ಮೈಸೂರು ಮಂಗಳೂರು ವಿಮಾನ ಸೇವೆ ಆರಂಭ

ಮೈಸೂರು, . 16: ಅ. 25ರಿಂದ ಮಂಗಳೂರಿನಿಂದ ಮೈಸೂರಿಗೆ ವಿಮಾನ ಸೇವೆ ಪ್ರಾರಂಭಿಸಲು ಏರ್ ಇಂಡಿಯಾ ತೀರ್ಮಾನಿಸಿದ್ದು, ಏರ್ ಇಂಡಿಯಾ ಬೆಂಗಳೂರಿನಿಂದ ಮಂಗಳೂರಿಗೆ ಬೆಳಿಗ್ಗೆ 6.50ಕ್ಕೆ ಬರುವ ವಿಮಾನವೇ ಮೈಸೂರಿನ ಕಡೆ ಸಂಚರಿಸಲಿದೆ ಎಂದು ತಿಳಿಸಿದೆ.

ಮಂಗಳೂರಿಗೆ ತಲುಪಲಿರುವ ವಿಮಾನವು ಬೆಳಿಗ್ಗೆ 7.55ಕ್ಕೆ ಮೈಸೂರಿನಿಂದ ಹೊರಟು ಬೆಳಿಗ್ಗೆ 8.50ಕ್ಕೆ ಮಂಗಳೂರು ತಲುಪಲಿದೆ. ರಸ್ತೆ ಮತ್ತು ರೈಲು ಮೂಲಕ ಸಂಪರ್ಕ ಹೊಂದಿರುವ ಈ ಎರಡು ನಗರಗಳ ನಡುವೆ ವಿಮಾನ ಸೇವೆ ಪ್ರಾರಂಭಿಸುವಂತೆ ಲೋಕಸಭಾ ಸದಸ್ಯ ಪ್ರತಾಪ್ ಸಿಂಹ ಹಾಗೂ ಕೆಲ ಕೈಗಾರಿಕೋದ್ಯಮಿಗಳು ವೈಮಾನಿಕ ಸಂಸ್ಥೆಗೆ ಮನವಿ ಮಾಡಿಕೊಂಡಿದ್ದರು ಎಂದು ತಿಳಿದು ಬಂದಿದೆ.

Exit mobile version