Bengaluru: ಕೇವಲ 3 ವರ್ಷಗಳಲ್ಲಿ ನಕಲಿ ಸಹಿ ಬಳಸಿ ಬಿಎಂಟಿಸಿಯ (17 crore fraud in BMTC) ಸಂಸ್ಥೆಗೆ 17 ಕೋಟಿ ರೂಪಾಯಿ ದುರ್ಬಳಕೆ ಪ್ರಕರಣಕ್ಕೆ ಸಂಬಂಧಿಸಿದಂತೆ 7
ಮಂದಿ ಅಧಿಕಾರಿಗಳ ವಿರುದ್ಧ ಎಫ್ ಐಆರ್ (FIR) ದಾಖಲಾಗಿದ್ದು, ನಿನ್ನೆ ಇವರಲ್ಲಿ ಒಬ್ಬರಾದ ಹಿಂದಿನ ಮುಖ್ಯ ಸಂಚಾರ ವ್ಯವಸ್ಥಾಪಕ ಶ್ರೀರಾಮ್ ಮುಲ್ಕವಾನ್ರನ್ನು ಬಂಧಿಸಲಾಗಿದೆ.
ಬಿಎಂಟಿಸಿ ಡಿಪೋಗಳಲ್ಲಿ ವಾಣಿಜ್ಯ ಮಳಿಗೆಗಳ ಟೆಂಡರ್, ಸ್ವಚ್ಛತಾ ನಿರ್ವಹಣೆ, ಟೆಂಡರ್ ನೀಡಿಕೆಯಲ್ಲಿ ವಂಚನೆ ಎಸಗಲಾಗಿತ್ತು.

ಬಿಎಂಟಿಸಿ ಡಿಪೋಗಳಲ್ಲಿ ವಾಣಿಜ್ಯ ಮಳಿಗೆಗಳ ಟೆಂಡರ್ (Tender), ಸ್ವಚ್ಛತಾ ನಿರ್ವಹಣೆ ಟೆಂಡರ್ ನೀಡಿಕೆಯಲ್ಲಿ ಹಿರಿಯ ಅಧಿಕಾರಿಗಳ ಸಹಿಗಳನ್ನು ನಕಲು ಮಾಡಿ 2020ರ ಮಾರ್ಚ್ ಹಾಗೂ
2023ರ ಅಕ್ಟೋಬರ್ ನಡುವಣ ಅವಧಿಯಲ್ಲಿ ವಂಚನೆ ಎಸಗಲಾಗಿತ್ತು. ಈ ಕುರಿತು ಬಿಎಂಟಿಸಿ ವಿಚಕ್ಷಣಾ ದಳ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದ್ದು,
ಪ್ರಮುಖ ಆರೋಪಿ ಶ್ರೀರಾಮ್ ಮುಲ್ಕವಾನ್ರನ್ನು (Shriram Mulkavan) ಬಂಧಿಸಲಾಗಿದೆ.
ಕೇಸ್ನಲ್ಲಿ ಭಾಗಿಯಾಗಿರುವ ಆರು ಮಂದಿ ಅಧಿಕಾರಿಗಳ ಪಾತ್ರದ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಾಣಿಜ್ಯ ಮಳಿಗೆಗಳಿಗೆ ರಿಯಾಯಿತಿ ನೀಡುವ ಸಂಬಂಧ
ಕಡತ ತಯಾರಿಸಿ ಮಳಿಗೆ ಮಾಲೀಕರಿಗೆ ಬಿಎಂಟಿಸಿಗೆ ಸೇರಿದ ಸ್ಥಳಗಳಲ್ಲಿಅವಕಾಶ (17 crore fraud in BMTC) ಕಲ್ಪಿಸುವ ಸುತ್ತೋಲೆ ಹೊರಡಿಸಲಾಗಿತ್ತು.
ಈ ಕಡತಗಳಿಗೆ ಬಿಎಂಟಿಸಿ ಜಾಗೃತ ದಳದ ನಿರ್ದೇಶಕ ಕೆ.ಅರುಣ್ (K Arun), ವ್ಯವಸ್ಥಾಪಕ ನಿರ್ದೇಶಕಿ ಶಿಖಾ ಅವರ ಸಹಿಗಳನ್ನು ಕಲರ್ ಜೆರಾಕ್ಸ್ ಮಾಡಿ ನಮೂದಿಸಲಾಗಿತ್ತು. ಸಂಪೂರ್ಣ
ಶುಲ್ಕವನ್ನು ಮನ್ನಾ ಮಾಡಬಹುದು ಎಂದು ನಕಲಿ ಟಿಪ್ಪಣಿ ತಯಾರಿಸಲಾಗಿತ್ತು. ಈ ಪರಿಣಾಮ ಬಿಎಂಟಿಸಿಗೆ ಮೊದಲ ಬಾರಿಗೆ 10.50 ಕೋಟಿ ರೂ. ಆರ್ಥಿಕ ನಷ್ಟ ಉಂಟಾಗಿತ್ತು. ಮತ್ತೊಂದು
ವಂಚನೆ ಪ್ರಕರಣದಲ್ಲಿ 6.91 ಕೋಟಿ ರೂ. ನಷ್ಟ ಉಂಟಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳು:
ಶಾಂತಿನಗರ (Shantinagar) ಕಚೇರಿಯಲ್ಲಿ ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ಬಿಎಂಟಿಸಿಯ ಮುಖ್ಯ ಸಂಚಾರ ವ್ಯವಸ್ಥಾಪಕ ಶ್ರೀರಾಮ್ ಮುಲ್ಕವಾನ್, ವಿಭಾಗೀಯ ಸಂಚಾರ ಅಧಿಕಾರಿ
ಶ್ಯಾಮಲಾ ಎಸ್. ಮುದ್ದೋಡಿ (Shyamala S Muddodi), ಸಹಾಯಕ ಸಂಚಾರ ವ್ಯವಸ್ಥಾಪಕಿ ಬಿ.ಕೆ. ಮಮತಾ, ಮೇಲ್ವಿಚಾರಕಿ ಟಿ. ಅನಿತಾ, ಕಿರಿಯ ಸಹಾಯಕ ಪ್ರಕಾಶ್ ಕೊಪ್ಪಳ, ಸಹಾಯಕ
ಸಂಚಾರ ನಿರೀಕ್ಷಕಿ ಗುಣಶೀಲಾ, ಕಿರಿಯ ಸಹಾಯಕ ಕೆ. ವೆಂಕಟೇಶ್ (K Venkatesh) ಅವರು ಈ ವಂಚನೆಯಲ್ಲಿ ಭಾಗಿಯಾಗಿ ಸಂಸ್ಥೆಗೆ ಆರ್ಥಿಕ ನಷ್ಟ ಉಂಟು ಮಾಡಿದ್ದಾರೆ ಎಂದು ದೂರಿನಲ್ಲಿ
ಆರೋಪಿಸಲಾಗಿದ್ದು, ಏಳು ಮಂದಿ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಅಧಿಕಾರಿ ತಿಳಿಸಿದರು.
ಯಶವಂತಪುರ ಟಿಟಿಎಂಸಿಯ (Yashavantapura TTMC) ಸ್ವಚ್ಛತಾ ನಿರ್ವಹಣೆ ಮಾಡುತ್ತಿದ್ದ ಶ್ರೀ ಲಕ್ಷ್ಮೀ ಎಂಟರ್ಪ್ರೈಸಸ್ಗೆ (Shri Lakshmi Enterprises) ಟೆಂಡರ್ ಅವಧಿ ಮುಕ್ತಾಯಗೊಂಡ
ಬಳಿಕವೂ ಉನ್ನತ ಅಧಿಕಾರಿಗಳ ಅನುಮತಿ ಇಲ್ಲದೆ ಟೆಂಡರ್ ಮುಂದುವರಿಸಲು ಅವಕಾಶ ನೀಡಲಾಗಿತ್ತು. ಇದರಿಂದಲೂ ಸಂಸ್ಥೆಯ ಬೊಕ್ಕಸಕ್ಕೆ ನಷ್ಟವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನು ಓದಿ: 20 ಜಿಲ್ಲೆಗಳಲ್ಲಿ ಲಿಂಗಾನುಪಾತದಲ್ಲಿ ಭಾರೀ ಇಳಿಕೆ: 9 ಜಿಲ್ಲೆಗಳಲ್ಲಿ ಸಾಧಾರಣ ಕುಸಿತ ದಾಖಲು
- ಭವ್ಯಶ್ರೀ ಆರ್.ಜೆ