ರಾಜ್ಯದಲ್ಲಿ ಇನ್ನು ಪ್ರತಿ ಬುಧವಾರ 10 ಲಕ್ಷ ಕೊರೊನಾ ಲಸಿಕೆ ನೀಡಿಕೆ

ಬೆಂಗಳೂರು ಆ 26 : ರಾಜ್ಯದಲ್ಲಿ ಇನ್ನು ಮುಂದೆ ಪ್ರತಿ ಬುಧವಾರ 10 ಲಕ್ಷ ಕೊರೊನಾ ಲಸಿಕೆಗಳನ್ನು ನೀಡಲಾಗುವುದು ಇದನ್ನು ಲಸಿಕೆ ಉತ್ಸವ ಹೆಸರಿನಲ್ಲಿ ನೀಡಲಾಗುವುದು ಎಂದು ಆರೋಗ್ಯ ಸಚಿವ ಸುಧಾಕರ್ ತಿಳಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಅವರು ಆಗಸ್ಟ್ ತಿಂಗಳಿನಲ್ಲಿ ರಾಜ್ಯಕ್ಕೆ 1.10ಕೋಟಿ ಲಸಿಕೆ ಬಂದಿದ್ದು ಇನ್ನೂ ಕೂಡ ಕೇಂದ್ರದಿಂದ ಹೆಚ್ಚಿನ ಲಸಿಕೆ ಬರಲಿದೆ ಎಂದು ಅವರು ತಿಳಿಸಿದರು.  ಮುಂದಿನ ದಿನಗಳಲ್ಲಿ ವಾರದ 6 ದಿನ ಕೂಡ 5 ಲಕ್ಷ ಲಸಿಕೆಯನ್ನು ನೀಡುವ ಯೋಜನೆಯನ್ನು ಹೊಂದಿದ್ದೇವೆ ಎಂದು ಅವರು ತಿಳಿಸಿದರು.

ರಾಜ್ಯದಲ್ಲಿ ಇಗಾಗಲೇ ಸಾಕಷ್ಟು ಕಡೆಗಳಲ್ಲಿ ಮೊದಲ ಡೋಸ್ ಮುಕ್ತಾಯವಾಗಿದ್ದು, ಎರಡನೇ ಡೋಸ್ ಕೂಡ ಶೇ 20% ಅಷ್ಟು ಮುಗಿದಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ

Exit mobile version