ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಸಾಮಾಜಿಕ ನ್ಯಾಯಕ್ಕೆ ನೀಡಿದ ಕೊಡುಗೆ ಶೂನ್ಯ – ನಟ ಚೇತನ್

ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ 5.5 ವರ್ಷಗಳಲ್ಲಿ ಸಾಮಾಜಿಕ ನ್ಯಾಯಕ್ಕೆ ಮೀಸಲಾತಿಯ (actor Chetan slams Siddaramaiah) ಮೂಲಕ ನೀಡಿದ ಕೊಡುಗೆ ಶೂನ್ಯ ಆಗಿದೆ

actor Chetan slams Siddaramaiah

ಎಂದು ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ (actor Chetan slams Siddaramaiah) ಅಭಿಪ್ರಾಯಪಟ್ಟಿದ್ದಾರೆ.

ಈ ಕುರಿತು ತಮ್ಮ ಫೇಸ್ಬುಕ್ ಮುಖಪುಟದಲ್ಲಿ ಬರೆದುಕೊಂಡಿರುವ ಅವರು, ಮೀಸಲಾತಿಯನ್ನು ಮುಂಬರುವ ದಿನಗಳಲ್ಲಿ 50%-65% ಹೆಚ್ಚಿಸಲು ಬಿಹಾರ ಸರ್ಕಾರವು ಯೋಜಿಸಿದೆ. ಇದು

ತುಂಬಾ ಒಳ್ಳೆಯ ನಡೆ. ಕರ್ನಾಟಕ ಸರ್ಕಾರವು ಕೂಡ ಬಿಹಾರದ ಮಾದರಿಯನ್ನು ಅನುಸರಿಸಬೇಕು ಮತ್ತು ಮೀಸಲಾತಿಯನ್ನು ಕನಿಷ್ಠ 65% ಕ್ಕೆ ಹೆಚ್ಚಿಸಬೇಕು. ಸಿದ್ದರಾಮಯ್ಯನವರು ಮುಖ್ಯ

ಮಂತ್ರಿಯಾಗಿ 5.5 ವರ್ಷಗಳಲ್ಲಿ ಸಾಮಾಜಿಕ ನ್ಯಾಯಕ್ಕೆ ಮೀಸಲಾತಿಯ ಮೂಲಕ ನೀಡಿದ ಕೊಡುಗೆ ಶೂನ್ಯ ಆಗಿದೆ. ಸಿದ್ದರಾಮಯ್ಯನವರು ಜಾತಿ ಗಣತಿ ಬಿಡುಗಡೆ ಮಾಡಬೇಕು, ಮೀಸಲಾತಿಯ

ಶೇಕಡಾ ಪ್ರಮಾಣವನ್ನು ಹೆಚ್ಚಿಸಬೇಕು, ಮತ್ತು ನಿಜವಾಗಿಯೂ ನುಡಿದಂತೆಯೇ ನಡೆಯಬೇಕು ಎಂದು ಒತ್ತಾಯಿಸಿದ್ದಾರೆ.

ಇನ್ನೊಂದು ಪೋಸ್ಟ್ನಲ್ಲಿ, ದಲಿತರು ಮುಖ್ಯಮಂತ್ರಿಯಾಗಬಾರದೇ’?ಎಂದು ಪ್ರಸನ್ನಾನಂದ ಸ್ವಾಮೀಜಿ ಹೇಳುತ್ತಾರೆ. ಸ್ವಾಮೀಜಿಯವರ ಎಸ್ಟಿ ಮೀಸಲಾತಿಗಾಗಿ ಹೋರಾಟವನ್ನು ನಾನು ಗೌರವಿಸುತ್ತೇನೆ,

ಆದರೆ ದಲಿತ ಸಿಎಂ (ಬಿಜೆಪಿ/ಕಾಂಗ್ರೆಸ್/ಜೆಡಿಎಸ್ನಿಂದ) ಯಾವುದೇ ರಚನಾತ್ಮಕ ವ್ಯತ್ಯಾಸವನ್ನು ಉಂಟುಮಾಡುವುದಿಲ್ಲ ಎಂದು ನಾನು ಭಾವಿಸುತ್ತೇನೆ. ಪರಿವರ್ತನೆಗಾಗಿ ಕರ್ನಾಟಕಕ್ಕೆ

ಅಂಬೇಡ್ಕರೈಟ್-ಪೆರಿಯಾರಿಸ್ಟ್-ಸಮಾನತಾವಾದಿ ಮುಖ್ಯಮಂತ್ರಿ ನಮಗೆ ಬೇಕು. ನಾವು ಐಡೆಂಟಿಟಿಗಿಂತ (ಅಸ್ಮಿತೆಗಿಂತ) ಸಿದ್ಧಾಂತಕ್ಕೆ ಹೆಚ್ಚು ಆದ್ಯತೆ ನೀಡಬೇಕು ಎಂದಿದ್ದಾರೆ.

ಇನ್ನೊಂದು ಪೋಸ್ಟ್ನಲ್ಲಿ ಕೇಂದ್ರ ಸರ್ಕಾರ ಸಂಸ್ಕೃತ ಭಾಷೆಗೆ ಉತ್ತೇಜನ ನೀಡುತ್ತಿರುವುದರ ಕುರಿತು ತೀವ್ರ ಅಸಮಾಧಾನ ಹೊರಹಾಕಿರುವ ಅವರು, ಸೌದಿ ಅರೇಬಿಯಾದ ಭಾರತೀಯ ರಾಯಭಾರ

ಕಚೇರಿಯು ಸಂಸ್ಕೃತ ಭಾಷೆಯನ್ನು ಉತ್ತೇಜಿಸಲು ‘ಸಂಸ್ಕೃತೋತ್ಸವ’ ಎಂಬ ಸಂಪೂರ್ಣ ಸಂಸ್ಕೃತ ಕಾರ್ಯಕ್ರಮವನ್ನು ಆಯೋಜಿಸಿದೆ. ಸಂಸ್ಕೃತ ಎಂದಿಗೂ ಜನರ ಭಾಷೆಯಾಗಿಲ್ಲ. ಐತಿಹಾಸಿಕವಾಗಿ,

ಸಂಸ್ಕೃತವು ಜನ್ಮ-ಆಧಾರಿತ ಶ್ರೇಷ್ಠತೆಯನ್ನು ಕ್ರೋಢೀಕರಿಸಲು ಪ್ರಬಲ-ಜಾತಿ ಪುರುಷರು ಹೊಂದಿದ್ದ ಭಾಷೆಯಾಗಿದೆ. ಇಂತಹ ಕಾರ್ಯಕ್ರಮವನ್ನು ಭಾರತ ಸರ್ಕಾರ ಮಾಡುತಿರುವುದು ಅದರ

ಅಂತರ್ಗತ ಗಣ್ಯತೆಯನ್ನು (ಇಲೀಟಿಸಮ್) ಬಹಿರಂಗಪಡಿಸುತ್ತದೆ ಎಂದು ಟೀಕಿಸಿದ್ದಾರೆ.

ಇದನ್ನು ಓದಿ: ಜನಸಂಖ್ಯೆ ನಿಯಂತ್ರಣ ಕುರಿತು ಬಿಹಾರ ಸಿ.ಎಂ ಅಸಂಸ್ಕೃತ ಹೇಳಿಕೆ: ಕ್ಷಮೆಯಾಚಿಸಿದ ನಿತೀಶ್ ಕುಮಾರ್

Exit mobile version