ಬೆಂಗಳೂರು, ಜ. 01: ಅಭಿನಯದ ಜತೆಗೆ ತಮ್ಮ ಖಡಕ್ ದನಿಯಿಂದಲೇ ಸಿನಿಪ್ರಿಯರ ಮನ ಗೆದ್ದಿರುವ ನಟ ವಸಿಷ್ಠ ಸಿಂಹ, ಹೊಸ ವರ್ಷದ ಸಂಭ್ರಮದಲ್ಲಿ ಸಿಂಹದ ಮರಿಯೊಂದನ್ನು ದತ್ತು ಪಡೆದಿದ್ದಾರೆ.
ಅಪಾರ ಪರಿಸರ ಪ್ರೇಮ ಹೊಂದಿರುವ ವಸಿಷ್ಠ ಸಿಂಹ, ಶುಕ್ರವಾರ ಬನ್ನೇರುಘಟ್ಟ ಉದ್ಯಾನವನದಲ್ಲಿ ಸಿಂಹದ ಮರಿಯನ್ನು ದತ್ತು ಪಡೆದು ಅದಕ್ಕೆ ತಮ್ಮ ತಂದೆಯ ಹೆಸರಾದ ‘ವಿಜಯನಾರಸಿಂಹ’ ಎಂದು ನಾಮಕರಣ ಮಾಡುವ ಮೂಲಕ ಹೊಸ ವರ್ಷವನ್ನು ವಿಶೇಷವಾಗಿ ಸ್ವಾಗತಿಸಿದ್ದಾರೆ.
8 ತಿಂಗಳ ಸಿಂಹದ ಮರಿಯನ್ನು ದತ್ತು ಪಡೆದಿರುವ ಅವರು,
ಅದರ ಪಾಲನೆ, ಪೋಷಣೆಯ ವೆಚ್ಚವನ್ನು ವಸಿಷ್ಠ ಸಿಂಹ ಭರಿಸಲಿದ್ದಾರೆ. ಅಲ್ಲದೆ ಈ ವರ್ಷ ಕಾಡು, ವನ್ಯಜೀವಿ ಸಂರಕ್ಷಣೆಗೆ ಕೈ ಜೋಡಿಸುವ ಚಿಂತನೆಯಿದೆ ಎಂದು ತಿಳಿಸಿದ್ದಾರೆ.