2030ರೊಳಗೆ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸಲು ಸೂಕ್ತ ಕಾರ್ಯಯೋಜನೆ

ಬೆಂಗಳೂರು, ಜ. 08: 2030ರೊಳಗೆ 17 ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸಲು ಸೂಕ್ತ ಕಾರ್ಯಯೋಜನೆ ರೂಪಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಅವರ ಅಧ್ಯಕ್ಷತೆಯಲ್ಲಿ ನಡೆದ ಪ್ರಥಮ ಯೋಜನಾ ಮಂಡಳಿ ಸಭೆಯಲ್ಲಿ ಮಾತನಾಡಿದ ಅವರು, 17 ಸುಸ್ಥಿರ ಅಭಿವೃದ್ಧಿಯಲ್ಲಿ ಕರ್ನಾಟಕ 100ಕ್ಕೆ 66 ಅಂಕಗಳೊಂದಿಗೆ ದೇಶದಲ್ಲಿ 6ನೇ ಸ್ಥಾನದಲ್ಲಿದೆ. ಬಡತನ ಮುಕ್ತ, ಹಸಿವು ಮುಕ್ತ, ಲಿಂಗ ಸಮಾನತೆ, ಕೈಗಾರಿಕೆ, ನಾವೀನ್ಯತೆ ಮತ್ತು ಮೂಲಸೌಕರ್ಯ ಹಾಗೂ ಸುಸ್ಥಿರ ನಗರಗಳು ಮತ್ತು ಸಮುದಾಯಗಳು ಮುಂತಾದ  ಆರು ಗುರಿಗಳಲ್ಲಿ ನಿರೀಕ್ಷಿತ ಪ್ರಗತಿ ಸಾಧಿಸಬೇಕಿದೆ. ಈ ಗುರಿಗಳ ಪೈಕಿ ವಿಷಯವಾರು ತಜ್ಞರ ಅಧ್ಯಯನ ಮತ್ತು ಸಲಹೆಗಳನ್ನು ಆಧರಿಸಿ ವರದಿ ನೀಡಲು ರಾಜ್ಯ ಯೋಜನಾ ಮಂಡಳಿ ಕ್ರಮ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.

ರಾಜ್ಯಯೋಜನಾ ಮಂಡಳಿಯ ಉಪಾಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ ಅವರು ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಹಾಗೂ ಈವರೆಗೆ ಮಂಡಳಿ ಕೈಗೊಂಡ ಅಧ್ಯಯನಗಳ ಬಗ್ಗೆ ವಿವರಣೆಗಳನ್ನು ನೀಡಿದರು.

 ಕರ್ನಾಟಕ ರಾಜ್ಯ ಯೋಜನಾ ಮಂಡಳಿಯನ್ನು’ಕರ್ನಾಟಕ ರಾಜ್ಯನೀತಿ ಮತ್ತುಯೋಜನೆ ಆಯೋಗ ಎಂದು ಮರುನಾಮಕರಣ ಮಾಡುವುದರೊಂದಿಗೆ ಬಲವರ್ಧನೆ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಸಲಹಾ ಸಮಿತಿಗಳನ್ನು ರಚಿಸಲು ಹಾಗೂ ಸಲಹಾ ಸಮಿತಿ ರಚನೆಯನ್ನು ಅನುಮೋದಿಸಲಾಯಿತು.

5 ತಾಂತ್ರಿಕ ವಿಭಾಗಗಳಿಗೆ ಅನುಮೋದನೆ ಹಾಗೂ ಯೋಜನಾ ಮಂಡಳಿಯಲ್ಲಿ 2 ರಿಸರ್ಚ್ ಆಫೀಸರ್ ಹುದ್ದೆಗಳು ಇದ್ದು, ಹೆಚ್ಚುವರಿಯಾಗಿ 3 ರಿಸರ್ಚ್ ಆಫೀಸರ್ ಹುದ್ದೆಗಳ ಮಂಜೂರಾತಿಗೆ ತೀರ್ಮಾನ. ಕರ್ನಾಟಕದಲ್ಲಿ’ಸಿ.ಎಂಡ್ಯಾಶ್ಬೋರ್ಡ್’ಅಭಿವೃದ್ಧಿಪಡಿಸುವುದು. ಈ ಡ್ಯಾಶ್ ಬೋರ್ಡ್ ನಿಂದ ಏಕಕಾಲದಲ್ಲಿ ಆರ್ಥಿಕ ವ್ಯವಸ್ಥೆಯ ಮೇಲ್ವಿಚಾರಣೆ ಹಾಗು ನಿರ್ಧರಿತ ಸಮಯದಲ್ಲಿಅಭಿವೃದ್ಧಿ ಯೋಜನೆಗಳುಪುರ್ಣಗೊಳಿಸಲು ಸಾಧ್ಯವಾಗಲಿದೆ.  ಪ್ರಾದೇಶಿಕ ಸಮತೋಲನೆಗೆ ರಾಜ್ಯದ ಸರಾಸರಿಗಿಂತ ಕಡಿಮೆ ಇರುವ ತಾಲ್ಲೂಕುಗಳಿಗೆ ಹೆಚ್ಚಿನ ಒತ್ತು ನೀಡುವುದು ಅಲ್ಲದೇ ಇತರೇ ಅನೇಕ ಸುಸ್ಥಿರ ಅಭಿವೃದ್ಧಿಗಳ ಕಾರ್ಯಯೋಜನೆಯನ್ನು ರೂಪಿಸಿದ್ದಾರೆ.

ಸಭೆಯಲ್ಲಿ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ಯೋಜನಾ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ: ಶಾಲಿನಿ ರಜನೀಶ್, ಅಭಿವೃದ್ಧಿ ಆಯುಕ್ತೆ ವಂದಿತಾ ಶರ್ಮಾ, ಹಾಗೂ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.

Exit mobile version