ರಾಷ್ಟ್ರೀಯ ನಾಟಕ ಶಾಲೆ ಮುಖ್ಯಸ್ಥರಾಗಿ ಬಾಲಿವುಡ್ ನಟ ಪರೇಶ್ ರಾವಲ್ ನೇಮಕ

ರಾಷ್ಟ್ರೀಯ ನಾಟಕ ಶಾಲೆ(ಎನ್ಎಸ್ಡಿ)ಯ ಮುಖ್ಯಸ್ಥರನ್ನಾಗಿ ಬಾಲಿವುಡ್ ನಟ ಪರೇಶ್ ರಾವಲ್ ಅವರನ್ನು ನೇಮಿಸಲಾಗಿದೆ.


ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಮಾಜಿ ಸಂಸದ ಹಾಗೂ ನಟ ಪರೇಶ್ ರಾವಲ್ ಅವರನ್ನು ಎನ್ಎಸ್ಡಿ ಮುಖ್ಯಸ್ಥರನ್ನಾಗಿ ನೇಮಿಸಿ ಆದೇಶ ಹೊರಡಿಸಿದ್ದಾರೆ. ಈ ಬಗ್ಗೆ ರಾಷ್ಟ್ರೀಯ ನಾಟಕ ಶಾಲೆಯ ಅಧಿಕೃತ ಟ್ವಿಟರ್ ಖಾತೆಯಲ್ಲಿ ಮಾಹಿತಿ ನೀಡಲಾಗಿದ್ದು, “ರಾಷ್ಟ್ರಪತಿಗಳು ಖ್ಯಾತ ನಟ, ಪದ್ಮಶ್ರೀ ಪುರಸ್ಕೃತ ಪರೇಶ್ ರಾವಲ್ ಅವರನ್ನು ಎನ್ಎಸ್ಡಿ ಮುಖ್ಯಸ್ಥರನ್ನಾಗಿ ನೇಮಿಸಿದೆ. ಹಿರಿಯ ನಟನ ಮಾರ್ಗದರ್ಶನದಲ್ಲಿ ಎನ್ಎಸ್ಡಿ ಎತ್ತರದ ಸಾಧನೆ ಮಾಡಲಿ ಎಂದು ಟ್ವಿಟರ್ನಲ್ಲಿ ಬರೆಯಲಾಗಿದೆ.

ಅಲ್ಲದೇ ಸಂಸ್ಕೃತಿ ಸಚಿವಾಲಯದ ಟ್ವೀಟರ್ ಖಾತೆಯಲ್ಲೂ ಈ ಬಗ್ಗೆ ಮಾಹಿತಿ ನೀಡುವ ಮೂಲಕ ನಟ ಪರೇಶ್ ರಾವಲ್ ಅವರಿಗೆ ಅಭಿನಂದನೆ ಕೋರಲಾಗಿದೆ.

Exit mobile version