ಭೂ ಸುಧಾರಣೆ ಕಾಯ್ದೆ‌ ರದ್ದುಗೊಳಿಸಲು ಆಗ್ರಹಿಸಿ ಅಣುಕು ಶವಯಾತ್ರೆ

ಮೈಸೂರು, ಡಿ. 24: ರೈತರಿಗೆ ಮರಣ ಶಾಸನವಾಗಿರುವ ಭೂಸುಧಾರಣೆ ಕಾಯ್ದೆ ರದ್ದುಗೊಳಿಸಲು ಒತ್ತಾಯಿಸಿ ಸ್ಮಶಾನದಲ್ಲಿ ಧರಣಿ ಹಾಗೂ ಅಣುಕು ಶವಯಾತ್ರೆ ಮೂಲಕ ವಿಭಿನ್ನ‌ ಪ್ರತಿಭಟನೆ ನಡೆಸಲಾಯಿತು.
 
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ವತಿಯಿಂದ ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಸ್ಮಶಾನದಲ್ಲಿ ರೈತ ವಿರೋಧಿ ಕಾಯ್ದೆ ಜಾರಿಯಾದರೇ ರೈತರ ಬದುಕು ಹೀಗೆ ಸ್ಮಶಾನ ಸೇರಲಿದೆ ಎಂಬುದನ್ನ ಅಣುಕು ಶವಯಾತ್ರೆ ಮೂಲಕ ಸರ್ಕಾರದ ವಿರುದ್ಧ ವಿನೂತನ ಪ್ರತಿಭಟನೆ ನಡೆಸಲಾಯಿತು.

ಇದೇ ಸಂದರ್ಭದಲ್ಲಿ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮು ಮಾತನಾಡಿ, ಕೇಂದ್ರ ಸರ್ಕಾರ ಭೂ ಸುಧಾರಣೆ ಕಾಯ್ದೆ, ಎಪಿಎಂಸಿ ಕಾಯ್ದೆ ಜಾರಿಗೆ ಮುಂದಾಗಿದೆ. ಈ ಕಾಯ್ದೆ ರೈತರಿಗೆ ಮರಣ ಶಾಸನವಾಗಿವೆ. ದೆಹಲಿಯಲ್ಲಿ ಕಳೆದ 27 ದಿನಗಳಿಂದ ರೈತರು ಬೀದಿಯಲ್ಲಿ ಕುಳಿತು ಪ್ರತಿಭಟಿಸುತ್ತಿದ್ದಾರೆ. ಪ್ರತಿಭಟನೆ ಹತ್ತಿಕ್ಕುವ ಪ್ರಯತ್ನವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ.

ಈ ಕಾಯ್ದೆಗಳು ಜಾರಿಗೆ ಬಂದರೆ ರೈತರು ಸ್ಮಶಾನ ಸೇರುವುದು ಖಚಿತ.ರೈತರ ಬದುಕು ಹೇಗೆ ನಾಶವಾಗುತ್ತದೆ ಎಂದು ಈ ಅಣುಕು ಶವಯಾತ್ರೆ ಮಾಡಿದ್ದೇವೆ. ಸರ್ಕಾರ ಈಗಲಾದರೂ ಈ ಕಾಯ್ದೆಗಳನ್ನ ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸಾಹಿತಿ ಪ್ರೊ.ಕೆ.ಎಸ್. ಭಗವಾನ್, ಮೂಗೂರು ನಂಜಂಡಸ್ವಾಮಿ, ಪವನ್, ಪ್ರಗತಿಪರ ಚಿಂತಕರು ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ಸದಸ್ಯರು ಭಾಗವಹಿಸಿದ್ದರು.

Exit mobile version