ವಶೀಕರಣ ಬಾಬಾ ಅಂದರ್‌

Black magician fraud baba caught in Vijayatimes sting operation | ವಶೀಕರಣ   ಬಾಬಾ ಅಂದರ್ | vijayatime

ಜನ ಮರುಳೋ ಜಾತ್ರೆ ಮರುಳೋ…..ಜನರಿಗೆ ಎಷ್ಟೇ ಬುದ್ದಿ ಹೇಳಿದ್ರೂ ಮಾಟ, ಮಂತ್ರ, ವಶೀಕರಣ ಹೆಸ್ರಲ್ಲಿ ಮೋಸ ಹೋಗ್ತಾವೇ ಇರ್ತಾರೆ. ಅದ್ರಲ್ಲೂ ಕೊಳ್ಳೆಗಾಲದ ಹೆಸರು ಕೇಳಿದ್ರೆ ಸಾಕು ಲಕ್ಷ ಲಕ್ಷ ಸುರಿಯೋಕೂ ಜನ ಹಿಂದೆ ಮುಂದೆ ನೋಡಲ್ಲ. ಇದೇ ರೀತಿ ಜನರಿಗೆ ಮಾಟ, ಮಂತ್ರ ವಶೀಕರಣ ಹೆಸ್ರಲ್ಲಿ ಮೋಸ ಮಾಡ್ತಿದ್ದ ಬೆಟ್ಟಪ್ಪ ಗುರೂಜಿ ಎಂಬಾತನನ್ನ ವಿಜಯಟೈಮ್ಸ್ ತನ್ನ ರಹಸ್ಯ ಕಾರ್ಯಾಚರಣೆಯ ಬಲೆಗೆ ಬೀಳಿಸಿ ಅಂದರ್ ಮಾಡಿದೆ.

ಬೆಟ್ಟಪ್ಪ ಸ್ವಾಮೀಜಿ ಅಂತ ಹೆಸರು ಹೇಳ್ತಿರೋ ಈತ ವಶೀಕರಣ ಸ್ಪೆಷಲಿಸ್ಟ್ ಅಂತೆ. ಇಷ್ಟಪಟ್ಟ ಸ್ತಿçà ಪುರುಷ ವಶೀಕರಣ ಮಾಡೋದ್ರಲ್ಲಿ ಎತ್ತಿದ ಕೈಯಂತೆ. ಜೊತೆಗೆ 100 % ಗ್ಯಾರಂಟಿ ಕೊಟ್ಟು ಚಾಲೆಂಜ್ ಹಾಕ್ತಾನೆ. ಇವನ ಸ್ಪೆಷಲೈಸೇಷನ್ ಲಿಸ್ಟ್ ನೋಡಿದ್ರೆ ದೇಶದ ಅರ್ಧ ಸಮಸ್ಯೆ ಈತನಿಂದಲೇ ಪರಿಹಾರ ಆಗೋ ಎಲ್ಲಾ ಸಾಧ್ಯತೆಗಳು ಇವೆ. ಈ ಬೆಟ್ಟಪ್ಪ ಗುರೂಜಿ ಕೊಟ್ಟ ಸಮಸ್ಯೆ ಪರಿಹಾರದ ಪಟ್ಟಿ ದೊಡ್ಡದೇ ಇದೆ. ಈತ ಕಲರ್ ಕಲರ್ ಆಗಿ ಫೇಸ್‌ಬುಕ್, ವಾಟ್ಸ್ಪ್ ಮತ್ತು ಇತರೆ ಜಾಲತಾಣದಲ್ಲಿ ಜಾಹಿರಾತು ಕೊಟ್ಟಿದ್ದಾನೆ. ಈತನ ಜಾಹಿರಾತಿಗೆ ಮಾರು ಹೋಗಿ ಯಾರಾದ್ರೂ ಸಮಸ್ಯೆ ಪರಿಹಾರ ಮಾಡಿಕೊಡಿ ಅಂತ ಈ ನಂಬರಿಗೆ ಕರೆ ಮಾಡಿದ್ರೆ ಆತ ಬಣ್ಣದ ಮಾತಿನಿಂದ ಮರುಳು ಮಾಡ್ತಾನೆ.

ಈತನ ಬಳಿ ಏನೇ ಸಮಸ್ಯೆ ಹೇಳಿದ್ರು ಆತ ಹೇಳೋ ಉಪಾಯ ಒಂದೇ ಅದೇ ಅಷ್ಟದಿಗ್ಭಂಧನ ಪೂಜೆ. ಅದಕ್ಕಾಗೋ ಖರ್ಚು 45 ಸಾವಿರದಿಂದ 50 ಸಾವಿರ ಅಂತಾನೆ. ಸರಿ ಇದಕ್ಕೆ ಒಪ್ಪಿದ್ರೆ ಬೆಂಗಳೂರಿಗೇ ಬರ್ತಿನಿ. ಬಸ್ ಚಾರ್ಜ್ ಕಳುಹಿಸಿ ಅಂತಾನೆ. ಈತ ಎಲ್ಲಾ ದೇವಿಯ ಅಪ್ಪಣೆಯಂತೆ ಕೆಲಸ ಮಾಡೋದಂತೆ. ಈತ ತನ್ನ ಮಾಂತ್ರಿಕ ಶಕ್ತಿಯಿಂದ ಏನನ್ನೂ ಮಾಡಬಲ್ಲನಂತೆ. ಈತನ ಮಾಂತ್ರಿಕ ಶಕ್ತಿ ಏನು ಅಂತ ನೋಡಿಯೇ ಬಿಡೋಣ ಅಂತ ವಿಜಯಟೈಮ್ಸ್ ತಂಡ ಆತನನ್ನು ಬೆಂಗಳೂರಿಗೆ ಕರೆಸಿತು. ಕೊಳ್ಳೆಗಾಲದಿಂದ ಬೆಂಗಳೂರಿಗೆ ಬರ್ತಿದ್ದೀನಿ ಅಂತ ಹೇಳಿದ ಬೆಟ್ಟಪ್ಪ ಸ್ವಾಮಿ ನಮ್ಮ ವಶೀಕರಣ ಕೆಲಸಕ್ಕೆ ಬೆಂಗಳೂರಿನ ಶೇಷಾದ್ರಿಪುರಂನ ಕಲ್ಯಾಣ್ ಲಾಡ್ಜ್ ಬಂದು ರೂಂ ಮಾಡಿದ. ನಾವು ಅಲ್ಲಿಗೆ ಎಂಟ್ರಿ ಕೊಟ್ವಿ.

ಕೆಂಪು ದೋತ್ರ, ಕೆಂಪು ನಾಮ ಹಾಕ್ಕೊಂಡು ನಮಗೆ ಮೂರು ನಾಮ ಹಾಕಲು ರೆಡಿಯಾಗಿ ಕೂತಿದ್ದ ಬೆಟ್ಟಪ್ಪ. ನಾವು ಎಂಟ್ರಿ ಆಗ್ತಿದ್ದ ಹಾಗೆ ಬುರುಡೆ ಬಿಡಲು ಪ್ರಾರಂಭಿಸಿದ. ಎಲ್ಲರನ್ನೂ ವಶೀಕರಣ ಮಾಡ್ತೀನಿ, ವೈರಿಗಳ ಕೈಬಾಯಿ ಇಲ್ಲದ ಹಾಗೆ ಮಾಡ್ತೀನಿ ಅಂತೆಲ್ಲಾ ರೈಲು ಬಿಟ್ಟ. ಈತ ದೊಡ್ಡ ದೊಡ್ಡ ರಾಜಕಾರಣಿಗಳಿಗೂ ವಶೀಕರಣ ಮಾಡಿದ್ದಾನಂತೆ. ಈತ ವಶೀಕರಣ ಮಾಡಿದವರ ಪಟ್ಟಿಯೇ ಈತನ ಪುಸ್ತಕದಲ್ಲಿದೆ. ಈತ ಹಣ ಪಡೆದು ಕೊಳ್ಳೆಗಾಲದಲ್ಲಿ ಮಧ್ಯರಾತ್ರಿ ವಶೀಕರಣ ಪೂಜೆ ಮಾಡ್ತಾನಂತೆ. ಈತನ ಬುರಡೆ ಕೇಳಿ ಸುಸ್ತಾದ ನಾವು ಡೈರೆಕ್ಟ್ ಲಾಡ್ಜ್ ರೂಂಗೆ ಕ್ಯಾಮರಾ ಸಮೇತ ಎಂಟ್ರಿ ಕೊಟ್ವಿ. ಆಗ ಆತನ ನಾಲಿಗೆ, ಕೈ ಕಾಲು ಎಲ್ಲಾ ಬಿದ್ದು ಹೋಯ್ತು. ಹೊಟ್ಟೆ ಪಾಡು ದಯವಿಟ್ಟು ಕ್ಷಮಿಸಿ ಅನ್ನ ತೊಡಗಿದ. ಈತನ ಜೋಳಿಗೆ ನೋಡಿದ್ರೆ ಕವಡೆ, ಪಂಚಾAಗ ಕುಂಕುಮ ಎಲ್ಲಾ ಇತ್ತು ಅಲ್ಲದೆ ಈತನ ಮೋಸದ ಜಾಲಕ್ಕೆ ಬಿದ್ದವರ ಪಟ್ಟಿಯೇ ಇತ್ತು. ಸಿಗರೇಟ್ ಲೈಟರ್ ಎಲ್ಲವೂ ಇತ್ತು.

ಅಸಲಿಗೆ ಈತ ಕೊಳ್ಳೆಗಾಲದವನಲ್ಲ. ಈತ ಬಿಜಾಪುರದವನು. ಈತನ ಹೆಸರು ಬೆಟ್ಟಪ್ಪ ಸ್ವಾಮಿಜಿಯೂ ಅಲ್ಲ. ಈತ ಬಸವರಾಜ್ ಅಂತ. ಸುಳ್ಳು ಹೇಳಿ ಜನರನ್ನ ವಂಚಿಸುತ್ತಿದ್ದ. ಈತನನ್ನು ಸುಮ್ಮನೆ ಬಿಟ್ರೆ ಇನ್ನಷ್ಟು ಮಂದಿಗೆ ಈತ ಮೋಸ ಮಾಡ್ತಾನೆ. ನಾಳೆ ನಾನೇ ದೇವರು, ನಾನೇ ಅವಧೂತ ಅಂತ ಹೇಳಲು ಪ್ರಾರಂಭಿಸ್ತಾನೆ. ಆ ಬಳಿಕ ರಾಜಕಾರಣಿಗಳು, ಗಣ್ಯ ವ್ಯಕ್ತಿಗಳನ್ನು ಆಕರ್ಷಿಸಿ ಜನರನ್ನು ವಂಚನಾ ಜಾಲದಲ್ಲಿ ಮುಳುಗಿಸ್ತಾನೆ ಅದಕ್ಕಾಗಿ ಈತನನ್ನು ಶೇಷಾದ್ರಿಪುರಂ ಪೊಲೀಸ್ ಠಾಣೆಗೆ ಕರೆದುಕೊಂಡು ಹೋದೆವು. ಈತನ ವಿರುದ್ಧ ದೂರು ದಾಖಲಿಸಿದೆವುನಮ್ಮ ರಾಜ್ಯದಲ್ಲಿ ಮಾಟ, ಮಂತ್ರ ನಿಷೇಧ ಕಾಯ್ದೆ ಜಾರಿಯಲ್ಲಿದ್ರೂ ಇನ್ನೂ ಇಂಥಾ ಮೋಸಗಾರರ ಆಟ ನಿಂತಿಲ್ಲ. ಜನ ಕೂಡ ಇಂಥಾ ವಂಚಕರ ಬಗ್ಗೆ ಎಚ್ಚರದಿಂದರಬೇಕು.

Exit mobile version