ಆಟೋದಲ್ಲಿ ಸಾಗಿಸುತ್ತಿದ್ದ 1 ಕೋಟಿ ಹಣ: ಬೆಂಗಳೂರು ಪೊಲೀಸರಿಂದ ವಶ

Bengaluru : ರಾಜ್ಯದಲ್ಲಿ ಮೇ 10 ರಂದು ನಡೆಯಲಿರುವ ವಿಧಾನಸಭಾ ಚುನಾವಣೆ (Assembly election) ಕಾವೇರುತ್ತಿದೆ. ಅಲ್ಲಲ್ಲಿ ಚುನಾವಣಾ ಅಕ್ರಮಗಳು ವರದಿಯಾಗ್ತಿವೆ. ಗುರುವಾರ ಬೆಂಗಳೂರು ಪೊಲೀಸರು (Bangalore Police) ಭರ್ಜರಿ ಬೇಟೆ ಮಾಡಿದ್ದು, ಆಟೋದಲ್ಲಿ ಸಾಗಿಸುತ್ತಿದ್ದ 1 ಕೋಟಿ (1 crore seized from the auto) ನಗದನ್ನು ವಶಪಡಿಸಿಕೊಂಡಿದ್ದಾರೆ.


ಗುರುವಾರ ನಗರದ ಮಾರುಕಟ್ಟೆ ಬಳಿ ಆಟೋ ರಿಕ್ಷಾವೊಂದರಲ್ಲಿ ಲೆಕ್ಕಕ್ಕೆ ಸಿಗದ 1 ಕೋಟಿ ರೂ. ಹಣದೊಂದಿಗೆ ಇಬ್ಬರು ವ್ಯಕ್ತಿಗಳನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

ಆಟೋ ರಿಕ್ಷಾದಲ್ಲಿ ಎರಡು ಬ್ಯಾಗ್‌ಗಳಲ್ಲಿ ಈ ಹಣವನನು ಸಾಗಿಸುತ್ತಿದ್ದ ವೇಳೆ ಸಿಕ್ಕಿಬಿದ್ದ ಇಬ್ಬರನ್ನು ಸುರೇಶ್ ಮತ್ತು ಪ್ರವೀಣ್ ಎಂದು ಗುರುತಿಸಲಾಗಿದೆ.

ನಗದು ಹಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ನೀಡುವಂತೆ ಪೊಲೀಸರು ಇಬ್ಬರನ್ನು ಸ್ಥಳದಲ್ಲೇ ಕೇಳಿದ್ದಾರೆ.

ಆದ್ರೆ, ಈ ಬಗ್ಗೆ ಹೆಚ್ಚು ಪ್ರಶ್ನಿಸಿದಾಗ ದಾಖಲೆಗಳನ್ನು ಒದಗಿಸಲು ವಿಫಲವಾಗಿದ್ದಾರೆ.

ಇಬ್ಬರ ಬಳಿಯೂ ಹಣಕ್ಕೆ ಸಂಬಂಧಿಸಿದ ಯಾವುದೇ ದಾಖಲೆಗಳು ಇರಲಿಲ್ಲ ಎಂದು ಪೊಲೀಸರು ಖಚಿತ ಪಡಿಸಿಕೊಂಡ ನಂತರ ಬಂಧಿಸಿದ್ದಾರೆ.

ಇದನ್ನೂ ಓದಿ : https://vijayatimes.com/motivation-to-online-game/


ಇಬ್ಬರನ್ನೂ ವಶಕ್ಕೆ ತೆಗೆದುಕೊಳ್ಳಲಾಗುತ್ತಿದ್ದು, ಪೊಲೀಸರು ವಶಪಡಿಸಿಕೊಂಡಿರುವ ಹಣವನ್ನು ಆದಾಯ ತೆರಿಗೆ ಇಲಾಖೆಗೆ ಹಸ್ತಾಂತರಿಸಲಾಗಿದೆ (1 crore seized from the auto) ಎಂದು ಪೊಲೀಸರು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

ಈ ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದಕ್ಕೂ ಮುನ್ನ ಏಪ್ರಿಲ್ 6 ರಂದು ಲೆಕ್ಕಕ್ಕೆ ಸಿಗದ ಒಟ್ಟು 50 ಲಕ್ಷ ನಗದನ್ನು ವಶಪಡಿಸಿಕೊಳ್ಳಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಗದಗ ಜಿಲ್ಲೆಯ ದುಂಡೂರು ಚೆಕ್‌ಪೋಸ್ಟ್‌ನಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ 50 ಲಕ್ಷ ಲೆಕ್ಕವಿಲ್ಲದ ನಗದನ್ನು ಪೊಲೀಸರು ಹಗಲಿನಲ್ಲಿ ವಶಪಡಿಸಿಕೊಂಡಿದ್ದಾರೆ ಎಂದು ಮಾಹಿತಿ ಪಡೆದ ಅಧಿಕಾರಿಯೊಬ್ಬರು ತಿಳಿಸಿದರು.

ರಾಜ್ಯದ ಮಾದರಿ ನೀತಿ ಸಂಹಿತೆ (MCC) ಯಲ್ಲಿ ಸಂಸತ್ತಿನ ಚುನಾವಣೆಯ ಕಾರಣ, ಸರಿಯಾದ ದಾಖಲೆಗಳಿಲ್ಲದೆ ದೊಡ್ಡ ಮೊತ್ತದ ನಗದನ್ನು ಸಾಗಿಸಲು ಅನುಮತಿ ಇಲ್ಲ.

ಇದನ್ನೂ ಓದಿ : https://vijayatimes.com/12-lakh-fine-on-sanju-samson/

ಸಾರ್ವಜನಿಕರು ಯಾವುದೇ ದೊಡ್ಡ ಮೊತ್ತವನ್ನು ಸಾಗಿಸುತ್ತಿದ್ದರೆ ಸೂಕ್ತ ದಾಖಲೆಗಳನ್ನು ಹೊಂದಬೇಕು ಎಂದು ಚುನಾವಣಾ ಆಯೋಗ ಈಗಾಗಲೇ ಸ್ಪಷ್ಟ ಸಂದೇಶ ರವಾನಿಸಿದೆ.

ಕರ್ನಾಟಕ ವಿಧಾನಸಭೆ ಚುನಾವಣೆ (Karnataka assembly election) ಮೇ 10 ರಂದು ಒಂದೇ ಹಂತದಲ್ಲಿ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ. ಅದೇ ದಿನವೇ ಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ.

Exit mobile version