ಮುಹೂರ್ತ ಶ್ರೀಕೃಷ್ನ@gmail.com

ಐರಾವತ, ವಿರಾಟ್, Mr420,ಪ್ರಿನ್ಸ್ ಮುಂತಾದ ಹಲವಾರು ಅಧ್ಬುತ ಸಿನಿಮಾಗಳನ್ನ ನಿರ್ಮಿಸಿರುವವರು ಸಂದೇಶ್ ನಾಗರಾಜ್. ಇದೀಗ ಅವರ ಸಂದೇಶ್ ಪ್ರೊಡಕ್ಷನ್ಸ್ ಮೂಲಕ ಲವ್ ಮಾಕ್ ಟೈಲ್ ನ ಡಾರ್ಲಿಂಗ್ ಕೃಷ ರವರ ಹೊಸ ಚಿತ್ರ ಶ್ರೀಕೃಷ್ನ@gmail.comನನ್ನು ನಿರ್ಮಾಣ ಮಾಡುತ್ತಿದ್ದಾರೆ. ಇದರ ಮುಹೂರ್ತ ಶುಕ್ರವಾರ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ರವರ ಸ್ಟುಡಿಯೋದಲ್ಲಿ ಅಧೂರಿಯಾಗಿ  ನಡೆಯಿತು.

ಸಂಜು ವೆಡ್ಸ ಗೀತಾ, ಮಾಸ್ತಿಗುಡಿ ಚಿತ್ರದ ನಿರ್ದೇಶಕ  ನಾಗಶೇಕರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ. ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಈ ಚಿತ್ರಕ್ಕೆ  ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಅರುಣ್ ಸಾಗರ್ ಚಿತರ್ದ ಕಲಾ ನರ್ದೇಶಕನಾಗಿ ಕೆಲಸ ಮಾಡುತ್ತಿದ್ದಾರೆ.  ಇನ್ನು ಚಿತ್ರದ ನಾಯಕಿ ಹಾಗು ಉಳಿದವರ ಆಯ್ಕೆ ನಡೆಸಿಲ್ಲ ಎಂದು ಚಿತ್ರದ ನಿರ್ದೇಶಕರು ತಿಳಿಸಿದ್ದಾರೆ.

ಚಿತ್ರದ ಮೊದಲ ಸನ್ನಿವೇಶವನ್ನು ಗಾನ ಗಂಧರ್ವ ಡಾ. ರಾಜ್ ಕುಮಾರ್ ರವರ ಭಾವ ಚಿತ್ರದ ಮಂದೆ ಸೆರೆಹಿಡಿಯಲಾಯಿತು. ಚಿತ್ರದ ಮುಹರ್ತಕ್ಕೆ , ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ನಿರ್ದೇಶಕ ನಾಗಶೇಕರ್, ನಿರ್ಮಾಪಕ ಸಂದೇಶ್ ನಾಗರಾಜ್ ನಟ ಡಾರ್ಲಿಂಗ್ ಕೃಷ್ಣ, ಛಾಯಗ್ರಾಹಕ ಸತ್ಯ ಹೆಗಡೆ, ಲವ್ ಮಾಕ್ ಟೈಲ್  ಬೆಡಗಿ ಮಿಲನಾ ನಾಗರಾಜ್ ಸೇರಿ ಹಲವು ಚಿತ್ರೋದ್ಯಮಿಗಳು ಭಾಗಿಯಾಗಿದ್ದರು.

Exit mobile version