ವಿಶ್ವಾದ್ಯಂತ ಕೊರೋನಾ ಸೋಂಕಿತರ ಸಂಖ್ಯೆ – ಸಾವಿನ ಸಂಖ್ಯೆ ಹೆಚ್ಚಳ

ಚೀನಾದಿಂದ ವಿಶ್ವಕ್ಕೆ ಒಕ್ಕರಿಸಿದ ಮಾರಕ ವೈರಸ್ ಕೊರೋನಾ ತನ್ನ ಅಟ್ಟಹಾಸ ನಿಲ್ಲಿಸೋ ಯಾವ ಲಕ್ಷಣಗಳು ಕಾಣಿಸುತ್ತಿಲ್ಲ.. ದಿನದಿಂದ ದಿನಕ್ಕೆ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು; ಸಾವಿನ ಸಂಖ್ಯೆಯಲ್ಲೂ ಇಳಿಮುಖ ಕಾಣುತ್ತಿಲ್ಲ.ಭಾರತ ದೇಶ ಸೇರಿದಂತೆ ಜಗತ್ತಿನ ಅನೇಕ ದೇಶಗಳು ಲಾಕ್‍ಡೌನ್ ಘೋಷಿಸಿದ್ರು ಈ ವೈರಸ್ ನಿಯಂತ್ರಣಕ್ಕೆ ಮಾತ್ರ ಬರುತ್ತಿಲ್ಲ.

ಅಂದಹಾಗೆ ಭಾರತದಲ್ಲಿ 2 ನೇ ಬಾರಿ ಲಾಕ್‍ಡೌನ್ ವಿಸ್ತರಿಸಿದ್ರು; ಸೋಂಕಿತರು ಮಾತ್ರ ಜಾಸ್ತಿಯಾಗುತ್ತಿದ್ದಾರೆ . ದೇಶದಲ್ಲಿ ಈವರೆಗೆ 49,400 ಜನರು ಕಿಲ್ಲರ್ ವೈರಸ್‍ಗೆ ತುತ್ತಾಗಿದ್ದು ,1693 ಜನರು ಸಾವನ್ನಪ್ಪಿದ್ದಾರೆ. ಇನ್ನು ಕೊರೋನಾ ಎಂಬ ಮಹಾರೋಗದಿಂದ ಪಾರಾದವರ ಸಂಖ್ಯೆ14,400 ಜನರು ಮಾತ್ರ.

ಇನ್ನು ವಿಶ್ವದಲ್ಲಿ 37.27ಲಕ್ಷ ಜನರಲ್ಲಿ ಸೋಂಕು ಕಂಡುಬಂದಿದ್ದು; 2.58 ಲಕ್ಷ ಜನರು ಸಾವನ್ನಪ್ಪಿದ್ದಾರೆ.ಸೋಂಕಿನಿಂದ ತಪ್ಪಿಸಿಕೊಂಡವರು12.41 ಲಕ್ಷ ಜನರು .ಅಮೇರಿಕಾದಲ್ಲಿಅತೀ ಹೆಚ್ಚು ಜನರು ಸೋಂಕಿಗೆ ತುತ್ತಾಗಿದ್ದು 12.37 ಲಕ್ಷ ಜನರಿಗೆ ಸೋಂಕು ತಗುಲಿ ಅವರಲ್ಲಿ 72, 271 ಜನರು ಅಸುನೀಗಿದ್ದಾರೆ.ಅದೇ ರೀತಿ ಸ್ಪೇನ್‍ನಲ್ಲಿ 2.50 ಲಕ್ಷ ಜನರು ಸೋಂಕಿಗೆ ಒಳಗಾಗಿದ್ದು , 25,613 ಜನರು ಸಾವನ್ನಪ್ಪಿದ್ದಾರೆ.ಇಟಲಿಯಲ್ಲಿ 2.13 ಲಕ್ಷ ಜನರಿಗೆ ಸೋಂಕು ಕಂಡುಬಂದಿದ್ದು;29,315 ಜನರು ಸೋಂಕಿನಿಂದ ಸಾವಿಗೀಡಾಗಿದ್ದಾರೆ.

Exit mobile version