ಹೊಸ ವೀಸಾಗಳಿಗೆ ನಿಷೇಧ: ಟ್ರಂಪ್ ಆದೇಶ

ಹೊಸ ವೀಸಾಗಳಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಾತ್ಕಾಲಿಕ ನಿಷೇಧ ಹೇರಿದ್ದಾರೆ. ಉದ್ಯೋಗಕ್ಕಾಗಿ ಅಮೆರಿಕಕ್ಕೆ ಬರುವ ವಲಸಿಗರನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಟ್ರಂಪ್ ಈ ಕ್ರಮವನ್ನು ತೆಗೆದುಕೊಂಡಿದ್ದಾರೆ.
ಈ ನಿಷೇಧವನ್ನು ಟ್ರಂಪ್ ವೃತ್ತಿ ಆಧಾರಿತ ಹೊಸ ವೀಸಾಗಳಿಗೆ ವರ್ಷದ ಕೊನೆಯವರೆಗೂ ಮುಂದುವರಿಸಲಿದ್ದಾರೆ. ಎಚ್-1ಬಿ ವೀಸಾ ಅಡಿಯಲ್ಲಿ ಅಮೆರಿಕ ಪ್ರವೇಶಿಸಿರುವ ಕಂಪ್ಯೂಟರ್ ಪ್ರೋಗ್ರಾಮಿಂಗ್ ಹಾಗೂ ಇತರೆ ಕೌಶಲ ಆಧಾರಿತ ಕೆಲಸಗಾರರು, ಆತಿಥ್ಯ ಸೇವೆಗಳ ವಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರು, ಉದ್ಯೋಗ ಮತ್ತು ಅಧ್ಯಯನ ನಡೆಸುತ್ತಿರುವ ವಿದ್ಯಾರ್ಥಿಗಳು ಹಾಗೂ ಕುಟುಂಬದ ಸಹಾಯಕರಾಗಿ ಬಂದಿರುವವರಿಗೆ ವೀಸಾ ನಿರ್ಬಂಧ ಮಾಡಲಾಗುತ್ತಿದೆ.
ಜತೆಗೆ ಅಮೆರಿಕದಲ್ಲಿ ಕೆಲಸ ಮಾಡುತ್ತಿರುವ ಪತಿ ಅಥವಾ ಪತ್ನಿಗೆ ವೀಸಾ ನಿಷೇಧಮಾಡಲಾಗಿದೆ. ಬಹುರಾಷ್ಟ್ರೀಯ ಕಂಪನಿಗಳು, ಜಾಗತಿಕವಾಗಿ ಕಾರ್ಯಾಚರಿಸುತ್ತಿರುವ ಅಮೆರಿಕ ಕಂಪನಿಗಳು ವಿದೇಶಿ ಉದ್ಯೋಗಗಳನ್ನು ಅಮೆರಿಕಕ್ಕೆ ವರ್ಗಾಯಿಸಿವುದನ್ನು ನಿಷೇಧಿಸಲಾಗಿದೆ. ಇನ್ನು ಈಗಾಗಲೇ ಸೂಕ್ತ ವೀಸಾ ಹೊಂದಿರುವ ವಿದೇಶಿಯರಿಗೆ ಟ್ರಂಪ್ ಜಾರಿ ಮಾಡಿರುವ ಆದೇಶದಿಂದ ಯಾವುದೇ ತೊಂದರೆ ಆಗುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕರೋನಾ ವೈರಸ್ ಸಂಶೋಧನೆಗಳಲ್ಲಿ ತೊಡಗಿರುವ ಕೆಲವು ವೈದ್ಯಕೀಯ ಸುಬ್ಬಂದಿಗೆ ಇದರಿಂದ ವಿನಾಯಿತಿ ಸಿಗಲಿದೆ.
ಕೋವಿಡ್-19 ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸುವ ಹಿನ್ನೆಲೆಯಲ್ಲಿ ವಲಸಿಗರನ್ನು ತಾತ್ಕಾಲಿಕವಾಗಿ ತಡೆಯಲು ಅಮೆರಿಕ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಎಚ್-1ಬಿ ಉದ್ಯೋಗ ಆಧಾರಿತ ವೀಸಾ ಅಡಿಯಲ್ಲಿ ಅಮೆರಿಕಕ್ಕೆ ಬರುವ ಉದ್ಯೋಗ ವಲಸಿಗರಿಗೆ ಸದ್ಯಕ್ಕೆ ವರ್ಷದ ಅಂತ್ಯದವರೆಗೆ ನಿಷೇಧ ವಿಧಿಸಲಾಗಿದೆ.

Exit mobile version