ಸಂಸದೆಗೆ ಕೊರೋನಾ ಪಾಸಿಟಿವ್ ಹಿನ್ನಲೆ; ಹಲವರಲ್ಲಿ ಆತಂಕ

ಸಂಸದೆ ಸುಮಲತಾ ಅಂಬರೀಷ್ ಅವರಿಗೆ ಕೊರೋನಾ  ಪಾಸಿಟಿವ್ ದೃಢಪಟ್ಟ ಬೆನ್ನಲೆ ಇದೀಗ ಸಿ.ಎಂ ಯಡಿಯೂರಪ್ಪರವರಿಗೂ ಆತಂಕ ಶುರುವಾಗಿದೆ. ಕಳೆದ ಗುರುವಾರ  ವಿಧಾನ ಸೌಧದಲ್ಲಿ  ಅಂಬರೀಶ್ ಸ್ಮಾರಕ ನಿರ್ಮಾಣ ವಿಚಾರವಾಗಿ  ಸಭೆ ನಡೆದಿತ್ತು.

ಈ ಸಭೆಯಲ್ಲಿ  ಮುಖ್ಯಮಂತ್ರಿ  ಬಿ.ಎಸ್ ಯಡಿಯೂರಪ್ಪ ,  ಸುಮಲತಾ ಅಂಬರೀಶ್ , ರಾಕ್ ಲೈನ್ ವೆಂಕಟೇಶ್ , ದೊಡ್ಡಣ್ಣ ಸೇರಿದಂತೆ  ಹಲವರು ಭಾಗಿಯಾಗಿದ್ದರು .. ಅಂಬರೀಶ್ ಸ್ಮಾರಕಕ್ಕೆ  ಅನುಮತಿ ಕೊಟ್ಟು ೫ ಕೋಟಿ  ರೂಪಾಯಿ ಬಿಡುಗಡೆಗೊಳಿಸಿ , ಆದೇಶದ ಪ್ರತಿಗೆ  ಸುಮಲತಾ ಅಂಬರೀಶ್ ಸಹಿ ಹಾಕಿದ್ರು .

ಸುಮಲತಾ ಅಂಬರೀಶ್ ಸಹಿ  ಹಾಕಿದ ಪೆನ್ನು  ಪಡೆದು , ಹಣಕಾಸು ಸಚಿವರಾಗಿಯೂ  ಕಾರ್ಯನಿರ್ವಹಿಸುತ್ತಿರುವ  ಸಿಎಂ ಯಡಿಯೂರಪ್ಪರಿಂದಲೂ  ಆದೇಶದ ಪ್ರತಿಗೆ ಸಹಿ ಹಾಕಲಾಗಿತ್ತು  ಇದೀಗ ಎಲ್ಲರೂ ಕ್ವಾರೆಂಟೈನ್ ಗೆ ಒಳಗಾಗುವ ಸಾಧ್ಯತೆಯಿದೆ.

Exit mobile version