ರಣಾವತ್ ಸಹೋದರಿಯರ ಮೇಲೆ ಎಫ್‌ಐಆರ್ ದಾಖಲೆ

ನವದೆಹಲಿ, ಅ. 17: ಸಮುದಾಯಗಳ ನಡುವೆ ಬಿರುಕು ಮೂಡಿಸಲು ಸಾಮಾಜಿಕ ಜಾಲತಾಣದ ಮೂಲಕ ಯತ್ನಿಸಿದ ಆರೋಪದಡಿ ನಟಿ ಕಂಗನಾ ರಣಾವತ್ ಮತ್ತು ಆಕೆಯ ಸಹೋದರಿ ರಂಗೋಲಿ ಚಾಂದೇಲ್ ವಿರುದ್ಧ ಬಾಂದ್ರಾ ಮ್ಯಾಜಿಸ್ಟ್ರೇಟ್ ಮೆಟ್ರೋಪಾಲಿಟನ್ ಕೋರ್ಟ್, ಪೊಲೀಸ್ ದೂರು ದಾಖಲಿಸಲು ಆದೇಶಿಸಿದೆ.   

ಬಾಂದ್ರಾದ ಮ್ಯಾಜಿಸ್ಟ್ರೇಟ್ ಕೋರ್ಟ್ ಬಾಲಿವುಡ್ ನಟಿ ಕಂಗನಾ ರಣಾವತ್‌ ಮತ್ತು ಸಹೋದರಿ ರಂಗೋಲಿ ಚಾಂದೇಲ್ ವಿರುದ್ಧ ಎಫ್ಐಆರ್ ದಾಖಲಿಸಲು ಮುಂದಾಗಿದ್ದು, ಟ್ವೀಟ್ ಮೂಲಕ ದ್ವೇಷ ಮತ್ತು ಕೋಮು ಗಲಭೆ ಸೃಷ್ಟಿಸಲು ಯತ್ನಿಸುತ್ತಿದೆ ಎಂದು ದೂರನ್ನು ಆಧರಿಸಿ ಎಫ್ಐಆರ್ ದಾಖಲಿಸಲು ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಜೇಡಿಯೋ ಖುಲೆ ಆದೇಶಿಸಿದೆ. ಕಾಸ್ಟಿಂಗ್ ಡೈರೆಕ್ಟರ್ ಮತ್ತು ಫಿಟ್ನೆಸ್ ಟ್ರೈನರ್ ಮುನ್ನಾವಲಿ ಸಯ್ಯದ್ ಈ ದೂರು ದಾಖಲಿಸಿದ್ದಾರೆ. ಭಾರತೀಯ ದಂಡ ಸಂಹಿತೆ 34 ಸೆಕ್ಷನ್ 153ಎ, 295ಎ, 124 ರ ಅಡಿಯಲ್ಲಿ ಸಹೋದರಿಯರನ್ನು ಬುಕ್ ಮಾಡುವಂತೆ ಸಯ್ಯದ್ ದೂರಿನಲ್ಲಿ ಮನವಿ ಮಾಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.  

Exit mobile version