ಹಿರಿಯ ನಾಗರಿಕರ ಎಫ್ಡಿ ಮೇಲೆ ಶೇಕಡಾ 9ರಷ್ಟು ಬಡ್ಡಿ ನೀಡುವ ಆರು ಪ್ರಮುಖ ಬ್ಯಾಂಕುಗಳು ಭಾರತದಲ್ಲಿವೆ. ಹಿರಿಯ ನಾಗರಿಕರು ತಮ್ಮ ನಿವೃತ್ತಿ ಜೀವನದಲ್ಲಿ (9 percentage interest on FDS) ಯಾವುದೇ

ತೊಂದರೆ ಇಲ್ಲದೆ ಸ್ಥಿರ ಆದಾಯ ಪಡೆಯಬೇಕು ಎಂದು ಬಯಸುವುದು ಸಹಜ. ಹೀಗಾಗಿ ಈ ಬ್ಯಾಂಕುಗಳಲ್ಲಿ ಎಫ್ಡಿ ಮಾಡಿದರೆ ಹೆಚ್ಚಿನ ಬಡ್ಡಿ ಪಡೆಯಬಹುದು. ಇತರೆ ದೊಡ್ಡ ಬ್ಯಾಂಕ್ಗಳಿಗೆ ಹೋಲಿಕೆ ಮಾಡಿದರೆ
ಈ ಬ್ಯಾಂಕುಗಳು ಹೆಚ್ಚಿನ ಬಡ್ಡಿಯನ್ನು (9 percentage interest on FDS) ನೀಡುತ್ತಿವೆ.
- ಫಿನ್ಕೇರ್ ಸ್ಮಾಲ್ ಫೈನಾನ್ಸ್ ಬ್ಯಾಂಕ್
ಫಿನ್ಕೇರ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ನ Fixed deposit rate ಶೇ.7.80 ರಷ್ಟಿದೆ. ಆದರೆ 1000 ದಿನಗಳ ಅವಧಿಯ ಹಿರಿಯ ನಾಗರಿಕರ ಎಫ್ಡಿಗಳಿಗೆ ಫಿನ್ಕೇರ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ 9.01 ರವರೆಗಿನ
ಬಡ್ಡಿ ದರಗಳನ್ನು ನೀಡುತ್ತದೆ. ಹೀಗಾಗಿ ಹಿರಿಯ ನಾಗರಿಕರಿಗೆ ಇದೊಂದು ಉತ್ತಮ ಆಯ್ಕೆಯಾಗಿದೆ. - .ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್
ಹಿರಿಯ ನಾಗರಿಕರಿಗೆ ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್ 4.25% ರಿಂದ 9% ರ ನಡುವಿನ ಬಡ್ಡಿದರವನ್ನು ನೀಡುತ್ತದೆ. 500 ದಿನಗಳ ಅವಧಿ ಹೊಂದಿರುವ ಎಫ್ಡಿಗಳಿಗೆ 9% ರಷ್ಟು ಹೆಚ್ಚಿನ ಬಡ್ಡಿ ದರವನ್ನು ನೀಡಲಾಗುತ್ತದೆ.

- ಇಎಸ್ಎಎಫ್ ಸ್ಮಾಲ್ ಫೈನಾನ್ಸ್ ಬ್ಯಾಂಕ್
ಇಎಸ್ಎಎಫ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಹಿರಿಯ ನಾಗರಿಕರಿಗೆ 2 ವರ್ಷದಿಂದ 3 ವರ್ಷಕ್ಕಿಂತ ಕಡಿಮೆ ಅವಧಿಗೆ 9% ಮತ್ತು ಸಾಮಾನ್ಯ ನಾಗರಿಕರಿಗೆ 8.50% ಬಡ್ಡಿದರವನ್ನು ನೀಡುತ್ತದೆ. - ಯೂನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕ್
ಯೂನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಸಾಮಾನ್ಯ ನಾಗರಿಕರಿಗೆ 9 ಪ್ರತಿಶತದವರೆಗೆ ಸ್ಥಿರ ಠೇವಣಿ ಬಡ್ಡಿದರಗಳನ್ನು ಮತ್ತು ಹಿರಿಯ ನಾಗರಿಕರಿಗೆ 9.50% ವರೆಗೆ ಬಡ್ಡಿದರಗಳನ್ನು ನೀಡುತ್ತದೆ. ಹಿರಿಯ
ನಾಗರಿಕರಿಗೆ 1001 ದಿನಗಳ ಕಾಲಾವಧಿಯಲ್ಲಿ 9.50 ಪ್ರತಿಶತದಷ್ಟು ಹೆಚ್ಚಿನ ಬಡ್ಡಿ ದರವನ್ನು ನೀಡುತ್ತದೆ. - ಸೂರ್ಯೋದಯ ಸ್ಮಾಲ್ ಫೈನಾನ್ಸ್ ಬ್ಯಾಂಕ್
ಸೂರ್ಯೋದಯ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಫಿಕ್ಸೆಡ್ ಡೆಪಾಸಿಟ್ ಮೇಲೆ 9.60 ಪರ್ಸೆಂಟ್ ಬಡ್ಡಿ ದರಗಳನ್ನು ಹೊಂದಿದೆ. ಬ್ಯಾಂಕ್ 5 ವರ್ಷಗಳ ಕಾಲಾವಧಿಯಲ್ಲಿ ಹಿರಿಯ ವ್ಯಕ್ತಿಗಳಿಗೆ 4.50% ರಿಂದ 9.60%
ವರೆಗಿನ ಎಫ್ಡಿ ಬಡ್ಡಿ ದರಗಳನ್ನು ನೀಡುತ್ತದೆ. ಬ್ಯಾಂಕ್ 999 ದಿನಗಳ ಅವಧಿಯ ಮೇಲೆ 9.50% ಮತ್ತು 1 ವರ್ಷದಿಂದ 2 ವರ್ಷಕ್ಕೆ 9% ನೀಡುತ್ತದೆ.
ಇದನ್ನು ಓದಿ: ಮಣಿಪುರ ಹಿಂಸಾಚಾರ ಕುರಿತು ಪ್ರಧಾನಿ ಮೋದಿ ಸಮಗ್ರ ಹೇಳಿಕೆಗೆ ಬಿಗಿಪಟ್ಟು : ಸಂಸತ್ ಹೊರಗೆ ಆಡಳಿತ-ವಿಪಕ್ಷಗಳ ಪ್ರತಿಭಟನೆ - ಈಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್
ಈಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ 888 ದಿನಗಳ ಅವಧಿಯ ನಿಶ್ಚಿತ ಠೇವಣಿಗಳಿಗೆ ಹಿರಿಯ ನಾಗರಿಕರಿಗೆ 9% ನೀಡುತ್ತದೆ. ಹೊಸ ಬಡ್ಡಿದರಗಳು ಏಪ್ರಿಲ್ 11, 2023 ರಿಂದ ಜಾರಿಗೆ ಬಂದಿವೆ.