕ್‌ ಟಾಕ್‌ ಬರಲಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಡೇಟಾ ಗೌಪ್ಯತೆ ಮತ್ತು ಭದ್ರತೆಯ ಅಗತ್ಯಗಳನ್ನು ಒಳಗೊಂಡಂತೆ ಸ್ಥಳೀಯ ಕಾನೂನುಗಳನ್ನು ಪಾಲಿಸಲು ಬೈಟ್ ಡ್ಯಾನ್ಸ್ ಮಾಲೀಕತ್ವದ ಆಪ್ ಬದ್ಧವಾಗಿದೆ ಎಂದು ಪತ್ರದಲ್ಲಿ ಗಾಂಧಿ ಹೇಳಿದ್ದಾರೆ. ಗಾಂಧಿ ‘ಭಾರತದಲ್ಲಿ ಟಿಕ್ ಟಾಕ್‌ ಗೆ ಅಗಾಧ ವಾದ ಬೆಳವಣಿಗೆಯ ಅವಕಾಶ’ ಎಂದು ಹೇಳಿದ್ದಾರೆ ಎನ್ನಲಾಗಿದೆ.’ನಮ್ಮ ಸ್ಪಷ್ಟನೆಗಳನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ ಮತ್ತು ಅವರು ಹೊಂದಿರುವ ಯಾವುದೇ ಆತಂಕಗಳನ್ನು ನಾವು ದೂರಮಾಡುವುದನ್ನು ಮುಂದುವರಿಸುತ್ತೇವೆಎಂದು ಪತ್ರದಲ್ಲಿ ಗಾಂಧಿ ಬರೆದಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಜೂನ್ ನಲ್ಲಿ ವೀಚಾಟ್, ಯುಸಿ ಬ್ರೌಸರ್ ಸೇರಿದಂತೆ ಇನ್ನೂ 58 ಆಯಪ್ ಗಳನ್ನು ನಿಷೇಧಿಸಿತ್ತು. ಈ ಆಯಪ್ ಗಳು ಭಾರತದ ಸಾರ್ವಭೌಮತೆ ಮತ್ತು ಸಮಗ್ರತೆ, ಭಾರತದ ರಕ್ಷಣೆ, ರಾಜ್ಯದ ಭದ್ರತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಪೂರ್ವಾಗ್ರಹಪೀಡಿತವಾಗಿವೆ ಎಂದು ಸರಕಾರ ತನ್ನ ನೋಟಿಸ್ ನಲ್ಲಿ ತಿಳಿಸಿದೆ.

Exit mobile version