`ಲಂಕೇಶ್‌ ಆಪ್‌’ಗೆ ಶುಭ ಕೋರಿದ ಶಿವಣ್ಣ

“ನಾನು ಚೆನ್ನೈನಲ್ಲೇ ಹುಟ್ಟಿ ಬೆಳೆದವನು” ಎಂದು ಡಾ. ಶಿವರಾಜ್ ಕುಮಾರ್ ಅವರು ಮಾತು ಶುರು ಮಾಡಿದಾಗ ಸಭೆ ಒಮ್ಮೆ ನಿಶ್ಶಬ್ದವಾಯಿತು. ಮಾತು ಮುಂದುವರಿಸಿದ ಅವರು “ಕರ್ನಾಟಕಕ್ಕೆ ಬಂದ ಆರಂಭದಲ್ಲಿ ಇಲ್ಲಿನ ಪತ್ರಕರ್ತರ ಪರಿಚಯ ಇರಲಿಲ್ಲ. ಆರಂಭದ ಪರಿಚಿತರಲ್ಲಿ ನಾರಾಯಣ ಸ್ವಾಮಿ, ವಿಎನ್ ಸುಬ್ಬರಾವ್ ಮತ್ತು ಲಂಕೇಶ್ ಪ್ರಮುಖರು.

ಇಂದು ಇಂದ್ರಜಿತ್ ನನಗೆ ಆತ್ಮೀಯರು. ಅವರು ನನ್ನೊಂದಿಗೆ ಪತ್ರಕರ್ತರಾಗಿ ಮಾತನಾಡಿದ್ದಕ್ಕಿಂತ ಹೆಚ್ಚು ಚಿತ್ರೋದ್ಯಮದವರೇ ಆಗಿ, ಆತ್ಮೀಯರಾಗಿ ಮಾತನಾಡಿದ್ದೇ ಹೆಚ್ಚು. ಅವರು ತಂದೆ ಕಟ್ಟಿರುವ ಸಂಸ್ಥೆಯನ್ನು ಬೆಳೆಸಿದ್ದಾರೆ. ಆ ನಿಟ್ಟಿನಲ್ಲಿ ತಮ್ಮ ತಂದೆಯವರ ಬರಹಗಳನ್ನು ಆಪ್ ಮೂಲಕ ತಲುಪಿಸುವ ಪ್ರಯತ್ನ ಮಾಡಿದ್ದಾರೆ. ಅವರಿಗೆ ಶುಭಾಶಯಗಳು” ಎಂದರು. ಅವರು ಲಂಕೇಶ್ ಆಪ್ ಮತ್ತು ಆಡಿಯೋ ಬುಕ್ಸ್ ಬಿಡುಗಡೆ ಸಮಾರಂಭದಲ್ಲಿ ಮಾತಮಾಡುತ್ತಿದ್ದರು.

ಗಾಂಧಿ ಜಯಂತಿಯಂದು ಬೆಂಗಳೂರಿನ ಶಿವಾನಂದ ಸರ್ಕಲ್ ಪಕ್ಕದ ಗಾಂಧಿಭವನದಲ್ಲಿ ನಡೆದ ಸಮಾರಂಭದಲ್ಲಿ ಬೋವಿ ಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿಯವರು “ಲಂಕೇಶ್ ಆತ್ಮಕತೆ ಆಡಿಯೋ ಬುಕ್ಸ್” ನ ತುಣುಕು (ಟ್ರೈಲರ್)ಗಳ ಉದ್ಘಾಟನೆ ಮಾಡಿದರು.
ಆದಿಚುಂಚನಗಿರಿಯ ನಿರ್ಮಲಾನಂದ ಸ್ವಾಮೀಜಿಯವರು “ಲಂಕೇಶ್ ಆಪ್” ಬಿಡುಗಡೆ ಮಾಡಿದರು. ಸಮಾರಂಭದ ಅಧ್ಯಕ್ಷ ಸ್ಥಾನದಿಂದ ಮಾತನಾಡಿದ ನಟ ಡಾ.ಶಿವರಾಜ್ ಕುಮಾರ್ “ಈ ಕಾರ್ಯಕ್ರಮಕ್ಕೆ ಬಂದಿದ್ದು ನಿಜಕ್ಕೂ ಸಾರ್ಥಕ ಅನಿಸಿತು.

ನಾನಿನ್ನು ಕಲಿಯುವ ವಿದ್ಯಾರ್ಥಿಯಾಗಿದ್ದು, ನಾನು ಹೆಚ್ಚು ಮಾತನಾಡುವಷ್ಟು ಜ್ಞಾನ ಸಂಪಾದಿಸಿಲ್ಲ”ಎಂದರು.ಇಂದ್ರಜಿತ್ ಲಂಕೇಶ್ ಪ್ರಾಸ್ತಾವಿಕ ಭಾಷಣ ಮಾಡಿ, ರಾಜ್ ಕುಮಾರ್ ಇಲ್ಲದೆ ಯಾವ ಹೋರಾಟಗಳು ಇರಲಿಲ್ಲವೋ, ಹಾಗೆಯೇ ನಮ್ಮ ಅಪ್ಪನ ಬರಹಳಿಲ್ಲದೆ ಸಾಮಾಜಿಕ ಸುಧಾರಣೆ ತರಲು ಸಾಧ್ಯವಾಗುತ್ತಿರಲಿಲ್ಲ . ಗೋಕಾಕ್ ಹೋರಾಟದಲ್ಲಿ ಡಾ.ರಾಜ್ ಪಾತ್ರ ಮಹತ್ವದ್ದು ಮತ್ತು ಅಪ್ಪನ ಸಾಥ್ ಡಾ. ರಾಜ್ ಗಿತ್ತು ಎಂದರು. ಅವರ ಮಗ ಶಿವರಾಜ್ ಕುಮಾರ್, ಅವರ ತಂದೆಯಂತೆ ಹೋರಾಟದ ಮುಖಂಡತ್ವ ವಹಿಸಲಿ. ಅದಕ್ಕೆ ಪತ್ರಿಕೆಯ ಬೆಂಬಲ ಇದೆ ಎಂದರು.

Exit mobile version