`ಆಕ್ಟ್‌ 1978′ ನಿಂದ ಆಕ್ಟಿವ್ ಆಯ್ತು ಚಿತ್ರಮಂದಿರ!

ಚಿತ್ರಮಂದಿರ ಮುಚ್ಚಿದ ಸುಮಾರು ಎಂಟು ತಿಂಗಳ ಬಳಿಕ ಹೊಸ ಸಿನಿಮಾವೊಂದು ಬಂದಿದೆ. ಟ್ರೇಲರ್ ಮೂಲಕವೇ ಸಾಕಷ್ಟು ಗಮನ ಸೆಳೆದಿದ್ದ `ಆಕ್ಟ್ 1978′ ಚಿತ್ರಕ್ಕೆ ಪ್ರೇಕ್ಷಕರು ನೀಡಿದ ಪ್ರತಿಕ್ರಿಯೆ ಕೂಡ ಉತ್ತಮವಾಗಿಯೇ ಇದೆ.

ಶುಕ್ರವಾರ ರಾಜ್ಯಾದ್ಯಂತ ತೆರೆಕಂಡ ಆಕ್ಟ್ 1978 ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಲಭ್ಯವಾಗಿದೆ. ಈಗಾಗಲೇ ಚಿತ್ರರಂಗದ ಗಣ್ಯರನೇಕರು ಸಿನಿಮಾ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಅಭಿನಯ ಚಕ್ರವರ್ತಿ' ಕಿಚ್ಚ ಸುದೀಪ್,ಬ್ಲ್ಯಾಕ್ ಕೋಬ್ರ’ ದುನಿಯಾ ವಿಜಯ್, ಸಿಂಪಲ್ ಸ್ಟಾರ್' ರಕ್ಷಿತ್ ಶೆಟ್ಟಿ ಮೊದಲಾದವರು ಚಿತ್ರದ ಬಗ್ಗೆ ತಮ್ಮ ಸಾಮಾಜಿಕ ಖಾತೆಗಳಲ್ಲಿ ಮೆಚ್ಚುಗೆಯ ಮಾತುಗಳನ್ನು ಬರೆದಿದ್ದಾರೆ. ಚಿತ್ರ ಬಿಡುಗಡೆಯ ಹಿಂದಿನ ದಿನ ಆಯೋಜಿಸಲಾಗಿದ್ದ ವಿಶೇಷ ಪ್ರದರ್ಶನದಲ್ಲಿ ಸಾಕಷ್ಟು ಮಂದಿ ಚಿತ್ರ ವೀಕ್ಷಿಸಿ ಒಳ್ಳೆಯ ಪ್ರತಿಕ್ರಿಯೆ ನೀಡಿದ್ದರು. ಯಜ್ಞಾ ಶೆಟ್ಟಿ ಪ್ರಧಾನ ಪಾತ್ರದಲ್ಲಿರುವ ಈ ಚಿತ್ರದಲ್ಲಿ ರಾಷ್ಟ್ರಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಅವರು ಕೂಡ ಒಂದು ಪ್ರಮುಖ ಪಾತ್ರವನ್ನು ನಿಭಾಯಿಸಿದ್ದಾರೆ. ಚಿತ್ರ ಬಿಡುಗಡೆಯ ಬಳಿಕ ಸಾಮಾನ್ಯ ಪ್ರೇಕ್ಷಕರ ಪ್ರತಿಕ್ರಿಯೆ ಹೇಗಿದೆ ಎನ್ನುವವಿಜಯ ಟೈಮ್ಸ್’ ಪ್ರಶ್ನೆಗೆ ಉತ್ತರಿಸಿದ ಸಂಚಾರಿ ವಿಜಯ್ “ಸಿನಿಮಾ ಸುಮಾರು ನೂರಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ತೆರೆಕಂಡಿದೆ. ನಿನ್ನೆ ಬಿಡುಗಡೆಯಂದು ಬೆಂಗಳೂರಿನಲ್ಲಿ ಹೆಚ್ಚುಕಡಿಮೆ ಎಲ್ಲ ಚಿತ್ರಮಂದಿರಗಳಲ್ಲಿ ಹೌಸ್ ಫುಲ್ ಪ್ರದರ್ಶನ ಕಂಡಿದೆ. ಇವತ್ತಿಗೂ ಕೂಡ ಚಿತ್ರದ ಕುರಿತಾದ ಕ್ರೇಜ್ ಪ್ರೇಕ್ಷಕರಲ್ಲಿ ಹಾಗೆಯೇ ಇದೆ. ಬೆಂಗಳೂರು ಬಿಟ್ಟು ಹೊರಗಡೆಯಿಂದಲೂ ಒಳ್ಳೆಯ ಪ್ರತಿಕ್ರಿಯೆ ಲಭಿಸುತ್ತಿದೆ. ನಾಳೆ ಭಾನುವಾರದ ಶೋಗೆ ಆಲ್ರೆಡಿ ಸಾಕಷ್ಟು ಟಿಕೆಟ್ ಬುಕ್ ಆಗಿರುವ ಮಾಹಿತಿ ದೊರಕಿದೆ. ಈ ಎಲ್ಲ ಬೆಳವಣಿಗೆಗಳು ಚಿತ್ರತಂಡದವನಾಗಿ ಮತ್ತು ಕನ್ನಡ ಚಿತ್ರೋದ್ಯಮದ ವ್ಯಕ್ತಿಯಾಗಿ ನನಗೆ ಬಹಳಷ್ಟು ಖುಷಿ ತಂದಿದೆ” ಎಂದರು.

ಡಿ ಕ್ರಿಯೇಶನ್ಸ್ ಲಾಂಛನದಲ್ಲಿ ಆರ್ ದೇವರಾಜ್ ನಿರ್ಮಿಸಿರುವ ಈ ಚಿತ್ರಕ್ಕೆ ಮಂಸೋರೆ ಕತೆ ಬರೆದು ನಿರ್ದೇಶನ ಮಾಡಿದ್ದಾರೆ. ಯಜ್ಞಾ ಶೆಟ್ಟಿಯವರ ಜೊತೆಗೆ ಬಿ ಸುರೇಶ್ ಅವರು ಒಂದು ಪ್ರಧಾನ ಪಾತ್ರ ನಿರ್ವಹಿಸಿದ್ದಾರೆ. ಉಳಿದಂತೆ ಪ್ರಮೋದ್ ಶೆಟ್ಟಿ, ಶ್ರುತಿ, ದತ್ತಣ್ಣ, ಅಚ್ಯುತ್ ಕುಮಾರ್, ಅವಿನಾಶ್, ಸುಧಾ ಬೆಳವಾಡಿ, ಶೋಭರಾಜ್, ನಂದಗೋಪಾಲ್, ರಾಘು ಶಿವಮೊಗ್ಗ ಮೊದಲಾದವರ ತಾರಗಣ ಇದೆ. ವೀರೇಶ್ ಮಲ್ಲಣ್ಣ ಮತ್ತು ದಯಾನಂದ ಟಿಕೆ ಚಿತ್ರಕತೆ ತಯಾರು ಮಾಡಿದ್ದು, ದಯಾನಂದ್ ಸಂಭಾಷಣೆ ಇದೆ. ಸತ್ಯ ಹೆಗಡೆಯರು ಚಿತ್ರದ ಛಾಯಾಗ್ರಹಣ ನಿರ್ವಹಿಸಿದ್ದಾರೆ.

Exit mobile version