ಸಿಎಂಗೆ ಮಾಜಿ ಸಿಎಂ ಟಾಂಟ್‌

ಬೆಳಗಾವಿ, ಅ.19: ಮುಖ್ಯಮಂತ್ರಿಯಾದವರು ವೈಮಾನಿಕ ಸಮೀಕ್ಷೆ ಎಂದು ಕೊಂಡು ವಿಮಾನದಲ್ಲಿ ಸುತ್ತಾಡಿದರೆ ಜನರ ಕಷ್ಟ ತಿಳಿಯುತ್ತಾ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಪ್ರವಾಹವಿದ್ದ ಸಂದರ್ಭ ಅಥವಾ ರಸ್ತೆಯಲ್ಲಿ ತೆರಳಲು ಸಾಧ್ಯವಿಲ್ಲದ ಸಂದರ್ಭದಲ್ಲಿ ವಿಮಾನದಲ್ಲಿ ಹೋಗಲಿ. ಅದು ಬಿಟ್ಟು ಹೀಗೆ ಮೇಲೆಯಿಂದ ವೈಮಾನಿಕ ಸಮೀಕ್ಷೆ ಎಂದು ನಡೆಸಿಕೊಂಡರೆ ಜನರ ಕಷ್ಟ ಹೇಗೆ ತಿಳಿಯುತ್ತೆ ಎಂದು ಕೇಳಿದರು.
2009ರಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಪ್ರವಾಹ ಬಂದಿದ್ದು ಆ ವೇಳೆ ಪ್ರಧಾನ ಮಂತ್ರಿಯಾಗಿದ್ದ ಮನಮೋಹನ್ ಸಿಂಗ್ ಅವರು ಸಮೀಕ್ಷೆ ನಡೆಸಿ ಒಂದು ಸಾವಿರ ಕೋಟಿಯನ್ನು ಘೋಷಿಸಿದ್ದರು. ಆದರೆ ನಮ್ಮ ರಾಜ್ಯದಲ್ಲಿ ಹೋದ ವರ್ಷದಿಂದ ಈ ವರ್ಷದವರೆಗೂ ಆಗಾಗೇ ಪ್ರವಾಹಗಳು ಆಗುತ್ತಿಲಿದ್ದರೂ ಪ್ರಧಾನಿ ಮೋದಿಯವರು ಒಂದು ಬಾರಿಯೂ ಕರ್ನಾಟಕಕ್ಕೆ ಭೇಟಿ ನೀಡಿಲ್ಲ ಪ್ರಧಾನಿ ವಿರುದ್ದ ಚಾಟಿ ಬೀಸಿದ ಅವರು, ಕೇಂದ್ರ ಸಚಿವರಾದ ಅಮಿತ್ ಶಾ, ನಿರ್ಮಲಾ ಸೀತಾರಾಮನ್ ಅವರು ಬಂದು ಹೋದರು ಆದರೆ ಹಣ ನೀಡಿದ್ದಾರಾ ಎಂದು ಮತ್ತೆ ಪ್ರಶ್ನಿಸಿದರು.
ಇನ್ನು ಉಪಚುನಾವಣೆಯ ಬಗ್ಗೆ ಮಾತನಾಡಿದ ಅವರು, ಬಿಜೆಪಿಯವರಿಗೆ ಉಪಚುನಾವಣೆಯ ಸಂದರ್ಭದಲ್ಲಿ ಸುಳ್ಳು ಹೇಳಲು, ಹಣ ಹಂಚಲು ಅವಕಾಶವಿರುತ್ತದೆ. ಆದರೂ ಕೂಡಾ ಆರ್.ಆರ್. ನಗರ ಹಾಗೂ ಶಿರಾದಲ್ಲಿ ಗೆಲುವು ನಮ್ಮದೇ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಾಲ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ ಅವರು, ರಾಜ್ಯ ಸರ್ಕಾರ 35 ಸಾವಿರ ಕೋಟಿ ಕೇಳಿದರೆ ಅವರು 1,652 ಕೋಟಿ ಮಾತ್ರ ನೀಡಿ ಬಳಿಕ ಒಂದು ಪೈಸೆಯೂ ನೀಡಿಲ್ಲ. 25 ಸಂಸದರು ಇದ್ದರೂ ಕೂಡಾ ಅವರು ಅಸಡ್ಡೆಯಲ್ಲಿದ್ದಾರೆ. ಆ ಹಿನ್ನೆಲೆಯಲ್ಲಿ ಸೋತರೆಯೇ ಅವರಿಗೆ ಬುದ್ದಿ ಬರುತ್ತದೆ ಎಂದು ಹೇಳಿದರು.
ಇನ್ನು ರಾಜ್ಯ ಸರ್ಕಾರದ ವಿರುದ್ದವೂ ವಾಕ್ ಪ್ರಹಾರ ನಡೆಸಿದ ಅವರು, ಅನ್ನಭಾಗ್ಯ ಯೋಜನೆಯಲ್ಲಿ ಅಕ್ಕಿ ಕಡಿತ ಮಾಡಿದ್ದಾರೆ. ಇಂದಿರಾ ಕ್ಯಾಂಟೀನ್ಗಳಿಗೆ ಹಣ ನೀಡುತ್ತಿಲ್ಲ. ಕೃಷಿ ಭಾಗ್ಯ, ವಿದ್ಯಾಸಿರಿ ಯೋಜನೆಯನ್ನು ಸ್ಥಗಿತಗೊಳಿಸಿದ್ದಾರೆ. ಎಲ್ಲಾ ಯೋಜನೆಯನ್ನು ನಿಲ್ಲಿಸಿ ಕೊನೆಗೆ ಸ್ವಾಹ ಭಾಗ್ಯ ಯೋಜನೆ ಅವರದ್ದಾಗಿದೆ ಎಂದು ಆಕ್ರೋಶಗೊಂಡರು.

Exit mobile version