ಭಾರತದಲ್ಲಿ ಕೊರೋನಾ ಸೋಂಕು ಇಳಿಮುಖ

ನವದೆಹಲಿ, ನ. 17: ಕೊರೋನಾದಿಂದ ತೀವ್ರ ಕಂಗಲಾಗಿರುವ ಭಾರತೀಯರಿಗೆ ಇದೀಗ ನಿಟ್ಟುಸಿರು ಬಿಡುವಂತಾಗಿದೆ. ದೇಶದಲ್ಲಿ ಡೆಡ್ಲಿ ಕೋವಿಡ್-19 ವೈರಸ್‍ ಆರ್ಭಟ ಗಮನಾರ್ಹ ಇಳಿಮುಖದ ಸೂಚನೆಗಳು ಕಂಡುಬರುತ್ತಿದ್ದು, ದಿನನಿತ್ಯದ ಪಾಸಿಟಿವ್ ಕೇಸ್, ಸಾವು ಮತ್ತು ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಗಮನಾರ್ಹವಾಗಿ ಇಳಿಮುಖವಾಗುತ್ತವೆ. ನಾಲ್ಕು ತಿಂಗಳ ನಂತರ ಇದೇ ಮೊದಲ ಬಾರಿಗೆ ದಿನನಿತ್ಯದ ಸೋಂಕು ಪ್ರಕರಣಗಳು 30,000ಕ್ಕಿಂತ ಕಡಿಮೆ ವರದಿಯಾಗಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಸಕ್ರಿಯ ಪ್ರಕರಣಗಳಲ್ಲಿ ದಿನ 5 ಲಕ್ಷಕ್ಕಿಂತ ಕಡಿಮೆಗೆ ಇಳಿದಿದೆ. ಅಲ್ಲದೇ ಇದೇ ವೇಳೆ ಭಾರತದಲ್ಲಿನ ಒಟ್ಟು ಕೋವಿಡ್-19 ರೋಗಿಗಳ ಸಂಖ್ಯೆ89 ಲಕ್ಷದಾಟಿದ್ದು, ಈವರೆಗೆ 1.30ಲಕ್ಷಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ.

 83.90ಲಕ್ಷಕ್ಕೂ ಹೆಚ್ಚು ರೋಗಿಗಳು ಗುಣಮುಖರಾಗಿ/ಚೇತರಿಸಿಕೊಂಡು ಸಾವಿನ ಬಲೆಯಿಂದ ಪಾರಾಗಿದ್ದಾರೆ. ಇಂದು ಬೆಳಗ್ಗೆ ಕೊನೆಗೊಂಡ 24 ತಾಸುಗಳ ಅವಧಿಯಲ್ಲಿ29,163 ಪಾಸಿಟಿವ್ ಕೇಸ್‍ ಮಾತ್ರ ವರದಿಯಾಗಿದೆ. . ನಾಲ್ಕು ತಿಂಗಳ ಬಳಿಕ ದಿನಂಪ್ರತಿ ಹೊಸ ಸೋಂಕು ಪ್ರಕರಣಗಳು 30,000ಕ್ಕಿಂತ ಕಡಿಮೆ ಇಳಿದಿರುವುದು ಇದೇ ಮೊದಲು. ಜುಲೈ 15ರಂದು 29,429 ಡೈಲಿ ಪಾಸಿಟಿವ್ ಕೇಸ್ ವರದಿಯಾಗಿತ್ತು.

ದಿನನಿತ್ಯದ ಸಾವು ಪ್ರಕರಣದಲ್ಲೂ ಇಳಿಕೆ ಕಂಡು ಬಂದಿದ್ದು, 24 ತಾಸುಗಳ ಅವಧಿಯಲ್ಲಿ449 ರೋಗಿಗಳು ಸಾವಿಗೀಡಾಗಿದ್ದಾರೆ. ಇವುಗಳ ನಡುವೆಯೂ ದೇಶದಲ್ಲಿ ಸೋಂಕಿತರ ಪ್ರಮಾಣ 88.74ಲಕ್ಷದಾಟಿರುವುದು ಜನರಲ್ಲಿ ಆತಂಕ ಮುಂದುವರಿಯುವಂತೆ ಮಾಡಿದೆ. ಈವರೆಗೆ ಗುಣಮುಖರಾದ ರೋಗಿಗಳ ಸಂಖ್ಯೆ82.90 ಲಕ್ಷದಾಟಿದೆ. ಚೇತರಿಕೆ ಪ್ರಮಾಣ ಶೇ.93.42ರಷ್ಟು ಏರಿಕೆ ಮತ್ತು ಸಾವಿನ ಪ್ರಮಾಣ ಶೇ.1.47ರಷ್ಟುತಗ್ಗಿದ್ದು, ಜನರಲ್ಲಿ ನಿರಾಳತೆ ಮೂಡಿಸಿದೆ.

ದೇಶದಲ್ಲಿ ಮೃತರಸಂಖ್ಯೆ1,30,519ದಾಟಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ. ನಾಳೆ ವೇಳೆಗೆ 1.31ಲಕ್ಷ ದಾಟುವ ಸಾಧ್ಯತೆ ಇದೆ. ಭಾರತದಲ್ಲಿ ಒಟ್ಟು ರೋಗಿಗಳ ಸಂಖ್ಯೆ88,74,290ರಷ್ಟಿದ್ದು, ನಾಳೆ ವೇಳೆಗೆ 88.75 ಲಕ್ಷದಾಟುವ ಸಂಭವಉಂಟು. ಆಗಸ್ಟ್ 7ರಂದು 20 ಲಕ್ಷ ಇದ್ದ ಪಾಸಿಟಿವ್ ಪ್ರಕರಣಗಳು ಆ.23ಕ್ಕೆ 30 ಲಕ್ಷಕ್ಕೇರಿತ್ತು.ನಂತರ ಸೆಪ್ಟೆಂಬರ್ 5ರಂದು 40 ಲಕ್ಷದಾಟಿತ್ತು. ಕೇವಲ 11 ದಿನಗಳಲ್ಲಿ ಅಂದರೆ ಸೆ.16ರಂದು 50 ಲಕ್ಷದಾಟಿದೆ. ಸೆ.28ರಂದು 60 ಲಕ್ಷ ಮೀರಿದೆ.

ಅ.11ರಂದು 70 ಲಕ್ಷತಲುಪಿದೆ. ಅ.29ರಂದು 80 ಲಕ್ಷಮುಟ್ಟಿದೆ ಇನ್ನೆರಡು ದಿನಗಳಲ್ಲಿ 90 ಲಕ್ಷಕ್ಕೇರುವ ಆತಂಕವಿದೆ. ಸಕ್ರಿಯ ಪ್ರಕರಣಗಳಲ್ಲಿ ನಿರಂತರ ಇಳಿಕೆ ಕಂಡುಬಂದಿದ್ದು, ಸತತಏಳನೆ ದಿನ 5 ಲಕ್ಷಕ್ಕಿಂತ ಕಡಿಮೆ ಆಕ್ಟೀವ್ ಕೇಸ್‍ಗಳು ವರದಿಯಾಗಿವೆ. 24 ತಾಸುಗಳಲ್ಲಿ 4,53,401ಕ್ಕೆ ಇಳಿದಿದೆ. ಇದು ಆಶಾದಾಯಕವಾದ ಬೆಳವಣಿಗೆಯಾಗಿದೆ.

Exit mobile version