ಬ್ರಿಟಿಷರು ಜಾರಿಗೆ ತಂದಿದ್ದ ಅಪರಾಧ ಕಾನೂನುಗಳಿಗೆ (3 newbills introduced in loksabha) ವಿದಾಯ ಹೇಳಿರುವ ಭಾರತ ಇದೀಗ ತನ್ನದೇ ಆದ ಅಪರಾಧ ಸಂಹಿತೆಯನ್ನು ರೂಪಿಸಿದೆ. ಮೂರು
ಹೊಸ ಅಪರಾಧ ಸಂಹಿತೆಗಳನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ (Union Home Minister Amit Shah) ಅವರು ಲೋಕಸಭೆಯಲ್ಲಿ ಮಂಡಿಸಿದ್ದು, ಈ ಮೂರು ಕಾನೂನುಗಳು
ರಾಷ್ಟ್ರಪತಿಗಳ (President) ಅಂಕಿತದೊಂದಿಗೆ ಜಾರಿಗೆ ಬರಲು ಸಿದ್ದವಾಗಿವೆ. ಈ ನೂತನ ಭಾರತೀಯ ನಾಗರಿಕ ಸಂಹಿತೆಯ ವಿಶೇಷತೆಗಳೇನು ಎಂಬುದರ ವಿವರ ಇಲ್ಲಿದೆ.
ನೂತನ ಭಾರತೀಯ ನ್ಯಾಯ ಸಂಹಿತೆಯಲ್ಲಿ ಸಾಕಷ್ಟು ಬದಲಾವಣೆ ತರಲಾಗಿದೆ. ಈ ಹಿಂದಿನ ಐಪಿಸಿಯಲ್ಲಿದ್ದ (IPC) 511 ಸೆಕ್ಷನ್ಗಳ ಸಂಖ್ಯೆಯನ್ನು ಬಿಎನ್ಎಸ್ನಲ್ಲಿ 358ಕ್ಕೆ ಇಳಿಸಲಾಗಿದೆ. ಇನ್ನೊಂದೆಡೆ
20 ಹೊಸ ಅಪರಾಧಗಳನ್ನು ಭಾರತೀಯ ನಾಗರಿಕ ಸಂಹಿತೆಯಡಿ ಸೇರಿಸಲಾಗಿದೆ. 33 ವಿವಿಧ ಪ್ರಕರಣಗಳಲ್ಲಿ ಜೈಲು ಶಿಕ್ಷೆಯನ್ನು (Imprisonment) ಏರಿಕೆ ಮಾಡಲಾಗಿದೆ. 83 ಪ್ರಕರಣಗಳಲ್ಲಿ ದಂಡದ
ಪ್ರಮಾಣವನ್ನು ಹೆಚ್ಚಳ ಮಾಡಲಾಗಿದೆ. 23 ಅಪರಾಧಗಳಿಗೆ ಕಡ್ಡಾಯ ಕನಿಷ್ಠ ಶಿಕ್ಷೆ ನೀಡಲಾಗಿದೆ. ಹಿಂದಿನ ಐಪಿಸಿಯಲ್ಲಿದ್ದ (IPC) 19 ಸೆಕ್ಷನ್ಗಳನ್ನು (Section) ರದ್ದುಗೊಳಿಸಲಾಗಿದೆ.
ಭಾರತೀಯ ಅಪರಾಧ ಪ್ರಕ್ರಿಯೆ ಸಂಹಿತೆ (CRPC) ಬದಲಿಗೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಜಾರಿಗೆ ಬರುತ್ತಿದೆ. CRPCಯಲ್ಲಿದ್ದ 484 ಸೆಕ್ಷನ್ಗಳ ಸಂಖ್ಯೆಯನ್ನು 531ಕ್ಕೆ ಹೆಚ್ಚಳ ಮಾಡಲಾಗಿದೆ.
9 ಹೊಸ ಅಧ್ಯಾಯ, 39 ಉಪ ವಿಭಾಗಗಳನ್ನು ಸಂಯೋಜಿಸಲಾಗಿದೆ. CRPCಯಲ್ಲಿದ್ದ 14 ಸೆಕ್ಷನ್ಗಳನ್ನು ರದ್ದುಗೊಳಿಸಲಾಗಿದೆ. ಇನ್ನು ಭಾರತೀಯ ಸಾಕ್ಷ್ಯ ಕಾಯಿದೆ (Indian Evidence Act) ಬದಲಿಗೆ
ಭಾರತೀಯ ಸಾಕ್ಷಿ ಅಧಿನಿಯಮ ಜಾರಿಗೆ (3 newbills introduced in loksabha) ತರಲಾಗಿದೆ. 157 ವಿಭಾಗಗಳ ಸಂಖ್ಯೆಯನ್ನು 170ಕ್ಕೆ ಏರಿಕೆ ಮಾಡಲಾಗಿದೆ. ಹೊಸದಾಗಿ 2 ವಿಭಾಗಗಳು ಹಾಗೂ 6
ಉಪ-ವಿಭಾಗಗಳನ್ನು ಸೇರಿಸಲಾಗಿದೆ. ಇನ್ನು ಅಪ್ರಾಪ್ತ ವಯಸ್ಸಿನ ಬಾಲಕಿಯರ ಮೇಲಿನ ಸಾಮೂಹಿಕ ಅತ್ಯಾಚಾರಕ್ಕೆ ಜೀವಾವಧಿ ಶಿಕ್ಷೆ ಅಥವಾ ಮರಣ ದಂಡನೆ (Life imprisonment or death
penalty for gang rape of minor girls) ಶಿಕ್ಷೆ ನೀಡಲಾಗಿದೆ.
ಸಾಮೂಹಿಕ ಅತ್ಯಾಚಾರಗೈದು ಕೊಲೆ ಮಾಡಿದರೆ ಗಲ್ಲುಶಿಕ್ಷೆ (Gang rape and murder punishable by death) ವಿಧಿಸಲು ಅವಕಾಶ ಕಲ್ಪಿಸಲಾಗಿದೆ. ಅದೇ ರೀತಿ ನೂತನ ಅಪರಾಧ
ಸಂಹಿತೆಯಲ್ಲಿ ಭಯೋತ್ಪಾದನೆಗೆ ಹೊಸ ವ್ಯಾಖ್ಯಾನ ನೀಡಲಾಗಿದೆ.
ಜೀವಹಾನಿ, ಆಸ್ತಿ ಹಾನಿ, ಖೋಟಾ ನೋಟು ಚಲಾವಣೆಗೆ, ಆರ್ಥಿಕ ಅಪರಾಧಗಳನ್ನು ಭಯೋತ್ಪಾದನೆ ವ್ಯಾಪ್ತಿಗೆ ತರಲಾಗಿದೆ. ಭಯೋತ್ಪಾದಕ ಕೃತ್ಯಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಲು ಅವಕಾಶ
ನೀಡಲಾಗಿದೆ.ಇನ್ನು ಈ ಮೂರು ಹೊಸ ಕಾನೂನುಗಳನ್ನು ರಚಿಸಲು ಕೇಂದ್ರ ಸರ್ಕಾರ 18 ರಾಜ್ಯಗಳು, 6 ಕೇಂದ್ರಾಡಳಿತ ಪ್ರದೇಶಗಳು, ಮಾಜಿ ಹಾಗೂ ಹಾಲಿ ಸಂಸದರು ಮತ್ತು ಅಧಿಕಾರ ವರ್ಗ,
ಸುಪ್ರೀಂಕೋರ್ಟ್ ನ್ಯಾಯಾಧೀಶರು, 16 ಹೈಕೋರ್ಟ್ ನ್ಯಾಯಾಧೀಶರು, 27 ನ್ಯಾಯಾಂಗ ಅಕಾಡೆಮಿಗಳು, ಸಾಮಾಜಿಕ ಸಂಸ್ಥೆಗಳು, ಹಿರಿಯ ವಕೀಲರು ಸೇರಿದಂತೆ ಸುಮಾರು 3,200ಕ್ಕೂ
ಹೆಚ್ಚು ಸಲಹೆಗಳನ್ನು ಸ್ವೀಕರಿಸಲಾಗಿದೆ.
ಇದನ್ನು ಓದಿ: ಬಿಜೆಪಿ-ಜೆಡಿಎಸ್ ಮೈತ್ರಿ: ಪ್ರಧಾನಿ ಮೋದಿ ಭೇಟಿಯಾದ ಹೆಚ್.ಡಿ. ದೇವೇಗೌಡ ಹಾಗೂ ಪುತ್ರರು