ಹಣದಹೊಳೆಹರಿಸಿ, ಬಿಜೆಪಿಗೆದ್ದಿದೆ: ಸಿದ್ದರಾಮಯ್ಯ

ಬಾಗಲಕೋಟೆ, ನ. 10: ಉಪ ಚುನಾವಣೆಯ ಸೋಲಿನ ನಂತರ ಮಾತನಾಡಿದ ಸಿದ್ದಾರಾಮಯ್ಯ ಅವರು  ರಾಜ್ಯದ ಶಿರಾ ಮತ್ತು ಆರ್.ಆರ್. ನಗರ ಎರಡೂ ಕಡೆ ಬಿಜೆಪಿ ಗೆದ್ದಿದೆ. ನಾವು ಎರಡು ಕಡೆ ಸೋತಿದ್ದೇವೆ. ಪ್ರಜಾಪ್ರಭುತ್ವದಲ್ಲಿ ಸೋಲು ಗೆಲುವು ಸಾಮಾನ್ಯ ಎಂದು ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

ಬಾದಾಮಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿರಾದಲ್ಲಿ ಗೆಲ್ಲುವ ನಿರೀಕ್ಷೆ ಇತ್ತು‌. ಆರ್.ಆರ್.ನಗರದಲ್ಲಿ ಒಳ್ಳೆಯ ಸ್ಪರ್ಧೆ ನೀಡುತ್ತೇವೆ ಎಂದುಕೊಂಡಿದ್ದೆವು. ಆದರೆ ಜನರ ತೀರ್ಪನ್ನು ನಾವು ಒಪ್ಪಿಕೊಂಡಿದ್ದೇವೆ ಎಂದರು.

ಸರಕಾರದಲ್ಲಿರುವವರು ಚುನಾವಣೆಯನ್ನು ನಿಷ್ಪಕ್ಷಪಾತವಾಗಿ, ಮುಕ್ತವಾಗಿ ನಡೆಸುವುದು ಅವರ ಜವಾಬ್ದಾರಿ. ನನಗೆ ಇರುವ ಮಾಹಿತಿಯ ಪ್ರಕಾರ, ಬಿಜೆಪಿ ಅಧಿಕಾರ ದುರುಪಯೋಗ ಮಾಡಿಕೊಂಡಿದೆ‌. ಎರಡು ಕಡೆ ಹಣದ ಹೊಳೆ ಹರಿಸಿದೆ ಎಂದು ಆರೋಪಿಸಿದರು.

ಏನೇ ಇರಲಿ ಬಿಜೆಪಿಗೆ ಜನ ಮತ ಕೊಟ್ಟಿರುವುದು ತೀರ್ಪು. ಆ ತೀರ್ಪನ್ನು ನಾವು ಒಪ್ಪಿಕೊಂಡಿದ್ದೇವೆ ಎಂದ ಅವರು ಅಭ್ಯರ್ಥಿ ಆಯ್ಕೆಯಲ್ಲಿ ಯಾವುದೇ ಗೊಂದಲವಾಗಿಲ್ಲ. ಒಮ್ಮತದಿಂದ ಅಭ್ಯರ್ಥಿಗಳ ಆಯ್ಕೆ ನಡೆದಿತ್ತು ಎಂದು ಹೇಳಿದರು.

ಆರ್ ಆರ್ ನಗರ ಅಭ್ಯರ್ಥಿ ಆಯ್ಕೆ ವಿಳಂಭವಾಯ್ತು. ವಿದ್ಯಾವಂತ ಹೆಣ್ಣುಮಗಳನ್ನು ಕಣಕ್ಕಿಳಿಸಿದ್ದೆವು‌. ಅಧಿಕಾರ, ಹಣದ ಬೆಂಬಲ, ಸರಕಾರ ಇರುವುದರಿಂದ ಅವರಿಗೆ ಅನುಕೂಲವಾಗಿವೆ. ಉಪಚುನಾವಣೆ ಆಗಿರೋದರಿಂದ ಅವರಿಗೇನು ದೊಡ್ಡ ಶಕ್ತಿ ಬರೋದಿಲ್ಲ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಲೀಡ್ ಬಂದಿತ್ತು.  ನಮ್ಮ ಪಕ್ಷದ ಅಭ್ಯರ್ಥಿ  ಆಯ್ಕೆ ವಿಳಂಭವಾಯಿತು. ವಿದ್ಯಾವಂತ ಹೆಣ್ಣು ಮಗಳನ್ನು ಕಣಕ್ಕಿಳಿಸಿದ್ದೇವೆ. ಅಧಿಕಾರ ಹಣದ ಬೆಂಬಲದಿಂದ  ಅವರು ಗೆದ್ದಿದ್ದಾರೆ. ಆರ್ ಆರ್ ನಗರದಲ್ಲಿ ಜೆಡಿಎಸ್ ಬಿಜೆಪಿ ಹೊಂದಾಣಿಕೆ ಮಾಡಿಕೊಂಡ ರೀತಿ ಕಾಣಿಸುತ್ತದೆ.‌ ಜೆಡಿಎಸ್ ನವರು ದುರ್ಬಲ ಅಭ್ಯರ್ಥಿಯನ್ನು ಬೇಕೆಂದೆ ಹಾಕಿದ್ದಾರೆ ಎಂದರು.

 ಚುನಾವಣೆ ಬಳಿಕ ಯಡಿಯೂರಪ್ಪನವರನ್ನು ಬದಲಾವಣೆ ಮಾಡುತ್ತಾರೆ ಎಂದರು.

ಸಂಸದ ಪ್ರತಾಪ ಸಿಂಹ ಹೇಳಿಕೆಗೆ ತಿರುಗೇಟು ನೀಡಿದ ಸಿದ್ದರಾಮಯ್ಯ, ನಾನು ಪ್ರತಾಪ ಸಿಂಹನಿಗೆ ಪ್ರತಿಕ್ರಿಯೆ ನೀಡಲ್ಲ. ಪ್ರತಾಪ ಸಿಂಹಗೆ ಇನ್ನು ರಾಜಕೀಯ ಪ್ರೌಢಿಮೆ ಇಲ್ಲ ಎಂದು ಟೀಕಿಸಿದರು.

ಉಪ ಚುನಾವಣೆಯ ಸೋಲಿನ ಹೊಣೆ ಡಿಕೆಶಿವಕುಮಾರ್ ಯಾಕೆ ಹೊರಬೇಕು.? ಯಾರು ಅಧ್ಯಕ್ಷರಾದರೂ ಅಷ್ಟೆ. ಇದು ಬೈ ಎಲೆಕ್ಷನ್, 2023 ರ ಸಾರ್ವತ್ರಿಕ ಚುನಾವಣೆಯಲ್ಲಿ ಗೆಲ್ಲತ್ತೇವೆ ಎಂದು ಹೇಳಿದರು.

ಬಿಹಾರ ಫಲಿತಾಂಶದ ಕುರಿತು ಪ್ರತಿಕ್ರಿಯಿಸಿದ ಅವರು, ಬೆಳಗ್ಗೆ ಮಹಾಘಟಬಂಧನ ಮುನ್ನಡೆಯಲ್ಲಿತ್ತು. ಕ್ರಮೇಣ ಬಿಜೆಪಿ ಮುನ್ನಡೆ ಸಾಧಿಸಿದೆ. ಇನ್ನೂ ಮತ ಎಣಿಕೆ ನಡೆಯುತ್ತಿದೆ. ಅಂತಿಮವಾಗಿ ಏನಾಗುತ್ತದೆಯೋ ನೋಡಬೇಕು ಎಂದರು.

ಎಲ್ಲಾ ಸಮೀಕ್ಷೆಗಳು ಮಹಾಘಟಬಂಧನ ಗೆಲ್ಲುತ್ತೆ ಎಂದಿತ್ತು. ಇದರ ಬಗ್ಗೆ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. 40 ಸ್ಥಾನ ಲೀಡ್ ಇದ್ದಿದ್ದು, ಇದ್ದಕ್ಕಿದ್ದಂತೆ ಎನ್ ಡಿಎ ಲೀಡ್ ಬಂದಿದೆ. ಹೀಗಾಗಿ ಅನುಮಾನ ಬರಲ್ವಾ? ಇವಿಎಂ ಮಶೀನ್ ಬಗ್ಗೆ ಏನು ಗೊತ್ತಿಲ್ಲ.‌ ಕಾಂಗ್ರೆಸ್, ಉಳಿದ ಪಕ್ಷಗಳ ನಾಯಕರು ಆ ಬಗ್ಗೆ ಮಾತನಾಡುತ್ತಾರೆ ಎಂದರು.

Exit mobile version