ಬೆಂಗಳೂರು, ನ. 18: ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ತಮ್ಮ ಸ್ನೇಹಿತರೊಂದಿಗೆ ಬೈಕ್ ಟ್ರಿಪ್ ಹೊರಟಿದ್ದಾರೆ. ಬೆಂಗಳೂರಿನ ರಾಜರಾಜೇಶ್ವರಿ ನಗರದ ತಮ್ಮ ನಿವಾಸದಿಂದ 10ಕ್ಕೂ ಹೆಚ್ಚು ಮಂದಿ ಸ್ನೇಹಿತರೊಂದಿಗೆ ನಟ ದರ್ಶನ್, ಬೈಕ್ ಸವಾರಿ ಹೊರಟಿದ್ದಾರೆ.
ಡಿಬಾಸ್ ಅವರೊಂದಿಗೆ ನಿರ್ಮಾಪಕರಾದ ಉಮಾಪತಿ, ಶ್ರೀನಿವಾಸ್ ಗೌಡ, ನಟರಾದ ಪ್ರಜ್ವಲ್ ದೇವರಾಜ್, ಧರ್ಮಾ ಕೀರ್ತಿರಾಜ್, ಪ್ರಣಮ್ ದೇವರಾಜ್, ಪನ್ನಗಾಭರಣ ಸೇರಿದಂತೆ ಇನ್ನೂ ಅನೇಕರು ಬೈಕ್ ರೈಡ್ನಲ್ಲಿ ಪಾಲ್ಗೊಂಡಿದ್ದಾರೆ. ನ.17ರಂದು ಬೈಕ್ ಸವಾರಿ ಹೊರಟಿರುವ ದರ್ಶನ್ ಹಾಗೂ ತಂಡದ ಸದಸ್ಯರು, ಮಡಿಕೇರಿಗೆ ತೆರಳಿದ್ದಾರೆ ಎನ್ನಲಾಗಿದೆ. ಸದ್ಯ ಬೈಕ್ ರೈಡ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಬೈಕ್ ಸವಾರಿಯನ್ನು ಹೆಚ್ಚು ಇಷ್ಟಪಡುವ ದರ್ಶನ್, ಈ ಹಿಂದೆ ಕೂಡ ಹಲವು ಬಾರಿ ಬೈಕ್ ರೈಡಿಂಗ್ ಮಾಡಿದ್ದಾರೆ.