ಸಂತಸದಲ್ಲಿ ಸರ್ಜಾ ಕುಟುಂಬ

ಬೆಂಗಳೂರು, ಅ. 22: ಇತ್ತೀಚೆಗೆ ಚಲನಚಿತ್ರ ನಟ ಚಿರಂಜೀವಿ ಸರ್ಜಾ ಹೃದಯಾಘಾತದಿಂದ ನಿಧನರಾಗಿದ್ದರು. ಹೀಗಾಗಿ, ಕುಟುಂಬವು ಗಂಡು ಮಗುವಿನ ನಿರೀಕ್ಷೆಯಲ್ಲಿತ್ತು.

ಚಿರು ಹುಟ್ಟುಹಬ್ಬದ ದಿನದಂದು ಮೇಘನಾಗೆ 9 ತಿಂಗಳು ತುಂಬಿತ್ತು . ಇಂದು ಮೇಘನಾ ಚಿರಂಜೀವಿ ಸರ್ಜಾ ನಿಶ್ಚಿತಾರ್ಥದ ದಿನ . 2017 ರ ಅಕ್ಟೋಬರ್ 22 ರಂದು ಚಿರು – ಮೇಘನಾ ನಿಶ್ಚಿತಾರ್ಥ ನಡೆದಿತ್ತು . ಇಂದೇ ಕುಟುಂಬಕ್ಕೆ ಗಂಡು ಮಗುವಿನ ಆಗಮನವಾಗಿದ್ದು , ಕುಟುಂಬಸ್ಥರಲ್ಲಿ ಸಂತಸ ಮನೆ ಮಾಡಿದೆ .

ಚಿರಂಜೀವಿ ಸರ್ಜಾ ಅಭಿಮಾನಿಗಳು ಗಂಡು ಮಗು ಜನನಕ್ಕೆ ಜೂನಿಯರ್ ಚಿರು ಆಗಮವಾಗಿದ್ದಾನೆ ಎಂದು ಹರ್ಷೋದ್ಗಾರಗಳ ಮೂಲಕ ಆಸ್ಪತ್ರೆಯ ಎದುರು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.

Exit mobile version