ಬೆನ್ನುಹುರಿ ಅಪಘಾತದ ಅಂಗವಿಕಲರು, ಬುದ್ಧಿಮಾಂಧ್ಯತೆಯಿಂದ ಬಳಲುತ್ತಿರುವ ವ್ಯಕ್ತಿಗಳ ಆರೈಕೆದಾರರಿಗೆ ಪ್ರತಿ ತಿಂಗಳು 1,000 ರೂ. ಪ್ರೋತ್ಸಾಹಧನ ನೀಡುವ ಕುರಿತು ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ನಿರ್ದೇಶನಾಲಯ ಇವರು 2024-25ನೇ ಸಾಲಿನ ಆಯವ್ಯಯ Cerebral Palsy, Muscular Dystrophy, Parkinsons , Multiple Sclerosis ಆರೈಕೆದಾರರಿಗೆ ಪ್ರತಿ ಮಾಹೆ ರೂ.1,000/-ಗಳ ಪ್ರೋತ್ಸಾಹಧನವನ್ನು ನೀಡಲಾಗುವುದು ಎಂದು ಮಾನ್ಯ ಮುಖ್ಯಮಂತ್ರಿಯವರು ಘೋಷಿಸಿರುತ್ತಾರೆ.
2024-25 Cerebral Palsy, Muscular Dystrophy, Parkinsons ಮತ್ತು Multiple Sclerosis ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಗಳ ಆರೈಕೆದಾರರಿಗೆ ಪ್ರತಿ ಮಾಹೆ ರೂ.1,000/-ಗಳ ಪ್ರೋತ್ಸಾಹಧನವನ್ನು ನೀಡಲಾಗುವ ಹೊಸ ಯೋಜನೆಯೊಂದಿಗೆ ಬೆನ್ನುಹುರಿ ಅಪಘಾತದ ಅಂಗವಿಕಲರು (Spinal Cord Injury) ಮತ್ತು ಬುದ್ಧಿಮಾಂದ್ಯತೆ (Mentally retarded) ಈ ಎರಡು ಬಗೆಯ ವಿಕಲತೆಗಳನ್ನು ಸೇರ್ಪಡೆಗೊಳಿಸಿದ್ದು, ಲೆಕ್ಕಶೀರ್ಷಿಕೆ: 2235-02-101-0- 99, 100, 422, 423ರಡಿ ವೆಚ್ಚ ಭರಿಸಲು ಯೋಜನೆಗೆ ಸಂಬಂಧಿಸಿದಂತೆ ತಡೆಪಟ್ಟಿಯೊಂದಿಗೆ ಆಡಳಿತಾತ್ಮಕ ಮಂಜೂರಾತಿ ನೀಡಿ ಆದೇಶ ಹೊರಡಿಸುವಂತೆ ಕೋರಿರುತ್ತಾರೆ.
ಮೇಲೆ ಓದಲಾದ ಕ್ರಮ ಸಂಖ್ಯೆ (2)ರ ಅನಧಿಕೃತ ಟಿಪ್ಪಣಿಯಲ್ಲಿ ಆರ್ಥಿಕ ಇಲಾಖೆಯು Cerebral Palsy, Muscular Dystrophy, Parkinsons & Multiple Sclerosis ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಗಳ ಆರೈಕೆದಾರರಿಗೆ ಪ್ರತಿ ಮಾಹೆ ರೂ.1,000/-ಗಳ ಪ್ರೋತ್ಸಾಹಧನವನ್ನು ನೀಡಲಾಗುವ ಯೋಜನೆಯ ವೆಚ್ಚವನ್ನು ಲೆಕ್ಕಶೀರ್ಷಿಕೆ: 2235-02-101-0-99 ರಡಿ ರೂ.400.00 ಲಕ್ಷಗಳ ಆಯವ್ಯಯವನ್ನು ಮೀಸಲಿರಿಸಿ ನಿಗದಿಪಡಿಸಿರುತ್ತದೆ.
ಮೇಲಿನ ಎಲ್ಲಾ ಅಂಶಗಳನ್ನು ಕೂಲಂಕುಷವಾಗಿ ಪರಿಶೀಲಿಸಿ, ಈ ಕೆಳಕಂಡಂತೆ ಆದೇಶಿಸಿದೆ.
- ವಿಶಿಷ್ಟ ಗುರುತಿನ ಚೀಟಿ ಕಡ್ಡಾಯ (UDID CARD).
- ಅಂಗವಿಕಲತೆಯ ಪ್ರಮಾಣ ಶೇ.75 ಮತ್ತು ಅದಕ್ಕಿಂತ ಹೆಚ್ಚಾಗಿರಬೇಕು.
- ವಯಸ್ಸಿನ ಮಿತಿ ಇಲ್ಲ
- ಆದಾಯದ ಮಿತಿ ಇಲ್ಲ.
- ಜಿಲ್ಲಾ ಮಟ್ಟದ ಸಮಿತಿಯಲ್ಲಿ ಯೋಜನೆಯ ಫಲಾನುಭವಿಗಳನ್ನು ಆಯ್ಕೆ ಮಾಡುವುದು.
- ಜಿಲ್ಲಾ ಸಮಿತಿಯಲ್ಲಿ ಆಯ್ಕೆಯಾದ ಫಲಾನುಭವಿಯ ಆರೈಕೆದಾರರ ಬ್ಯಾಂಕ್ (Bank)/ ಅಂಚೆ ಕಛೇರಿ ಉಳಿತಾಯ ಖಾತೆಗೆ ಪ್ರೋತ್ಸಾಹಧನವನ್ನು ಜಮಾ ಮಾಡಬೇಕು.
- ಆಯ್ಕೆಯಾದ ವಿಕಲಚೇತನ ಫಲಾನುಭವಿಯ ಆರೈಕೆದಾರರು ಮರಣ ಹೊಂದಿದಲ್ಲಿ ಅಥವಾ ವಿಕಲಚೇತನ ಫಲಾನುಭವಿಯು ಲಿಖಿತ ಮನವಿಯ ಮೇರೆಗೆ ಬೇರೆ ಆರೈಕೆದಾರರನ್ನು ಜಿಲ್ಲಾ ಸಮಿತಿಯಲ್ಲಿ ಆಯ್ಕೆ ಮಾಡುವುದು.
- ವಿಕಲಚೇತನ ಫಲಾನುಭವಿ ಮರಣ ಹೊಂದಿದಲ್ಲಿ ಪ್ರೋತ್ಸಾಹಧನ ಮಂಜೂರಾತಿ ತಂತಾನೇ ರದ್ದಾಗುವುದು.
ಈ ಆದೇಶವನ್ನು ಆರ್ಥಿಕ ಇಲಾಖೆಯ ಟಿಪ್ಪಣಿ ಸಂಖ್ಯೆ: ಆಇ 272 ವೆಚ್ಚ-10/2024, ದಿ:23.05.2024ರ ಸಹಮತಿ ಹಾಗೂ ಯೋಜನಾ ಇಲಾಖೆ ಟಿಪ್ಪಣಿ ಸಂಖ್ಯೆ: ಪಿಡಿಎಸ್ 44 ಐಎಂಎಂ 2024, ದಿನಾಂಕ:21.06.2024 ರ ಸಹಮತಿಯನ್ವಯ ಹೊರಡಿಸಲಾಗಿದೆ.
✍🏻ವೀರಾಜ್ ಸ್ವಾಮಿ.ಎಂ