ಭಾರತ ಮೊದಲ ಭಾರಿಗೆ ವಿಶ್ವಕಪ್ ಮುಡಿಗೇರಿಸಿಕೊಂಡ ದಿನ ಇಂದು

ಭಾರತ ಕ್ರಿಕೆಟ್ ಪಾಲಿಗೆ ಎಂದಿಗೂ ಮರೆಯಲಾಗದ ದಿನ ಈ ಜೂ.25. ಮೊದಲ ಭಾರಿಗೆ ಭಾರತ ಏಕದಿನ ಕ್ರಿಕೆಟ್ ವಿಶ್ವಕಪ್ ಗೆದ್ದ ಸಾಧನೆ ಮಾಡಿದ್ದು ಇದೇ ದಿನ. 1983 ಜೂನ್ 25 ಈ ದಿನವನ್ನು ಕ್ರಿಕೆಟ್ ಪ್ರಿಯರು ಎಂದು ಮರೆದ ದಿನ ಎಂದರೆ ತಪ್ಪಾಗಲಾರದು.
ಇಂದಿಗೆ 37 ವರ್ಷಗಳ ಹಿಂದೆ ಇದೇ ದಿನ ಯಾರು ಕೂಡ ನಿರೀಕ್ಷೆಮಾಡದ ಸಾಧನೆಯನ್ನು ನಮ್ಮ ಭಾರತ ಕ್ರಿಕೆಟ್ ತಂಡ ಸಾಧಿಸಿತ್ತು. ಮೊದಲು ಎರಡು (1975-1979) ಪಂದ್ಯಗಳಲ್ಲಿ ಚಾಂಪಿಯನ್ ಶಿಪ್ ಪಡೆದಿದ್ದ ವೆಸ್ಟ್ ಇಂಡೀಸ್ ಸತತವಾಗಿ ಮೂರನೇ ಭಾರಿಗೆ ಚಾಂಪಿಯನ್ ಶಿಪ್ ಪಡೆಯುವ ತವಕದಲ್ಲಿತ್ತು ಜತೆಗೆ ಪಂದ್ಯವನ್ನು ತಮ್ಮದಾಗಿಸಿಕೊಂದು ಪ್ರಶಸ್ತಿಯನ್ನು ತನ್ನಾದಾಗಿಸಿಕೊಳ್ಳುವ ನಿರೀಕ್ಷೆಯಲ್ಲಿತ್ತು. ಆದರೆ ಅಂದು ಲಾರ್ಡ್ ಕ್ರೀಡಾಂಗಣದಲ್ಲಿ ನಡೆದದ್ದೆ ಬೇರೆ. ವೆಸ್ಟ್ ಇಂಡೀಸ್ ತಂಡದ ಕನಸ್ಸು ಈಡೇರಲೆ ಇಲ್ಲ 1983 ರ ಕಪಿಲ್ ದೇವ್ ಭಾರತ ಕ್ರಿಕೆಟ್ ತಂಡ ಅಂದು ವೆಸ್ಟ್ ಇಂಡೀಸ್ ಆಸೆಯನ್ನು ನುಚ್ಚು ನೂರು ಮಾಡಿತ್ತು. ಭಾರತ ತಂಡ ಫೈನಲ್ ಪಂದ್ಯದಲ್ಲಿ ವಿಂಡೀಸ್ ತಂಡವನ್ನು 43 ರನ್‍ಗಳಿಂದ ಸೋಲಿಸಿ ಪ್ರಶಸ್ತಿಯನ್ನು ತನ್ನದಾಗಿಸಕೊಂಡಿತ್ತು
ಅಂದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ಭಾರತ 54.4 ಓವರ್‍ಗಳಲ್ಲಿ ಕೇವಲ 183 ರನ್‍ಗಳಿಸಿ ಅಲೌಟ್ ಆಗಿತ್ತು. ಎಸ್. ಶ್ರೀಕಾಂತ್ 38, ಮೋಹಿಂದರ್ ಅಮರ್‍ನಾಥ್ 26, ಸಂದೀಪ್ ಪಾಟೀಲ್ 27 ರನ್ ಗಳಿಸಿದ್ದು ಬಿಟ್ಟರೆ ಉಳಿದ ಆಟಗಾರರು ಸಾಮಥ್ರ್ಯಕ್ಕೆ ತಕ್ಕ ಆಟವಾಡಿರಲಿಲ್ಲ. ಕೇವಲ 183 ರನ್‍ಗಳ ಸುಲಭ ರನ್ ಬೆನ್ನಟ್ಟಿದ್ದ ವಿಂಡೀಸ್ ಸುಲಭವಾಗಿ ಪಂದ್ಯ ಗೆಲ್ಲುವ ಆಸೆಯಲ್ಲಿ ಮೈದಾನಕ್ಕೆ ಇಳಿದಿತ್ತು. ಆದರೆ ವಿಂಡೀಸ್ 12 ಓವರ್‍ಗಳಲ್ಲಿ ಮೂರು ವಿಕೆಟ್‍ಅನ್ನು ಮದನ್ ಲಾಲ್ ಪಡೆದರೆ, ಮತ್ತೆ ಏಳು ಓವರ್‍ಗಳಲ್ಲಿ ಮೂರು ವಿಕೆಟ್‍ಗಳನ್ನು ಅಮರ್‍ನಾಥ್ ಪಡೆದರು. ಇನ್ನುಳಿದ ವಿಕೆಟ್‍ಗಳನ್ನು ಬಲ್ವಿಂದರ್ ಸಂದು ಎರಡು ಮತ್ತು ಕಪಿಲ್, ರೋಜರ್ ಬನ್ನಿ ಹಂಚಿಕೊಂಡಿದ್ದರು. ಹೀಗಾಗಿ ವಿಂಡೀಸ್‍ನ ಕ್ಲೈವ್ ಲಾಯ್ಡ್ ತಂದ 52 ಓವರ್‍ಗಳಲ್ಲಿ 140 ರನ್‍ಗಳಿಸಿ ಆಲೌಟ್ ಆಗಿ ಸೋಲು ಒಪ್ಪಿಕೊಂಡಿತ್ತು.
ಅತೀ ಉತ್ಸಾಹ ಮತ್ತು ಮೂರನೇ ಭಾರಿಗೆ ಪ್ರಶಸ್ತಿ ಮುಡಿಗೆರಿಸಿಕೊಳ್ಳುವ ಆಸೆಯಲ್ಲಿದ್ದ ಕನಸು ನುಚ್ಚು ನೂರು ಮಾಡಿ ಭಾರತ ಹೊಸದೊಂದು ಸಾಧನೆ ಮಾಡಿತು. ಇತಿಹಾಸದ ಪುಟದಲ್ಲಿ ಹೊಸ ದಾಖಲೆಯ ದಿನವನ್ನು ಅಂದು ಬರೆದಿತ್ತು.ಜತೆಗೆ ಭಾರತ ಕ್ರಿಕೆಟ್ ತಂಡ ಮೂರನೇ ವಿಶ್ವಕಪ್ ಪ್ರಶಸ್ತಿಯನ್ನು ತನ್ನ ಮುಡಿಕೆರಿಸಿಕೊಳ್ಳುತ್ತದೆ ಎಂದು ಯಾರೂ ಕೂಡ ನಿರೀಕ್ಷೆಯನ್ನು ಅಹ ಮಾಡಿರಲಿಲ್ಲ. ಆದರೆ ಕಪಿಲ್ ದೇವ್ ನೇತೃತ್ವದ ಭಾರತ ಕ್ರಿಕೆಟ್ ತಂಡ ಪ್ರಶಸ್ತಿ ಗೆದ್ದು ಜಗತ್ತನ್ನು ನಿಬ್ಬೆರಗಾಗುವಂತೆ ಮಾಡಿತ್ತು. ಕಪಿಲ್ ದೇವ್ ನೇತೃತ್ವದ ತಂಡ ಕ್ರಿಕೆಟ್ ಲೋಕದಲ್ಲೇ ಹೊಸದೊಂದು ದಾಖಲೆಯನ್ನು ನೀಡಿತ್ತು. ಆಲ್‍ರೌಂಡ್ ಪ್ರದರ್ಶನ ನೀಡಿದ್ದ ಮೋಹಿಂದರ್ ಅಮರ್‍ನಾಥ್ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಮೂರನೇ ವಿಶ್ವಕಪ್ ಪ್ರಶಸ್ತಿ ಗೆದ್ ಬಳಿಕ ದೇಶದಲ್ಲಿ ಕ್ರಿಕೆಟ್ ಹೆಚ್ಚು ಜನಪ್ರಿಯ ಕ್ರೀಡೆಯಾಗಿ ಬೆಳೆಯಿತು. ಒಟ್ಟಾರೆ ಕ್ರಿಕೆಟ್ ಇಂದು ಕ್ರೀಡಾಪ್ರಿಯರ ಮನದಲ್ಲಿ ಅಚ್ಚಳಯದೆ ದಿನ. ಅಂದಿನಿಂದ ಇಂದಿನವರೆಗೆ ಕ್ರಿಕೆಟ್ ಅಷ್ಟೆ ಜನಪ್ರಿಯತೆಯನ್ನು ಕಾಯ್ದುಕೊಂಡು ಬಂದಿದೆ.

Exit mobile version