ಮತ್ತೆ ಲಾಕ್ ಆಗುತ್ತಾ ಕರ್ನಾಟಕ?

Basavaraj bommai

ಬೆಂಗಳೂರು: ಎಷ್ಟೇ ಕಠಿಣ ನಿಯಮಗಳನ್ನು ರಾಜ್ಯದಲ್ಲಿ ಜಾರಿ ಮಾಡಿದ್ದರೂ  ಕೋವಿಡ್ ಸೋಂಕು ಮುಂದುವರೆಯುತಿದ್ದು, ಮುಖ್ಯಮಂತ್ರಿ ಬಸವರಾಜ  ಬೊಮ್ಮಾಯಿ ಅವರು ಈ ಕುರಿತು ಇಂದು ಸಂಜೆ ಸಭೆ ಕರೆದಿದ್ದಾರೆ. ಹಾಗೂ ಇಂದಿನ ಸಭೆಯಲ್ಲಿ ಆರೋಗ್ಯ ಸಚಿವರಾದ ಡಾ.ಕೆ. ಸುಧಾಕರ, ಕಂದಾಯ ಸಚಿವರಾದ ಆರ್. ಅಶೋಕ್ ಮತ್ತು ಕೋವಿಡ್ ತಾಂತ್ರಿಕಾರಾದ ಎಲ್ಲಾ ಸದಸ್ಯರು ಭಾಗಿಯಾಗಲಿದ್ದಾರೆ.

ಜ.19ರವರೆಗು ವಿಧಿಸಲಾಗಿದ್ದ ನಿರ್ಬಂಧಗಳು ಅಂತ್ಯವಾಗಲಿದ್ದು ಹೊಸ ನಿರ್ಬಂಧಗಳನ್ನು ಜಾರಿ ಮಾಡಲು ಇಂದು ಸಭೆ ನಡೆಸುತಿದ್ದಾರೆ. ಎಲ್ಲಾ ರಾಜ್ಯಗಳ ಕೋವಿಡ್ ಸ್ಧಿತಿ ಬಗ್ಗೆ ಸಿಎಂ ವರದಿ ಪೆಡೆಯಲಿದ್ದಾರೆ. ಆ ವರದಿಯನ್ನು ಪರೀಕ್ಷಿಸಿ ನೈಟ್ ಕರ್ಪ್ಯೂ  ವೀಕೆಂಡ್ ಕರ್ಪ್ಯೂ ಮತ್ತು ಹಲವು ಕಠಿಣ ನಿಯಮಗಳನ್ನು ಜಾರಿಗೊಳಿಸುವ ಬಗ್ಗೆ ಚರ್ಚೆ ನಡೆಯುವ ಎಲ್ಲ ಸಾಧ್ಯತೆಗಳಿವೆ.

ಕೋವಿಡ್ ಹೆಚ್ಚುತ್ತಿರುವ ಕಾರಣ ಸಿನಿಮಾ ಮಂದಿರ, ರೆಸ್ಟೋರೆಂಟ್ ಮತ್ತು ಜನ ಸಮಾನ್ಯರು ಹೆಚ್ಚು ಸೇರುವ ಕಡೆ ಶೇ.50ರ ನಿಯಮ ಜಾರಿ ಮಾಡಬಹುದು. ಮದುವೆ ಸಮಾರಂಭಗಳಿಗೆ ಕಮ್ಮಿ  ಜನ ಮಿತಿ ಹೇರಲಾಗಿದೆ. ಮೂರನೇ ಅಲೆ ಮಕ್ಕಳಲ್ಲಿ ಹೆಚ್ಚುಗಿ ಕಂಡು ಬರುತ್ತಿರುವ ಕಾರಣ ಆನ್ ಲೈನ್ ಕ್ಲಾಸ್ ನಡೆಸಲು ಸರ್ಕಾರ ಚಿಂತನೆ ಮಾಡುತ್ತಿದು ಶಾಲೆ ಬಂದ್ ಮಾಡುವ ಚರ್ಚೆ ಸರ್ಕಾರ ನಡೆಸುತ್ತಿದೆ.

ವೀಕೆಂಡ್ ಕರ್ಪ್ಯೂ, 50-50 ರೂಲ್ಸ್ ಅಂತಹ ಕಠಿಣ ನಿಯಮಗಳನ್ನು ಜಾರಿ ಮಾಡಿದ್ದರೂ ಕೋವಿಡ್ ಸೋಂಕು ಹೆಚ್ಚುತ್ತಲೇ ಇದೆ.ಇದು ಆತಂಕ ಮೂಡಿಸಿದೆ. ಆದರಿಂದ ಇನ್ನಷ್ಟು ಕಠಿಣ ನಿಯಮಗಳ ಅಗತ್ಯವಿದೆ. ಈ ವಿಷಯದ ಕುರಿತು ಇದು ಮಹತ್ವದ ಚರ್ಚೆ ನಡೆಯಲಿದೆ ಮತ್ತು ಲಾಕ್ ಡೌನ್ ಮಾಡುವುದ ಬೇಡ ಎಂದು ಚರ್ಚೆ ನಡೆಸಿ ಕ್ರಮ ಕೈಗೊಳುವ ಸಾಧ್ಯತೆಯಿದೆ.

Exit mobile version