ರಾಜ್ಯದಲ್ಲಿ ಅನ್‍ಲಾಕ್ 3.0 ಮಾರ್ಗಸೂಚಿ ಬಿಡುಗಡೆ

ರಾಜ್ಯದಲ್ಲಿ ಮಹಾಮಾರಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಈ ನಡುವೆ ಕೊರೊನಾ ಹಿನ್ನೆಲೆಯಲ್ಲಿ ವಿಧಿಸಿದ್ದ ಲಾಕ್‍ಡೌನ್ ನಿಯಮಗಳಿಗೆ ಸಡಿಲಿಕೆಗೊಳಿಸಿರುವ ರಾಜ್ಯ ಸರ್ಕಾರ, ಗುರುವಾರ ಅನ್‌ಲಾಕ್‌ 3.0 ಮಾರ್ಗಸೂಚಿ ಬಿಡುಗಡೆ ಮಾಡಿದೆ.

ರಾಜ್ಯ ಸರ್ಕಾರದ ಅನ್‍ಲಾಕ್‍ 3.0 ಮಾರ್ಗಸೂಚಿ ಬಹುತೇಕ ಕೇಂದ್ರ ಸರ್ಕಾರದ ಮಾರ್ಗಸೂಚಿಯ ಅಂಶಗಳನ್ನೇ ಒಳಗೊಂಡಿದೆ. ಮುಖ್ಯವಾಗಿ ಸಂಡೇ ಲಾಕ್‍ಡೌನ್ ರದ್ದುಗೊಳಿಸಿದ್ದು, ರಾತ್ರಿ ಕರ್ಫ್ಯೂ ಸಹ ತೆರವುಗೊಳಿಸಲಾಗಿದೆ. ಹಾಗಾದರೆ ಅನ್‌ಲಾಕ್‌ 3.0 ಮಾರ್ಗಸೂಚಿಯಲ್ಲಿ ರಾಜ್ಯದಲ್ಲಿ ಏನಿರುತ್ತೆ, ಏನಿರಲ್ಲ ಎಂಬ ಮಾಹಿತಿ ಹೀಗಿದೆ.

ಏನಿರುತ್ತೆ? ಅನ್‍ಲಾಕ್‍ 3.0 ನಿಯಮದಲ್ಲಿ ಪ್ರಮುಖವಾಗಿ ಜಿಮ್‍ ತೆರೆಯಲು ಅವಕಾಶ ನೀಡಿದ್ದು, ಆಗಸ್ಟ್‌ 5 ರಿಂದ ಜಿಮ್‌ ಕೇಂದ್ರಗಳ ಪುನರಾರಂಭಕ್ಕೆ ಅನುಮತಿ ನೀಡಲಾಗಿದೆ. ಇದರೊಂದಿಗೆ ಯೋಗ ಕೇಂದ್ರ ತೆರೆಯುವುದಕ್ಕೂ ಅವಕಾಶ, ಸ್ವಾತಂತ್ರ್ಯ ದಿನಾಚರಣೆಗೆ ಒಪ್ಪಿಗೆ. ಆಚರಣೆ ವೇಳೆ ಅಂತರ ಕಾಪಾಡಿಕೊಳ್ಳುವುದು, ಮಾಸ್ಕ್‌ ಧರಿಸುವುದು ಕಡ್ಡಾಯ. ಜತೆಗೆ ಅಂತಾರಾಜ್ಯ, ಅಂತರಜಿಲ್ಲಾ ಓಡಾಟಕ್ಕೆ ಯಾವ ನಿರ್ಬಂಧವೂ ಇಲ್ಲ.

ಏನಿರಲ್ಲ? : ಆದರೆ ಅನ್‍ಲಾಕ್‍ 3.0 ನಿಯಮದಲ್ಲಿ ಆಗಸ್ಟ್‌ 31 ರವರೆಗೆ ಶಾಲಾ-ಕಾಲೇಜುಗಳನ್ನು ತೆರೆಯುವಂತಿಲ್ಲ. ಈಜುಕೊಳ, ಚಿತ್ರಮಂದಿರ, ಮೆಟ್ರೊ ಬಂದ್‌ ಮುಂದುವರಿಕೆ. ಕ್ರೀಡಾ ಚಟುವಟಿಕೆಗಳಿಗೆ ಸದ್ಯಕ್ಕಿಲ್ಲ ಅನುಮತಿ. ರಾಜಕೀಯ, ಧಾರ್ಮಿಕ ಸಭೆ, ಸಮಾರಂಭ ನಡೆಸುವಂತಿಲ್ಲ. ಮನರಂಜನಾ ಪಾರ್ಕ್‌, ಅಸೆಂಬ್ಲಿ ತೆರೆಯುವಂತಿಲ್ಲ.

Exit mobile version