ಸೈಬರ್ ವಂಚನೆಗೆ ಕಡಿವಾಣ ಹಾಕಲು ಮುಂದಾದ ಸರ್ಕಾರ: 4 ಗಂಟೆ ವಿಳಂಬವಾಗಲಿದೆಯಾ 2000ರೂ. ಮೀರಿದ ಯುಪಿಐ ವಹಿವಾಟು

New Delhi: ಆನ್​ಲೈನ್​ (Online) ವಂಚನೆ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ (4 Hour Delay – UPI Transaction) ಹೆಚ್ಚುತ್ತಿದ್ದು, ಈ ಹಿನ್ನೆಲೆಯಲ್ಲಿಇದಕ್ಕೆ ಕಡಿವಾಣ ಹಾಕಲು

ಮುಂದಾಗಿರುವ ಸರ್ಕಾರ, 2 ಸಾವಿರ ರೂ. ಮೀರಿದ ಮೊತ್ತವನ್ನು ಮೊದಲ ಬಾರಿಗೆ ಡಿಜಿಟಲ್ (Digital) ಪಾವತಿ ವ್ಯವಸ್ಥೆ ಬಳಸಿ ವರ್ಗಾವಣೆ ಮಾಡುವಾಗ 4 ಗಂಟೆಗಳ ಸಮಯ ಮಿತಿ

ನಿಗದಿಪಡಿಸುವ (4 Hour Delay – UPI Transaction) ಬಗ್ಗೆ ಚಿಂತನೆ ನಡೆಸಿದೆ.

ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಸುರಕ್ಷಿತಗೊಳಿಸಲು ಈ ಕ್ರಮ ಅಗತ್ಯ ಎಂಬುದು ಅಧಿಕಾರಿಗಳ ಅಭಿಪ್ರಾಯವಾಗಿದ್ದು, ಸೈಬರ್ ಸೆಕ್ಯುರಿಟಿ (Cyber Security) ಹೆಚ್ಚಿಸಲು ಇಂಥದೊಂದು ಕ್ರಮ

ಅನಿವಾರ್ಯ ಎಂದು ಕೂಡ ಹೇಳಲಾಗಿದೆ. ಒಂದು ವೇಳೆ ಸರ್ಕಾರ ಈ ನಿಯಮ ಜಾರಿಗೊಳಿಸಿದ್ರೆ ಇಮಿಡೇಟ್ ಪೇಮೆಂಟ್ ಸರ್ವೀಸ್ (Immediate Payment Service), ರಿಯಲ್ ಟೈಮ್ ಗ್ರಾಸ್

ಸೆಟ್ಲಮೆಂಟ್ (ಆರ್ ಟಿಜಿಎಸ್) ಹಾಗೂ ಯುನಿಫೈಡ್ ಪೇಮೆಂಟ್ಸ್ ಇಂಟರ್ ಫೇಸ್ (Unified Payments Interface) ಮೂಲಕ ಮಾಡುವ ದೊಡ್ಡ ಪ್ರಮಾಣದ ಡಿಜಿಟಲ್ ಪಾವತಿಗಳಿಗೆ ಅನ್ವಯಿಸಲಿದೆ.

ಯುಪಿಐ (UPI) ಖಾತೆ ತೆರೆದ ಬಳಿಕ ಮೊದಲ ವಹಿವಾಟನ್ನು ವಿಳಂಬಗೊಳಿಸಲು ಅಥವಾ ತಡಮಾಡುವ ಉದ್ದೇಶದಿಂದ ಮಾತ್ರ ಈ ಯೋಜನೆಯನ್ನು ರೂಪಿಸಲಾಗಿಲ್ಲ. ಬದಲಿಗೆ ಇಬ್ಬರು ಬಳಕೆದಾರರ

ನಡುವಿನ ಪ್ರತಿ ಮೊದಲ ವಹಿವಾಟನ್ನು ನಿಯಂತ್ರಿಸಲು ರೂಪಿಸಲಾಗಿದೆ. ಉದಾಹರಣೆಗೆ ಪ್ರಸ್ತುತ ಒಬ್ಬ ಬಳಕೆದಾರ ಹೊಸ ಯುಪಿಐ ಖಾತೆ ತೆರೆದಾಗ ಆತ ಮೊದಲ 24 ಗಂಟೆಗಳಲ್ಲಿ ಗರಿಷ್ಠ 5,000ರೂ. ಕಳುಹಿಸಬಹುದು.

ಅದೇ ರೀತಿ ರಾಷ್ಟ್ರೀಯ ಎಲೆಕ್ಟ್ರಾನಿಕ್ ಫಂಡ್ಸ್ ಟ್ರಾನ್ಸ್ ಫರ್ (National Electronic Funds Transfer) ವ್ಯವಸ್ಥೆಯಲ್ಲಿ ಕೂಡ ಅದನ್ನು ಆಕ್ಟಿವೇಟ್ ಮಾಡಿದ ಮೊದಲ 24 ಗಂಟೆಗಳಲ್ಲಿ 50,000ರೂ.

ಮೊತ್ತವನ್ನು ಪೂರ್ಣ ಪ್ರಮಾಣದಲ್ಲಿ ಅಥವಾ ಭಾಗಗಳಲ್ಲಿ ಪಾವತಿಸಬಹುದು. ಆದರೆ, ಯೋಜನೆ ಪ್ರಕಾರ ಪ್ರತಿಬಾರಿ ಮೊದಲ ಬಾರಿಗೆ 2,000ರೂ.ಗಿಂತ ಅಧಿಕ ಮೊತ್ತವನ್ನು ಈ ಹಿಂದೆ ವಹಿವಾಟು

ನಡೆಸದಿರುವ ಇನ್ನೊಬ್ಬರು ಬಳಕೆದಾರರಿಗೆ ಪಾವತಿಸಿದಾಗ ನಾಲ್ಕು ಗಂಟೆಗಳ ಸಮಯ ಮಿತಿ ಪ್ರತಿ ಬಾರಿ ಅನ್ವಯಿಸಲಿದೆ.

ಪ್ರಥಮ ಬಾರಿಗೆ 2,000ರೂ.ಗಿಂತ ಅಧಿಕ ಮೊತ್ತದ ಡಿಜಿಟಲ್ ವಹಿವಾಟು ನಡೆಸುವವರಿಗೆ 4 ಗಂಟೆಗಳ ಸಮಯ ಮಿತಿ ನಿಗದಿಪಡಿಸಲು ಯೋಚಿಸಿದ್ದು, ಸರ್ಕಾರ ಹಾಗೂ ರಿಸರ್ವ್ ಬ್ಯಾಂಕ್ ಆಫ್

ಇಂಡಿಯಾ (Reserve Bank of India), ವಿವಿಧ ಸಾರ್ವಜನಿಕ ಹಾಗೂ ಖಾಸಗಿ ವಲಯದ ಬ್ಯಾಂಕುಗಳು ಹಾಗೂ ಗೂಗಲ್ (Google), ರೇಜರ್ ಪೇಯಂತಹ ಟೆಕ್ ಕಂಪನಿಗಳು ಸೇರಿದಂತೆ

ಕೈಗಾರಿಕಾ ಷೇರುದಾರರ ಜೊತೆಗೆ ಮಂಗಳವಾರ ನಡೆಯುವ ಸಭೇಯಲ್ಲಿ ಈ ವಿಚಾರ ಪ್ರಸ್ತಾಪಿಸಲಾಗುವುದು’ ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಅತೀಹೆಚ್ಚು ಆನ್​ಲೈನ್ ವಂಚನೆ ಪ್ರಕರಣಗಳು:
2022-23ನೇ ಹಣಕಾಸು ಸಾಲಿನಲ್ಲಿ ಡಿಜಿಟಲ್ ಪಾವತಿ ವಿಭಾಗದಲ್ಲಿ ಅತ್ಯಧಿಕ ಸಂಖ್ಯೆಯ ವಂಚನೆ ಪ್ರಕರಣಗಳು ದಾಖಲಾಗಿವೆ ಎಂದು ಆರ್ ಬಿಐ (RBI) ವಾರ್ಷಿಕ ವರದಿ 2022-23 ತಿಳಿಸಿದೆ.

2023ನೇ ಹಣಕಾಸು ಸಾಲಿನಲ್ಲಿ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಒಟ್ಟು 30,252 ಕೋಟಿ ರೂ. ಮೊತ್ತದ 13,530 ವಂಚನೆ ಪ್ರಕರಣಗಳು ದಾಖಲಾಗಿವೆ. ಇವುಗಳಲ್ಲಿ ಶೇ.49ರಷ್ಟು ಅಥವಾ 6,659

ಪ್ರಕರಣಗಳು ಡಿಜಿಟಲ್ ಪಾವತಿ-ಕಾರ್ಡ್/ಇಂಟರ್ನೆಟ್ (Internet) ವಿಭಾಗಕ್ಕೆ ಸಂಬಂಧಿಸಿದ್ದಾಗಿವೆ.

Exit mobile version