ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ 100 ಕೋಟಿ ರೂ. ಕೊಟ್ಟಿದ್ದೇಕೆ ಎಂದು ಕಿಡಿ ಕಾರಿದ ಚೇತನ್ ಅಹಿಂಸಾ.

Chikkodi: ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರನ್ನು ಸೋಮಾರಿ ಸಿದ್ದ ಎಂದು ಲೇವಡಿ ಮಾಡಿದ್ದ ನಟ ಅಹಿಂಸಾ ಚೇತನ್ ಇದೀಗ ಅಂಜನಾದ್ರಿ ಬೆಟ್ಟದ ಅಭಿವೃದ್ಧಿ ಕಾರ್ಯಗಳಿಗೆ ಹಣ ನೀಡಿದ್ದರಿಂದ ಮತ್ತೊಮ್ಮೆ ಸಿದ್ದರಾಮಯ್ಯ ವಿರುದ್ಧ ಗರಂ ಆಗಿದ್ದಾರೆ. ಈ ತನಕ ಬಜೆಟ್​​ನಲ್ಲಿ ಅಲೆಮಾರಿ ಜನಾಂಗಕ್ಕೆ ಒಂದೇ ಒಂದು ರೂಪಾಯಿ ಹಣ ಕೊಟ್ಟಿಲ್ಲ. ಆದರೆ ಬೆಳಗಾವಿ (Belagavi) ಜಿಲ್ಲೆಯ ಚಿಕ್ಕೋಡಿಯಲ್ಲಿನ ಅಂಜನಾದ್ರಿ ಹನುಮ ಜನ್ಮ ಭೂಮಿ (Anjandri Hanuma Birth Place)ಗೆ 100 ಕೋಟಿ ರೂ. ಕೊಟ್ಟಿದ್ದೀರಿ ಇದು ಸರ್ಕಾರದ ಆದ್ಯತೆಯೇ ? ಎಂದು ಚೇತನ ಪ್ರಶ್ನಿಸಿದ್ದಾರೆ.

ಅಂಜನಾದ್ರಿ ಹನುಮ ಮಂದಿರ (Anjandri Hanuma Mandira) ಅಭಿವೃದ್ದಿಗೆ ಕೊಟ್ಟಿರುವ ಹಣವನ್ನು ಅಲೆಮಾರಿ ಜನಾಂಗಗಳ ಅಭಿವೃದ್ಧಿಗೆ ಬಳಕೆ ಮಾಡುವಂತೆ ಸಿಎಂ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದ್ದಾರೆ. ಚಿಕ್ಕೋಡಿಯಲ್ಲಿ 82 ಕುಟುಂಬಗಳು ಇನ್ನೂ ಕೂಡ ಬಡತನದಲ್ಲಿದ್ದು ಗುಡಿಸಲಿನಲ್ಲಿ ಬದುಕು ಸಾಗಿಸುತ್ತಿವೆ. ಚಿಕ್ಕೋಡಿ (Chikkodi) ಪಟ್ಟಣದ ರಾಮನಗರ ಅಲೆಮಾರಿ ಜನಾಂಗದವರಿಗೆ ಸೂರು ನೀಡುವಂತೆ ಒತ್ತಾಯಿಸಿದ್ದಾರೆ. ನಿಮಗೆ ಬಡಜನರ ಬದುಕು ಕಾಣುವುದಿಲ್ಲವೇ ಎಂದು ಕಿಡಿ ಕಾರಿದ್ದಾರೆ.

ಇನ್ನು ಇದೇ ಸಮಯದಲ್ಲಿ ಜಾತಿ ಜನಗಣತಿ ಬಿಡುಗಡೆ ಮಾಡುವಂತೆ ಆಗ್ರಹಿಸಿ ನಟ ಚೇತನ (Actor Chethan), ಸಿದ್ದರಾಮಯ್ಯ ಅಹಿಂದ ಪರ ಕೆಲಸ ಮಾಡುತ್ತಿಲ್ಲ ಅವರು ಸೋಮಾರಿ ಸಿದ್ದರಾಮಯ್ಯ ಎಂದು ಲೇವಡಿ ಮಾಡಿದ್ದಾರೆ.SSLC ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಟಾಪರ್ಗಳಿಗೆ ಬಾಬಾಸಾಹೇಬ್ ಅವರ ‘ಅನೀಹಿಲೇಷನ್ ಆಫ್ ಕಾಸ್ಟ್’ (Annihilation of Cost) ಕೃತಿಯ ಪ್ರತಿಯನ್ನು ಸಿಎಂ ಸೋಮಾರಿ ಸಿದ್ದು ನೀಡಿದ್ದಾರೆ. ಇವರಿಗೆ ಏನೂ ಗೊತ್ತಿಲ್ಲ ಆದರೂ ಮಕ್ಕಳಿಗೆ ನೀಡಿದ್ದು ಎಷ್ಟು ಸರಿ. ಇದೊಂದು ರೀತಿಯಲ್ಲಿ ವಿಪರ್ಯಾಸವೇ ಸರಿ ಎಂದು ಟೀಕಿಸಿದ್ದಾರೆ.

Exit mobile version