ಹಿಜಾಬ್ ; ‘ಹರಾಮ್’ ಅನ್ನು ‘ಹಲಾಲ್’ ಎಂದು ಹೊಂದಾಣಿಕೆ ಮಾಡಿಕೊಳ್ಳಬೇಕು : ಅಬ್ದುಲ್ ಖಾದರ್!

political

ಹೈಕೋರ್ಟ್(Highcourt) ಹಿಜಾಬ್(Hijab) ಕುರಿತು ಅಂತಿಮ ತೀರ್ಪು(Verdict) ನೀಡಿದೆ. ಅದನ್ನು ಪಾಲನೆ ಮಾಡುವುದು ನಮ್ಮೆಲ್ಲರ ಕರ್ತವ್ಯ. ಕೆಲವೊಮ್ಮೆ ‘ಹರಾಮ್’ ಇದ್ದಿದ್ದನ್ನು ‘ಹಲಾಲ್’ ಎಂದು ಭಾವಿಸಿಕೊಂಡು, ಹೊಂದಾಣಿಕೆ ಮಾಡಿಕೊಳ್ಳಬೇಕು. ನಾವು ಇರುವ ನೆಲದ ಕಾನೂನನ್ನು ಗೌರವಿಸಬೇಕೆಂದು ಪದ್ಮಶ್ರೀ(Padmashree) ಪುರಸ್ಕೃತ(Awardee) ಅಬ್ದುಲ್ ಖಾದರ್ ನಡುಕಟ್ಟಿನ್(abdul khadar nadakattin) ಅಭಿಪ್ರಾಯಪಟ್ಟಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ನನ್ನ ಮುಸ್ಲಿಂ ಬಾಂಧವರಲ್ಲಿ ಒಂದು ವಿನಂತಿ. ಅದೆನೆಂದರೆ, ನಾವೆಲ್ಲರೂ ನೆಲದ ಕಾನೂನನ್ನು ಪಾಲಿಸಲೇಬೇಕು. ಮೊಹಮ್ಮದ್ ಪೈಗಂಬರ್ ಅವರು ಕೂಡಾ ‘ನೀವು ನೆಲೆಸಿರುವ ನೆಲದ ಕಾನೂನನ್ನು ಪಾಲಿಸಿ’ ಎಂದು ಹೇಳಿದ್ದಾರೆ. ಕೆಲವೊಮ್ಮೆ ಹರಾಮ್ ಅನ್ನು ಸಹ ಹಲಾಲ್ ಎಂದು ಹೊಂದಾಣಿಕೆ ಮಾಡಿಕೊಂಡು ಬದುಕಬೇಕು. ಹೀಗಾಗಿ ಹಿಜಾಬ್ ವಿಚಾರದಲ್ಲಿ ರಾಜ್ಯ ಉಚ್ಚನ್ಯಾಯಾಲಯ ನೀಡಿರುವ ತೀರ್ಪನ್ನು ಗೌರವಿಸಬೇಕು. ತೀರ್ಪಿನ ವಿರುದ್ದ ಪ್ರತಿಭಟನೆ ಮಾಡುವುದು ಸರಿಯಲ್ಲ ಎಂದು ಹೇಳಿದರು.


ಇನ್ನು ಇತ್ತೀಚೆಗೆ ಹೈಕೋರ್ಟ್ ತ್ರಿಸದಸ್ಯ ನೇತೃತ್ವದ ಸಾಂವಿಧಾನಿಕ ಪೀಠ ಹಿಜಾಬ್ ವಿವಾದದ ಕುರಿತು ಅಂತಿಮ ತೀರ್ಪು ನೀಡಿತ್ತು. ಹಿಜಾಬ್ ಅನ್ನು ಶಾಲಾ-ಕಾಲೇಜುಗಳಲ್ಲಿ ಧರಿಸಬಾರದು, ಹಿಜಾಬ್ ಧರಿಸುವುದು ಇಸ್ಲಾಂನಲ್ಲಿ ಕಡ್ಡಾಯವಲ್ಲ. ಹೀಗಾಗಿ ಸರ್ಕಾರ ರೂಪಿಸಿರುವ ಸಮವಸ್ತ್ರ ಸಂಹಿಂತೆಯನ್ನು ಎಲ್ಲರೂ ಪಾಲಿಸಬೇಕು. ಕಾಲೇಜಿನಲ್ಲಿ ಯಾವುದೇ ಧರ್ಮದ ಗುರುತಿಗೆ ಅವಕಾಶ ನೀಡಬಾರದು ಎಂದು ತೀರ್ಪು ನೀಡಿತ್ತು.

ಈ ತೀರ್ಪನ್ನು ಪ್ರಶ್ನಿಸಿ ಕೆಲ ಮುಸ್ಲಿಂ ಸಂಘಟನೆಗಳು ಸುಪ್ರೀಂಕೋರ್ಟ್‍ಗೆ ಮೇಲ್ಮನವಿ ಹೋಗಿದ್ದವು. ಜೊತೆಗೆ ಅನೇಕ ಕಡೆ ಪ್ರತಿಭಟನೆಯನ್ನು ನಡೆಸಲಾಗಿತ್ತು. ಕೆಲವೆಡೆ ತೀರ್ಪಿನ ವಿರುದ್ದ ಬಂದ್ ಅನ್ನು ಆಚರಿಸಲಾಗಿತ್ತು.

Exit mobile version