ಭಾರತಕ್ಕೆ ಬಂದಿಳಿದ 5ನೇ ಬ್ಯಾಚ್​​ನ ರಫೇಲ್​​ ಯುದ್ಧ ವಿಮಾನಗಳು

ದೆಹಲಿ, ಏ. 22: ಭಾರತ ಫ್ರಾನ್ಸ್​ ಜೊತೆ ಮಾಡಿಕೊಂಡಿರುವ ಯುದ್ಧ ವಿಮಾನಗಳ ಖರೀದಿ ಒಪ್ಪಂದದ ಪ್ರಕಾರ 5ನೇ ಬ್ಯಾಚ್​ನ ರಫೇಲ್​​ ಯುದ್ಧ ವಿಮಾನಗಳು 8,000 ಕಿಲೋ ಮೀಟರ್​ ಸಂಚರಿಸಿ ಫ್ರಾನ್ಸ್​ನಿಂದ ಭಾರತಕ್ಕೆ ಬಂದಿಳಿದಿವೆ. ಈ ಕುರಿತಂತೆ ಭಾರತೀಯ ವಾಯುಪಡೆ ಮಾಹಿತಿ ಹಂಚಿಕೊಂಡಿದೆ.

ಭಾರತಕ್ಕೆ ಬಂದಿಳಿದ ಯುದ್ಧ ವಿಮಾನಗಳ ಪೈಕಿ ನಾಲ್ಕು ರಫೇಲ್​ ವಿಮಾನಗಳು ಹೊಸ ಬ್ಯಾಚ್​ನ ಭಾಗವಾಗಿದೆ ಎಂದು ಭಾರತೀಯ ವಾಯುಪಡೆ ತಿಳಿಸಿದೆ. ಆದರೆ, ಫ್ರಾನ್ಸ್​ನಿಂದ ಭಾರತಕ್ಕೆ ಬಂದಿಳಿದ ಒಟ್ಟು ಯುದ್ಧ ವಿಮಾನಗಳ ಸಂಖ್ಯೆ ಇನ್ನೂ ತಿಳಿದು ಬಂದಿಲ್ಲ. ಫ್ರಾನ್ಸ್​ನಿಂದ ಯುದ್ಧ ವಿಮಾನಗಳು ಹೊರಟಾಗ ದಾರಿ ಮಧ್ಯದಲ್ಲಿ ಬೇಕಾದ ಇಂಧನದ ಪೂರೈಕೆಯನ್ನು ಫ್ರಾನ್ಸ್​ನ ವಾಯಪಡೆ ಮತ್ತು ಯುನೈಟೆಡ್​ ಅರಬ್​ ಎಮೀರೇಟ್ಸ್​ (ಯುಎಇ) ನೆರವು ನೀಡಿದೆ ಎಂದು ತಿಳಿಸಿದೆ.

ಏಪ್ರಿಲ್​ ತಿಂಗಳ ಮೊದಲನೇಯ ದಿನ 4ನೇ ಬ್ಯಾಚ್​ನ 3 ರಫೇಲ್​ ಯುದ್ಧ ವಿಮಾಗಳು ಭಾರತಕ್ಕೆ ಬಂದಿದ್ದವು.

Exit mobile version