ಭಾರತದಲ್ಲಿ ಕೊರೋನಾ ವೈರಸ್ ಭೀತಿ ..?

ಚೀನಾದ ಜನತೆ ಕೊರೋನಾ ವೈರಸ್ ಸೋಂಕುವಿನಿಂದ ಬಳಲುತ್ತಿದ್ದಾರೆ . ಇನ್ನು ಈ ಸೋಂಕಿನಿಂದ ಚೀನಾದಲ್ಲಿ 28 ಮಂದಿ ಸಾವನ್ನಪ್ಪಿದ್ದು 8000 ಕ್ಕೂ ಹೆಚ್ಚು ಮಂದಿಯಲ್ಲಿ ವೈರಸ್ ಕಂಡುಬಂದಿದೆ ಈ ಹಿನ್ನಲೆ ಚೀನಾ ಸರ್ಕಾರ ಇದೀಗ ಚಿಕಿತ್ಸೆ ನೀಡಲು ಹತ್ತು ದಿನಗಳೊಳಗಡೆ ಆಸ್ಪತ್ರೆ ನಿರ್ಮಿಸಲು ಮುಂದಾಗಿದ್ದು; ಈಗಾಗಲೇ ಅಡಿಪಾಯ ಹಾಕಿ ಆಸ್ಪತ್ರೆ ಕಟ್ಟಡ ನಿರ್ಮಿಸುತ್ತಿದ್ದು ಫೆಬ್ರವರಿ 3 ಕ್ಕೆ ಆಸ್ಪತ್ರೆ ನಿರ್ಮಾಣ ಮುಕ್ತಾಯವಾಗಲಿದ್ದು ಏಕಕಾಲದಲ್ಲಿ 1000ಕ್ಕೂ ಹೆಚ್ಚು ರೋಗಿಗಳಿಗೆ ಚಿಕಿತ್ಸೆ ಸಿಗಲಿದೆ.


ಇದೀಗ ಮತ್ತೊಂದು ಆಘಾತಕಾರಿ ವಿಷಯ ಹೊರಬಿದ್ದಿದೆ. ಕೆಲದಿನಗಳ ಹಿಂದೆ ಚೀನಾರಾಷ್ಟ್ರದಿಂದ ಭಾರತಕ್ಕೆ ಆಗಮಿಸಿರುವ 80 ಪ್ರಯಾಣಿಕರ ಪೈಕಿ ಹಲವರಿಗೆ ಸೋಂಕು ತಗುಲಿದ್ದು ; ಕೇರಳದ ವಿವಿಧ ಆಸ್ಪತ್ರೆಗಳಲ್ಲಿ 7ಜನ , ಮುಂಬೈನಲ್ಲಿ ಇಬ್ಬರು, ಬೆಂಗಳೂರು ಮತ್ತು ಹೈದರಾಬಾದ್‍ನಲ್ಲಿ ತಲಾ ಒಬ್ಬರನ್ನು ಪ್ರತ್ಯೇಕ ಕೋಣೆಯಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಇನ್ನು ಕೊರೋನಾ ಸೋಂಕು ಭಾರತದಲ್ಲಿ ಹರಡದಂತೆ ಮುನ್ನೆಚರಿಕೆ ವಹಿಸಿರುವ ಸರ್ಕಾರ ಸುಮಾರು 20 ಸಾವಿರ ಪ್ರಯಾಣಿಕರ ತಪಾಸಣೆ ನಡೆಸಿದೆ.

ಇನ್ನು ಕೊರೋನಾ ವೈರಸ್ ಒಬ್ಬ ಮನುಷ್ಯನಿಂದ ಮತ್ತೊಬ್ಬನಿಗೆ ಹರಡುತ್ತದೆ. ಶೀನು ಮತ್ತು ಕೆಮ್ಮುವಿನ ಗಾಳಿಯಿಂದ ಸೋಂಕು ತಗಲುತ್ತದೆ ಸೋಂಕು ತಗುಲಿದ ವ್ಯಕ್ತಿಯ ಜೊತೆಗೆ ದೈಹಿಕ ಸಂಪರ್ಕ ಮಾಡಬಾರದು , ವೈರಸ್ ಇರುವ ವಸ್ತುವನ್ನು ಮುಟ್ಟಬಾರದು,. ಈ ಸೋಂಕು ಚಿಕ್ಕ ಮಕ್ಕಳಿಗೆ ಅತೀ ಬೇಗ ಹರುಡುತ್ತದೆ.

Exit mobile version