೨೦೨೦ರ ಟಾಪ್ ೧೦ ಸೂಪರ್ ಹಿಟ್ ಸಿನಿಮಾಗಳು

ಗಾಂಧೀನಗರ ಅಂದ್ರೆ ಸಿನಿಮಾಗಳು ಫಿಕ್ಸ್ . ವಿಭಿನ್ನ ಕಥೆಗಳನ್ನು ಪೋಣಿಸಿ ಸಿನಿಪ್ರೇಕ್ಷರನ್ನು ಸಾಲು ಸಾಲು ಸಿನಿಮಾಗಳು ರಂಜಿಸುತ್ತದೆ. ಹಾಗಿದ್ರೆ ಈ ವರ್ಷ ಜನರನ್ನು ರಂಜಿಸಿದ ಟಾಪ್ ೧೦ ಸೂಪರ್ ಸಿನಿಮಾಗಳನ್ನು ಮತ್ತೊಮ್ಮೆ ನೆನಪಿಸ್ಲೇಬೇಕು.. ೨೦೨೧ ಕ್ಕೆ ಈಗ್ಲೇ ದಿನಗಣನೆ ಶುರುವಾಗಿದೆ . ಹೊಸ ವರ್ಷವನ್ನು ಬರಮಾಡಲು ಜನರು ತುದಿಗಾಲಲ್ಲಿ ನಿಂತಿದ್ದಾರೆ .. ಕೊರೋನಾದಿಂದ ಬಳಲಿರುವ ಜನರಿಗೆ ಕೊಂಚ ಮಟ್ಟಿಗೆ ರಿಲಾಕ್ಸ್ ನೀಡಿರೋದು ಸಿನಿಮಾಗಳೇ. ಹಾಗಿದ್ರೆ ೨೦೨೦ರಲ್ಲಿಜನರನ್ನು ರಂಜಿಸಿದ ಟಾಪ್ ಟೆನ್ ಕನ್ನಡ ಚಿತ್ರಗಳು ಯಾವುದು ಅನ್ನೋದು ಇಲ್ಲಿದೆ .

ಲವ್ ಮಾಕ್ಟೇಲ್ . ಜನವರಿಯಲ್ಲಿ ತೆರೆಕಂಡ ಸಿನಿಮಾ. ಡಾರ್ಲಿಂಗ್ ಕೃಷ್ಣ ಮಿಲನಾ ನಾಗರಾಜ್ ಅಭಿನಯದ ಸೂಪರ್ ಡೂಪರ್ ಚಿತ್ರ. ಲವ್ ಮಾಕ್ಟೇಲ್ ಸಿನಿಮಾಕ್ಕೆ ಮೊದಲಬಾರಿ ಡೈರೆಕ್ಟರ್ ಕ್ಯಾಪ್ ತೊಟ್ಟ ಡಾರ್ಲಿಂಗ್ ಕೃಷ್ಣ ನಿರ್ದೇಶನದಲ್ಲೂ ಸೈ ಅನಿಸಿಕೊಂಡಿದ್ದಾರೆ .ತಮ್ಮ ನಿರೀಕ್ಷೆಗೂ ಹೆಚ್ಚಿನ ಯಶಸ್ಸನ್ನು ಚಿತ್ರ ಪಡೆದುಕೊಂಡಿದೆ . ಕೇವಲ ಚಿತ್ರ ಮಂದಿರ ಮಾತ್ರವಲ್ಲದೆ ಓಟಿಟಿಯಲ್ಲೂ ಹೆಚ್ಚಿನ ವೀಕ್ಷಣೆಯನ್ನು ಪಡೆದುಕೊಂಡಿದೆ.

ಕಾಣದಂತೆ ಮಾಯವಾದನು. ಈ ಚಿತ್ರ ಕೂಡ ಜನವರಿಯಲ್ಲಿ ತೆರೆಕಂಡು ಭರ್ಜರಿ ಪ್ರದರ್ಶನವನ್ನು ಪಡೆದುಕೊಂಡಿದೆ . ರವಿಕಿರಣ್ ವಿಕಾಸ್ ನಿರ್ದೇಶಿಸಿ ನಟಿಸಿರೋ ಹಾರರ್ ಕಮ್ ರೋಮ್ಯಾಂಟಿಕ್ ಕಾಮಿಡಿ ಸಿನಿಮಾ. ಇವರಿಗೆ ನಾಯಕಿಯಾಗಿ ಸಿಂಧು ಲೋಕನಾಥ್ ಬಣ್ಣ ಹಚ್ಚಿದ್ರು ನಾನು ಮತ್ತು ಗುಂಡ . ವಿಭಿನ್ನ ಕಥೆಯನ್ನು ಹೊಂದಿರೋ ಚಿತ್ರ. ಜನವರಿಯಲ್ಲಿ ತೆರೆಕಂಡ ಈ ಸಿನಿಮಾ ಲಕ್ಷಾಂತರ ಜನರ ಮನಸೂರೆಗೊಳಿಸಿದೆ . ಗುಂಡ ಅನ್ನೋ ನಾಯಿ ಹಾಗೂ ಆಟೋ ಚಾಲಕ ಶಂಕ್ರ ನಡುವಿನ ಒಡನಾಟ ಮನೋಜ್ಙವಾಗಿ ಮೂಡಿ ಬಂದಿದೆ . ಶ್ರೀನಿವಾಸ್ ತಿಮ್ಮಯ್ಯ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ .
ಬದುಕಿನ ಪಾಠವನ್ನು ತಿಳಿಸಿಕೊಟ್ಟ ಮಾಯಾಬಜಾರ್ ಅನ್ನೋ ಚಿತ್ರ ಮೋಡಿ ಮಾಡಿದ್ದು ಅಷ್ಟಿಷ್ಟಲ್ಲ ಬದುಕಿನ ತಿರುವುಗಳೇ ಚಿತ್ರದ ಹೈಲೆಟ್ ಹಾಸ್ಯದ ಚಟಾಕಿಗಳು ಚಿತ್ರವನ್ನು ಮತ್ತೆ ಮತ್ತೆ ನೋಡುವಂತೆ ಮಾಡಿದೆ. ಫೆ ತೆರೆಕಂಡಿರೋ ಸಿನಿಮಾಕ್ಕೆ ರಾಧಾಕೃಷ್ಣ ರೆಡ್ಡಿ ಆಕ್ಷನ್ ಕಟ್ ಹೇಳಿದ್ದಾರೆ.

ಮಾಯಾಬಜಾರ್ ಗೆ ಟಕ್ಕರ್ ಕೊಡಲು ಫೆಬ್ರವರಿಯಲ್ಲಿ ತೆರೆಗೆ ಬಂದಿರೋ ಸಿನಿಮಾ ಪಾಪ್ ಕಾರ್ನ್ ಮಂಕಿ ಟೈಗರ್ . ಮಂಕಿಸೀನ ಅಲಿಯಾಸ್ ಟೈಗರ್ ಸೀನ ಹಾಗೂ ಪಾಪ್ ಕಾರ್ನ್ ದೇವಿ ಪಾತ್ರಗಳ ಜೀವನದಲ್ಲಿ ನಡೆಯುವ ಏರಿಳಿತಗಳೇ ಸಿನಿಮಾದ ಮೈನ್ ಕಥೆ ಈ ಸಿನಿಮಾನೂ ಬಾಕ್ಸ್ ಆಫಿಸನ್ನು ಕೊಳ್ಳೆ ಹೊಡೆದಿದೆ.

ಶಿವಾಜಿ ಸುರತ್ಕಲ್ ಹಾಗೂ ಮಾಲ್ಗುಡಿ ಡೇಸ್ ವಿಭಿನ್ನ ಸ್ಟೋರಿ .ಆದ್ರೆ ಮನರಂಜನೆ ಮಾತ್ರ ಸೇಮ್ ಟು ಸೇಮ್ ರಮೇಶ್ ಅರವಿಂದ್ ಹಾಗೂ ವಿಜಯ ರಾಘವೇಂದ್ರ ಅಭಿನಯ ಎರಡು ಚಿತ್ರಗಳ ಶಾರ್ಪ್ ಲುಕ್ಕಲ್ಲಿ ಮೂಡಿಬಂದಿದ್ದು ;ಸಿನಿ ಪ್ರೀಯರ ಮೈ ನವಿರೇಳಿಸಿದೆ. ಇವರೆಡು ಚಿತ್ರಗಳು ತೆರೆಕಂಡಿರೋದು ಫೆಬ್ರವರಿಯಲ್ಲಿಯೆ.

ಅಂದಹಾಗೆ ಇನ್ನೆರಡು ಸಿನಿಮಾಗಳು ಫೆಬ್ರವರಿಯಲ್ಲಿ ತೆರೆಕಂಡಿರೋದು ಒಂದು ಪ್ರ ಜ್ವಲ್ ದೇವರಾಜ್ ಅಭಿನಯದ ಜಂಟಲ್ ಮ್ಯಾನ್ ಹಂಪಿ ನಿರ್ದೇಶನದಲ್ಲಿ ಮೂಡಿಬಂದ ಸೂಪರ್ ಹಿಟ್ ಚಿತ್ರ .ಇನ್ನೊಂದು ದಿಯಾ ಅಶೋಕ್ ಕೆ .ಎಸ್ ನಿರ್ದೇಶನದಲ್ಲಿ ತೆರೆಕಂಡಿರೋ ವಿಭಿನ್ನ ಸಿನಿಮಾ .ಆದ್ರೆ ಹೊಸಬರ ಸಿನಿಮಾ ದಿಯಾ ಹವಾ ಇನ್ನೂ ಕಮ್ಮಿಯಾಗಿಲ್ಲ..

ಇದಿಷ್ಟು ಈ ವರ್ಷದ ಸೂಪರ್ ಸಿನಿಮಾಗಳು . ಇದೀಗ ಕೊರೋನಾ ಕಳವಳಿ ಕಡಿಮೆಯಾಗ್ತಿದೆ .. ಸಿನಿರಂಗ ತಮ್ಮ ಚಟುವಟಿಕೆಯನ್ನು ಬಿರುಸುಗೊಳಿಸಿದೆ. ಇತ್ತ ಮುಂದಿನ ವರ್ಷಕ್ಕೆ ಸಾಲು ಸಾಲು ಸಿನಿಮಾಗಳು ತೆರೆಗೆ ಬರಲು ರೆಡಿಯಾಗಿದೆ .

Exit mobile version