ದೆಹಲಿ: ಕೊರೊನಾ ಸೋಂಕಿತರ ಸಂಖ್ಯೆ ಏರುತ್ತಲೇ ಇದ್ದು ಶುಕ್ರವಾರದಂದು ದೇಶದಲ್ಲಿ 69,878 ಹೊಸ ಕೋವಿಡ್ ಕೇಸ್ ಪತ್ತೆಯಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಈ ಮೂಲಕ ದೇಶದಲ್ಲಿ ಒಟ್ಟು ಕೊರೊನಾ ಸೊಂಕಿತರ ಸಂಖ್ಯೆ 29,75,702ಕ್ಕೆ ಏರಿಕೆಯಾಗಿದೆ.
ಇನ್ನು ಕಳೆದ 24 ಗಂಟೆಯಲ್ಲಿ ಒಟ್ಟು 945 ಮಂದಿ ಕೊರೊನಾಗೆ ಬಲಿಯಾಗುವ ಮೂಲಕ ಭಾರತದಲ್ಲಿ ಕೋವಿಡ್‌ನಿಂದ ಒಟ್ಟು 55,794 ಸಾವು ಸಂಭವಿಸಿದೆ. ದೇಶದಲ್ಲಿ ಈ ಬಾರಿ ಬರೋಬ್ಬರಿ 22,22,578 ಮಂದಿ ರೋಗಿಗಳು ಕೊರೊನಾ ಜಯಿಸಿ ಮನೆಗೆ ತೆರಳಿದ್ದಾರೆ. ಅಲ್ಲದೇ ಇವರೆಲ್ಲಾ ಎಲ್ಲರಿಗೂ ಸ್ಪೂರ್ತಿಯಾಗಿದ್ದಾರೆ. ಅಲ್ಲದೆ ಸದ್ಯ ದೇಶದಲ್ಲಿ 6,97,330 ಸಕ್ರಿಯ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಕೊರೊನಾ ಪರೀಕ್ಷೆಯಲ್ಲಿ ಮುಂಚೂಣಿಯಲ್ಲಿರುವ ಭಾರತ ಬರೋಬ್ಬರಿ ಹತ್ತು ಲಕ್ಷ ಮಂದಿಗೆ ಶುಕ್ರವಾರ ಪರೀಕ್ಷೆ ನಡೆಸಿದೆ. 10,23,836 ಮಂದಿಯ ಸ್ಯಾಂಪಲ್‌ಗಳನ್ನ ಪಡೆದುಕೊಂಡು ಟೆಸ್ಟ್ ನಡೆಸಿದ್ದು ಇವರೆಗೆ ದೇಶದಲ್ಲಿ ಒಟ್ಟು 3,44,91,073 ಮಂದಿಗೆ ಕೊರೊನಾ ಪರೀಕ್ಷೆ ನಡೆಸಿದಂತೆ ಆಗಿದೆ.