ಡಿಆರ್ ಡಿಒದ ಆಂಟಿ-ಕೊವಿಡ್ ಡ್ರಗ್ ಪ್ಯಾಕೆಟ್​ಗೆ ₹990; ಸರ್ಕಾರಿ ಆಸ್ಪತ್ರೆಗಳಿಗೆ ರಿಯಾಯಿತಿ ದರ

ನವದೆಹಲಿ, ಮೇ. 28: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) 2 ಡಿಜಿ ಆಂಟಿ-ಕೊವಿಡ್ -19 ಔಷಧಿಯನ್ನು ಡಾ. ರೆಡ್ಡೀಸ್ ಅವರ ಲ್ಯಾಬ್ ಪ್ರತಿ ಪುಟ್ಟ ಪ್ಯಾಕೆಟ್​ಗೆ 990 ರೂ ನಂತೆ ಮಾರಾಟ ಮಾಡಲಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಿ ಆಸ್ಪತ್ರೆಗಳಿಗೆ ರಿಯಾಯಿತಿ ದರದಲ್ಲಿ ಔಷಧಿ ನೀಡಲಾಗುವುದು ಎಂದು ಸರ್ಕಾರಿ ಅಧಿಕಾರಿಗಳು ಹೇಳಿರುವುದಾಗಿ ಎಎನ್ಐ ಸುದ್ದಿಸಂಸ್ಥೆ ವರದಿಮಾಡಿದೆ.

ಕೊವಿಡ್ ಪ್ರತಿರೋಧ ಔಷಧದ 10,000 ಸ್ಯಾಶೆಗಳು ಮಾರುಕಟ್ಟೆಯಲ್ಲಿ ಲಭ್ಯವಾಗಲಿವೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗುರುವಾರ ಹೇಳಿದ್ದಾರೆ.

ಕ್ಲಿನಿಕಲ್ ಪ್ರಯೋಗ ಫಲಿತಾಂಶಗಳ ಪ್ರಕಾರ ಇದು ಆಸ್ಪತ್ರೆಗೆ ದಾಖಲಾದ ರೋಗಿಗಳು ವೇಗವಾಗಿ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಪೂರಕ ಆಮ್ಲಜನಕದ ಅವಲಂಬನೆಯನ್ನು ಕಡಿಮೆ ಮಾಡುತ್ತದೆ ಎಂದು ತೋರಿಸಿದೆ.

ಈ ತಿಂಗಳ ಆರಂಭದಲ್ಲಿ ಭಾರತದ ಔಷಧ ಮಹಾ ನಿಯಂತ್ರಕರು (Drugs Controller General of India – DGCI) ಈ ಔಷಧಿಯ ತುರ್ತು ಬಳಕೆಗೆ ಈ ತಿಂಗಳ ಆರಂಭದಲ್ಲಿ ಅನುಮತಿ ನೀಡಿದ್ದರು. ಸೋಂಕಿನ ತೀವ್ರತೆಯು ಕಡಿಮೆ ಅಥವಾ ತೀವ್ರವಾಗಿರುವ ರೋಗಿಗಳ ಚಿಕಿತ್ಸೆಗೆ ಈ ಔಷಧಿ ಬಳಸಬಹುದು ಎಂದು ತಿಳಿಸಿತ್ತು.

Exit mobile version