‘ಆರಾಧ್ಯ’ ನೀಡಿದ ಸಂದೇಶ

ಬೆಂಗಳೂರು ಸೆ 21 : ಬಾಲನಟಿ ಆರಾಧ್ಯ ಒಂದು ಸಂದೇಶ ನೀಡಿದ್ದಾಳೆ. ಅದು ಆಕೆ ನಟಿಸಿರುವ ‘ಆರಾಧ್ಯ’ ಎನ್ನುವ ಕಿರುಚಿತ್ರದ ಮೂಲಕ ಎನ್ನುವುದು ವಿಶೇಷ. ಚಿತ್ರದ ಪ್ರದರ್ಶನ ಮತ್ತು ಮಾಧ್ಯಮಗೋಷ್ಠಿಯಲ್ಲಿ ನಡೆದ ವಿಚಾರಗಳು ಇಲ್ಲಿವೆ.

ಸಾಕಷ್ಟು ಚಿತ್ರಗಳಲ್ಲಿ ನಟಿಸಿ ಗುರುತಿಸಿಕೊಂಡಿರುವ ಯತಿರಾಜ್, ಕಳೆದವರ್ಷ ಕೊರೋನ ಬಂದ ಮೇಲೆ ಸುಮಾರು ಹದಿನೇಳು ಕಿರುಚಿತ್ರಗಳನ್ನು ನಿರ್ದೇಶಿಸಿದ್ದಾರೆ. ‘ಆರಾಧ್ಯ’ ಅವರ ನಿರ್ದೇಶನದ ಹದಿನೆಂಟನೇ ಕಿರುಚಿತ್ರ.
ಪತ್ರಕರ್ತ ಹಾಗೂ ಕಲಾವಿದನಾಗಿ ಗುರುತಿಸಿಕೊಂಡಿರುವ ಯತಿರಾಜ್ ಈ ಕಿರುಚಿತ್ರದ ನಿರ್ಮಾಪಕರೂ ಹೌದು. ನಿರ್ದೇಶಿಸಿದ್ದಾರೆ. ಅಪ್ಪ -ಮಗಳ ಸೆಂಟಿಮೆಂಟ್ ಸನ್ನಿವೇಶಗಳು ಈ ಕಿರುಚಿತ್ರದ ಹೈಲೆಟ್.

“ಮನೆಯಲ್ಲಿ ತಂದೆಯಾದವನಿಗೆ ಜವಾಬ್ದಾರಿ ಇಲ್ಲದೇ ಇದ್ದಾಗ, ಮಕ್ಕಳಿಗೆ ಯಾವರೀತಿ ತೊಂದರೆಯಾಗುತ್ತದೆ ಎಂಬುದನ್ನು ಹೇಳುವುದೇ ಇದರ ಕಥೆ.
ನಮ್ಮ ಈ ಪ್ರಯತ್ನವನ್ನು ‌ನಿಮಗೆ ತೋರಿಸುವ ಹಂಬಲವಾಯಿತು. ನಿಮ್ಮ ಮುಂದೆ ತಂದಿದ್ದೇವೆ.‌
‘ಆರಾಧ್ಯ’ ಪಾತ್ರದಲ್ಲಿ ಬೇಬಿ ಆರಾಧ್ಯ, ಸುಶೀಲಾ ಟೀಚರ್ ಆಗಿ ಅಂಜಲಿ, ತಂದೆಯ ಪಾತ್ರದಲ್ಲಿ ನಾನು ಮತ್ತು ಇನ್ನೋರ್ವರು ಅಭಿನಯಿಸಿದ್ದೇವೆ. ಅದು ಹೇಗೆ ಎನ್ನುವ ಸಂದೇಹಗಳು ಕೇಳುಗರಲ್ಲಿ ಹಾಗೆಯೇ ಇರಲಿ. ಚಿತ್ರದ ವೀಕ್ಷಣೆಯೇ ಅದಕ ಉತ್ತರವಾಗಲಿದೆ.
ಜೀವನ್ ಅವರ ಛಾಯಾಗ್ರಹಣ ಹಾಗೂ ಸಂಕಲನ, ವಿನುಮನಸು ಸಂಗೀತ ನಿರ್ದೇಶನ ಈ ಕಿರುಚಿತ್ರಕ್ಕಿದೆ.
ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಬೆಂಬಲವಿರಲಿ” ಎಂದರು ಯತಿರಾಜ್.

ನಾನು ಮೂರು ಕಿರುಚಿತ್ರಗಳಲ್ಲಿ ನಟಿಸಿದ್ದೇನೆ. ಅದರಲ್ಲಿ ಎರಡು ಯತಿರಾಜ್ ಅವರ ಜೊತೆ. ನಮ್ಮ ಕಿರುಚಿತ್ರವನ್ನು ನೋಡಿ ಹರಸಿ ಎಂದರು ಬೇಬಿ ಆರಾಧ್ಯ. ಹಿರಿಯ ನಿರ್ದೇಶಕ “ಗೆಜ್ಜೆನಾದ” ವಿಜಯಕುಮಾರ್, ಜಂಕಾರ್ ಮ್ಯೂಸಿಕ್ ನ ಭರತ್ ಜೈನ್ ಹಾಗೂ ಪತ್ರಿಕಾ ಸಂಪರ್ಕಾಧಿಕಾರಿ ವೆಂಕಟೇಶ್ ಅತಿಥಿಗಳಾಗಿ ಆಗಮಿಸಿ, ಕಿರುಚಿತ್ರ ವೀಕ್ಷಿಸಿ ತಮ್ಮ ಅಭಿಪ್ರಾಯ ಹಂಚಿಕೊಂಡರು.

Exit mobile version