ದೇಶದಲ್ಲಿ 24 ಗಂಟೆಗಳಲ್ಲಿ 38,164 ಹೊಸ ಕೋವಿಡ್ ಪ್ರಕರಣಗಳು

ನವದೆಹಲಿ, ಜು. 19: 24 ಗಂಟೆಗಳಲ್ಲಿ ದೇಶದಲ್ಲಿ 38,164 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಈ ಅವಧಿಯಲ್ಲಿ 499 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. ಇದು ಮೂರು ತಿಂಗಳಲ್ಲಿ ವರದಿಯಾದ ಅತ್ಯಂತ ಕಡಿಮೆ ದೈನಂದಿನ ಸಾವುಗಳಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಈ ಮೂಲಕ ದೇಶದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 3,11,44,229ಕ್ಕೆ ಏರಿಕೆಯಾಗಿದ್ದು, ಸಕ್ರಿಯ ಪ್ರಕರಣಗಳು 4,21,665ಕ್ಕೆ ಇಳಿಕೆಯಾಗಿದೆ. ಜೊತೆಗೆ ಈವರೆಗೆ ದೇಶದಲ್ಲಿ ಒಟ್ಟು 4,14,108 ಮಂದಿ ಕೋವಿಡ್‌ನಿಂದ ಸಾವಿಗೀಡಾಗಿದ್ದಾರೆ ಎಂದು ಸಚಿವಾಲಯವು ಹೇಳಿದೆ.

ದೇಶದಲ್ಲಿ ಭಾನುವಾರ 14,63,593 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಈವರೆಗೆ ಒಟ್ಟು 44,54,22,256 ಕೋವಿಡ್‌ ಪರೀಕ್ಷೆಗಳನ್ನು ನಡೆಸಲಾಗಿದೆ. ಇದುವರೆಗೆ 3,03,08,456 ಮಂದಿ ಸೋಂಕಿನಿಂದ ಗುಣಮುಖರಾಗಿದ್ದರೆ, ಮರಣ ಪ್ರಮಾಣವು ಶೇಕಡ 1.33ರಷ್ಟಿದೆ. ದೇಶದಲ್ಲಿ ಈವರೆಗೆ 40.64 ಕೋಟಿ ಲಸಿಕೆಯ ಡೋಸ್‌ಗಳನ್ನು ವಿತರಿಸಲಾಗಿದೆ.

Exit mobile version