ಮತ್ತೆ ಸಿನಿಪ್ರೇಕ್ಷಕರನ್ನು ಹಿಡಿದಿರಿಸಿದ ಆಕ್ಟ್ ೧೯೭೮ ಸಿನಿಮಾ

ಆಕ್ಟ್ ೧೯೭೮… ಸ್ಯಾಂಡಲ್ ವುಡ್ ನಲ್ಲಿ ಸೆನ್ಸೆಷನ್ ಕ್ರಿಯೇಟ್ ಮಾಡಿದ ಸಿನಿಮಾ .. ಕಳೆದ ವರ್ಷ ಸೆಟ್ಟೇರಿದ ಈ ಚಿತ್ರ ಕೊರೋನಾ ಹಾವಳಿಯ ನಡುವೆಯೂ ಎಂಟು ತಿಂಗಳ ನಂತರ ಇಂದು ತೆರೆಗೆ ಬಂದಿದೆ ಡಿ. ಕ್ರಿಯೇಷನ್ಸ್ ಲಾಂಛನದಡಿಯಲ್ಲಿ ನಿರ್ಮಾಣವಾಗಿರೋ ಈ ಚಿತ್ರ ಸಾಕಷ್ಟು ಕ್ಯುರ್ಯಾಸಿಟಿಗಳನ್ನು ಹುಟ್ಟಿಸಿದ್ದು ನೈಜ್ಯತೆಗೆ ಹತ್ತಿರವಾಗಿರೋ ಸಿನಿಮಾ ಇದಾಗಿದೆ. ಈಗಾಗಲೇ ಚಿತ್ರದ ಟ್ರೈಲರ್ ನ್ನು ಪುನೀತ್ ರಾಜ್ ಕುಮಾರ ರಿಲೀಸ್ ಮಾಡಿದ್ದು ಟ್ರೈಲರ್ ಮೂಲಕ ಸಿಕ್ಕಾ ಪಟ್ಟೆ ಸಿನಿಮಾ ಹೈಪ್ ಕ್ರಿಯೇಟ್ ಮಾಡಿದೆ .

ಆಕ್ಟ್ ೧೯೭೮ ಸಿನಿಮಾ ಮಹಿಳಾ ಆಧಾರಿತ ಸಿನಿಮಾ ಅನ್ನೋದು ಪಕ್ಕಾ ಗೊತ್ತಾಗಿದ್ದು, ಸರಕಾರಿ ಕಛೇರಿಯ ಸುತ್ತ ನಡೆಯೋ ಸನ್ನಿವೇಶಗಳೇ ಚಿತ್ರದ ಮುಖ್ಯ ಕಥೆಯಾಗಿದೆ . ಚಿತ್ರದಲ್ಲಿ ಪ್ರಜ್ಞಾ ಶೆಟ್ಟಿ ಗರ್ಭೀಣಿಯಾಗಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ ..

ಚಿತ್ರದ ಟ್ರೈಲರ್ ನೋಡ್ತಾ ಇದ್ರೆ ಸರಕಾರಿ ಕಛೇರಿಯನ್ನು ಯಜ್ಞಾ ಶೆಟ್ಟಿ ಹೈಜಾಕ್ ಮಾಡಿ ತನ್ನ ನ್ಯಾಯದ ಪರ ಹೋರಾಡೋ ಕಥೆ ಅನ್ನೋದು ಇಲ್ಲಿ ಗೊತ್ತಾಗ್ತಾ ಇದೆ .. ಈಗಾಗಲೇ ಚಿತ್ರದ ಬಗ್ಗೆ ಸಾಕಷ್ಟು ಮೆಚ್ಚುಗೆಯ ಮಾತುಗಳು ಹೊರ ಬರ್ತಾ ಇದ್ದು ಆಕ್ಟ್ ೧೯೭೮ ಏನೆಂಬುದು ಇಲ್ಲಿ ಹೈಲೆಟ್ ಆಗಿದೆ .

ಆಕ್ಟ್ ೧೯೭೮ ಸಿನಿಮಾಕ್ಕೆ ಅರಿವು ಖ್ಯಾತಿಯ ಮಂಸೋರೆ ಆಕ್ಷನ್ ಕಟ್ ಹೇಳಿದ್ದು , ಸಿನಿಪ್ರೇಕ್ಷಕರನ್ನು ಮತ್ತೆ ಚಿತ್ರಂದಿರದಲ್ಲಿ ಹಿಡಿದಿಡುವಲ್ಲಿ ನಿರ್ದೇಶಕ ಮಂಸೋರೆ ಯಶಸ್ವಿಯಾಗಿದ್ದಾರೆ.

Exit mobile version