• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಮನರಂಜನೆ

ಕಿರುತೆರೆ ನಿರ್ಮಾಪಕರ ಸಂಘದಿಂದ ಮಹತ್ವದ ನಿರ್ಧಾರ : ನಟ ಅನಿರುದ್ದ್ಗೆ 2 ವರ್ಷ ಬಹಿಷ್ಕಾರ!

Mohan Shetty by Mohan Shetty
in ಮನರಂಜನೆ
Actor
0
SHARES
1
VIEWS
Share on FacebookShare on Twitter

ಈಗಂತೂ ಎಲ್ಲಾ ಚಾನೆಲ್ ಗಳಲ್ಲೂ ಸೀರಿಯಲ್(Actor Aniruddha banned from serial) ಗಳದ್ದೇ ಹವಾ.

ಪ್ರೇಕ್ಷಕರನ್ನು ತಮ್ಮ ವಾಹಿನಿಯತ್ತ ಸೆಳೆಯಲು ತರಹೇವಾರಿ ಧಾರಾವಾಹಿಗಳನ್ನು ನೀಡಬೇಕಾಗುತ್ತದೆ.

ಆದರೆ, ಎಷ್ಟೇ ಪ್ರಯತ್ನ ಮಾಡಿದರೂ ಧಾರಾವಾಹಿ ಆರಂಭವಾದಾಗ ಇರುವ ಉತ್ಸಾಹ ಹಾಗೂ ಕುತೂಹಲ(Interesting) ನಂತರದಲ್ಲಿ ಪ್ರೇಕ್ಷಕರಲ್ಲಿ ಇರುವುದಿಲ್ಲ.

ಆದರೆ ಈ ಮಾತಿಗೆ ಅಪವಾದ ಎನ್ನುವಂತೆ ಹುಟ್ಟಿಕೊಂಡಿದ್ದೇ ಝೀ ಕನ್ನಡ ವಾಹಿನಿಯ(Zee Kannada) ಜನಪ್ರಿಯ ಧಾರಾವಾಹಿ ’ಜೊತೆ ಜೊತೆಯಲಿ’(Jothe Jotheyali).

https://vijayatimes.com/congress-slams-rss/

ಹೌದು, ಬೇರೆಲ್ಲಾ ಸೀರಿಯಲ್ ಗಳಿಗೆ ಹೋಲಿಸಿದರೆ ಆರಂಭದಿಂದಲೂ ಈ ಸೀರಿಯಲ್ ವಿಭಿನ್ನವಾಗಿ ಗುರುತಿಸಿಕೊಂಡಿತ್ತು. ತನ್ನ ಡಿಫರೆಂಟ್ ಕಥೆಯ ಕಾರಣದಿಂದಾಗಿಯೇ ಸೀರಿಯಲ್ ಜನರನ್ನು ಆಕರ್ಷಿಸಿತ್ತು.

ವರ್ಷಾನುಗಟ್ಟಲೆಯಿಂದ ಪ್ರಸಾರವಾಗುತ್ತಿರುವ ಈ ಸೀರಿಯಲ್‌ಗೆ ಅಪಾರ ಸಂಖ್ಯೆಯ ಅಭಿಮಾನಿ ಬಳಗವಿದ್ದು, ಟಿಆರ್‌ಪಿಯಲ್ಲೂ(TRP) ಈ ಸೀರಿಯಲ್ ಸದಾ ಮುಂಚೂಣಿಯಲ್ಲಿತ್ತು.

ಆರಂಭದಿಂದ ಇಲ್ಲಿಯವರೆಗೂ ಅತ್ಯುತ್ತಮ ಸ್ಪಂದನೆ ಪಡೆಯುತ್ತಿದ್ದು, ಜನಮನ್ನಣೆಗೆ ಪಾತ್ರವಾಗಿರುವ ಈ ಧಾರಾವಾಹಿಯ ತಂಡದಲ್ಲಿ ಅಪಸ್ವರ ಕೇಳಿ ಬಂದಿದೆ.
Next

ಹೌದು, ಧಾರವಾಹಿಯಿಂದ ನಟ ಅನಿರುದ್ಧ್ ಹೊರ ನಡೆದಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಇದೀಗ, ಈ ಬಗ್ಗೆ ಅಧಿಕೃತ ಮಾಹಿತಿ ಹೊರಬಂದಿದ್ದು ಅನಿರುದ್ದ್(Aniruddha) ಅವರನ್ನು ಕಿರುತೆರೆಯಿಂದ ಎರಡು ವರ್ಷಗಳ ಕಾಲ ದೂರ ಇಡಲಾಗಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಿರುತೆರೆ ನಿರ್ಮಾಪಕರ ಸಂಘದ ಅಧ್ಯಕ್ಷ ಭಾಸ್ಕರ್ ಅವರು,“ಅನಿರುದ್ಧ್ ಅವರನ್ನ ಬ್ಯಾನ್ ಮಾಡಿಲ್ಲ. ಆದರೆ ಅವರನ್ನು ಎರಡು ವರ್ಷ ಕಿರುತೆರೆಯಿಂದ ದೂರ ಇಡುತ್ತಿದ್ದೇವೆ. ಏಕೆಂದರೆ ಅನಿರುದ್ಧ್ ಅವರು, ಜೊತೆ ಜೊತೆಯಲಿ ಸೀರಿಯಲ್ನ ನಿರ್ದೇಶಕ ಮಧು ಉತ್ತಮ್ ಅವರಿಗೆ ಮೂರ್ಖ ಅಂತ ಕರೆದಿದ್ದಾರೆ.

https://vijayatimes.com/bilkis-bano-case/

ಸ್ಕ್ರಿಪ್ಟ್ ವಿಚಾರಕ್ಕೆ ಸಂಬಂಧಿಸಿದಂತೆ ನಿರ್ದೇಶಕರನ್ನು ನಿಂದಿಸಿ ಶೂಟಿಂಗ್ ಸೆಟ್ ನಿಂದ ಹೊರ ಹೋಗಿದ್ದಾರೆ” ಎಂದು ಪ್ರತಿಕ್ರಿಯೆ ನೀಡಿದ್ದಾರೆ.

Actor Aniruddha banned from serial

ಜೊತೆ ಜೊತೆಯಲಿ ತಂಡ ಹೇಳುವ ಪ್ರಕಾರ, ಧಾರಾವಾಹಿಯ ದೃಶ್ಯ ಬದಲಾವಣೆ ಮಾಡುವಂತೆ ನಿರ್ದೇಶಕ ಮಧು ಉತ್ತಮ್ ಜತೆ ಅನಿರುದ್ಧ್ ಕಿರಿಕ್ ಮಾಡಿಕೊಂಡಿದ್ದರು.

ಇದೇನೂ ಮೊದಲ ಸಲವಲ್ಲ, ಹಲವು ಭಾರಿ ಜಗಳ ಆಡಿ ಶೂಟಿಂಗ್ ಸೆಟ್ ನಿಂದ ಅನಿರುದ್ದ್ ಹೊರ ನಡೆದಿದ್ದರಂತೆ. ಕಳೆದ ಎರಡು ದಿನದ ಹಿಂದೆ ಕೂಡ ಧಾರವಾಹಿ ತಂಡದ‌ ಜೊತೆ ಜಗಳ ಆಡಿಕೊಂಡು ಶೂಟಿಂಗ್ ಗೆ ಹಾಜರಾಗದೇ ಮನೆಗೆ ಹೋಗಿದ್ದರಂತೆ.

“ಇದನ್ನ ಸಹಿಸಿ ಸಹಿಸಿ ಸಾಕಾಗಿದೆ, ಹಲವು‌ ಭಾರಿ ಈ ಘಟನೆ ಪುನರಾವರ್ತನೆ ಆಗುತ್ತಿರುವುದರಿಂದ ಈ ನಿರ್ಧಾರ ಮಾಡಿದ್ದೇವೆ” ಎಂದಿದೆ ಧಾರಾವಾಹಿ ತಂಡ. ಸ್ವಲ್ಪ ಸಮಯದ ಹಿಂದೆ, ಈ ಸೀರಿಯಲ್ ನಾಯಕಿ ಮೇಘ ಶೆಟ್ಟಿ(Megha Shetty) ಅವರು ಕೂಡ ತಮ್ಮ ಉದ್ಧಟ ವರ್ತನೆಯಿಂದ ವಿವಾದಕ್ಕೊಳಗಾಗಿದ್ದರು.

Next

ಇದರಿಂದ ಬೇಸತ್ತು ಸೀರಿಯಲ್ ತಂಡ ಅವರನ್ನು ಸೀರಿಯಲ್‌ನಿಂದ ಕೈ ಬಿಡಲು ನಿರ್ಧರಿಸಿತ್ತು. ಆದರೆ ಆ ಬಳಿಕ ನಡೆದ ಬೆಳವಣಿಗೆಯಲ್ಲಿ ಮಾತುಕತೆ ಮೂಲಕ ಈ ವಿವಾದ ಬಗೆಹರಿದಿತ್ತು.

ಈ ಬಗ್ಗೆ ನಾಯಕಿ ಮೇಘ ಶೆಟ್ಟಿ ಕೂಡ ಸೋಷಿಯಲ್ ಮೀಡಿಯಾದಲ್ಲಿ ಸ್ಪಷ್ಟನೆ ನೀಡಿದ್ದರು. ಇದೀಗ ನಾಯಕನ ವಿಚಾರದಲ್ಲೂ ಇದು ಮುಂದುವರಿದಿದ್ದು,

ಆರ್ಯವರ್ಧನ್ ಪಾತ್ರದಲ್ಲಿ ಅನಿರುದ್ದ್ ಅವರನ್ನು ಮೆಚ್ಚಿಕೊಂಡಿದ್ದ ಪ್ರೇಕ್ಷಕರಿಗೆ ಕೊಂಚ ನಿರಾಶೆಯಾಗಿದೆ. ಈಗಾಗಲೇ ಈ ಪಾತ್ರಕ್ಕೆ ಹಲವಾರು ನಟರ ಹೆಸರು ಕೇಳಿಬಂದಿದ್ದು, ಯಾರು ಆಯ್ಕೆಯಾಗಬಹುದು ಎಂಬ ವಿಚಾರ ಜನರಲ್ಲಿ ಕುತೂಹಲ ಮೂಡಿಸಿದೆ.

ವಿವಾದವನ್ನು ಪಕ್ಕಕ್ಕಿಟ್ಟು ನೋಡಿದರೆ, ‘ಆರ್ಯವರ್ಧನ್’ ಪಾತ್ರಕ್ಕೆ ನಿಜವಾಗಿಯೂ ಅನಿರುದ್ದ್ ಜೀವ ತುಂಬಿದ್ದರು. ಈಗ ಈ ಪಾತ್ರಕ್ಕೆ ಆಯ್ಕೆಯಾಗುವ ನಟನಿಗೆ ಈ ಪಾತ್ರ ಒಂದು ಸವಾಲೇ ಸರಿ.
  • ಪವಿತ್ರ

Related News

‘ಜವಾನ್’ ಅಬ್ಬರ: ವಿಶ್ವಾದ್ಯಂತ ತೆರೆಯ ಮೇಲೆ ‘ಜವಾನ್‌’, ದಾಖಲೆ ಬರೆಯಲು ಶಾರುಖ್ ಖಾನ್‌ ರೆಡಿ!
ದೇಶ-ವಿದೇಶ

‘ಜವಾನ್’ ಅಬ್ಬರ: ವಿಶ್ವಾದ್ಯಂತ ತೆರೆಯ ಮೇಲೆ ‘ಜವಾನ್‌’, ದಾಖಲೆ ಬರೆಯಲು ಶಾರುಖ್ ಖಾನ್‌ ರೆಡಿ!

September 8, 2023
ನಾನು ಸನಾತನ ಧರ್ಮಕ್ಕೆ ಹುಟ್ಟಿಲ್ಲ, ನಮ್ಮ ಅಪ್ಪನಿಗೆ ಹುಟ್ಟಿದ್ದೇನೆ’. ನಾನು ಧರ್ಮದ ವಿರೋಧಿ ಅಲ್ಲ, ನರೇಂದ್ರ ಮೋದಿಯ ವಿರೋಧಿ ಪ್ರಕಾಶ್ ರೈ
ಪ್ರಮುಖ ಸುದ್ದಿ

ನಾನು ಸನಾತನ ಧರ್ಮಕ್ಕೆ ಹುಟ್ಟಿಲ್ಲ, ನಮ್ಮ ಅಪ್ಪನಿಗೆ ಹುಟ್ಟಿದ್ದೇನೆ’. ನಾನು ಧರ್ಮದ ವಿರೋಧಿ ಅಲ್ಲ, ನರೇಂದ್ರ ಮೋದಿಯ ವಿರೋಧಿ ಪ್ರಕಾಶ್ ರೈ

September 7, 2023
ರಮ್ಯಾ ಆಘಾತ: ರಮ್ಯಾಗೆ ಹೃದಯಾಘಾತ ಸುದ್ದಿ ವೈರಲ್ ! ಈ ಸುದ್ದಿ ಸುಳ್ಳಾಗಿದ್ದು ಯೂರೋಪ್ ಪ್ರವಾಸದಲ್ಲಿ ರಮ್ಯಾ
Vijaya Time

ರಮ್ಯಾ ಆಘಾತ: ರಮ್ಯಾಗೆ ಹೃದಯಾಘಾತ ಸುದ್ದಿ ವೈರಲ್ ! ಈ ಸುದ್ದಿ ಸುಳ್ಳಾಗಿದ್ದು ಯೂರೋಪ್ ಪ್ರವಾಸದಲ್ಲಿ ರಮ್ಯಾ

September 6, 2023
ನಟ ಶಾರುಖ್ ಖಾನ್ ನಿವಾಸ ʼಮನ್ನತ್ʼ ಮುಂದೆ ಭಾರೀ ಪ್ರತಿಭಟನೆ ; ಕಾರಣವೇನು..?!
ಪ್ರಮುಖ ಸುದ್ದಿ

ನಟ ಶಾರುಖ್ ಖಾನ್ ನಿವಾಸ ʼಮನ್ನತ್ʼ ಮುಂದೆ ಭಾರೀ ಪ್ರತಿಭಟನೆ ; ಕಾರಣವೇನು..?!

August 28, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
Menu
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.