ಸಮಾನತಾವಾದಿಗಳಾದ ನಾವು ಸರ್ದಾರ್ ಪಟೇಲ್ ಅವರನ್ನು ತಿರಸ್ಕರಿಸಬೇಕು – ನಟ ಚೇತನ್

ಕಾಂಗ್ರೆಸ್ (Congress) ಮತ್ತು ಬಿಜೆಪಿ ಇಬ್ಬರೂ ಅವರ ಪರಂಪರೆಗಾಗಿ/ಲೆಗಸೀಗಾಗಿ ಪೈಪೋಟಿ ನಡೆಸುತ್ತಿರುವಾಗ, ಸಮಾನತಾವಾದಿಗಳಾದ ನಾವು ಪಟೇಲ್ (Patel) ಅವರನ್ನು ತಿರಸ್ಕರಿಸಬೇಕು ಎಂದು ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್ (Chethan) ಅಹಿಂಸಾ ಅವರು ಅಭಿಪ್ರಾಯಪಟ್ಟಿದ್ದಾರೆ.

ಈ ಕುರಿತು ತಮ್ಮ ಫೇಸ್ಬುಕ್ (Facebook) ಮುಖಪುಟದಲ್ಲಿ ಬರೆದುಕೊಂಡಿರುವ ಅವರು, ಕಾಂಗ್ರೆಸ್ ಮತ್ತು ಬಿಜೆಪಿ ಇಬ್ಬರೂ ಅವರ ಪರಂಪರೆಗಾಗಿ/ಲೆಗಸೀಗಾಗಿ ಪೈಪೋಟಿ ನಡೆಸುತ್ತಿರುವಾಗ, ಸಮಾನತಾವಾದಿಗಳಾದ ನಾವು ಪಟೇಲ್ ಅವರನ್ನು ತಿರಸ್ಕರಿಸಬೇಕು ಸರ್ದಾರ್ ಪಟೇಲ್ (Sardar Patel) ಅವರು ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿಯನ್ನು ವಿರೋಧಿಸಿದರು, ಮತ್ತು ಮೀಸಲಾತಿಗಳನ್ನು (ಕೋಟಾಗಳನ್ನು) ‘ರಾಷ್ಟ್ರ ವಿರೋಧಿ’ ಎಂದು ಕರೆದರು

ಸಂವಿಧಾನ ಸಭೆಯಲ್ಲಿ ಮತದಾನವನ್ನು ಮೂಲಭೂತ ಹಕ್ಕನ್ನಾಗಿ ಮಾಡಲು ಅಂಬೇಡ್ಕರ್ (Ambedkar) ಅವರ ಹೋರಾಟವನ್ನು ಪಟೇಲ್ ಅವರು ವಿರೋಧಿಸಿದರು (ಇದರ ಪರಿಣಾಮವಾಗಿ, ಮತದಾನವು ಶಾಸನಬದ್ಧ ಹಕ್ಕು ಆಗಿ ಉಳಿದಿದೆ; ಇನ್ನೂ ಕೂಡ ಮೂಲಭೂತ ಹಕ್ಕು ಅಗಿಲ್ಲ) ಇಂದು ‘ರಾಷ್ಟ್ರೀಯ ಏಕತಾ ದಿನ’ ಎಂದು ಕರೆಯಲು ಅನರ್ಹವಾಗಿದೆ ಎಂದು ಟೀಕಿಸಿದ್ದಾರೆ.

ಇನ್ನೊಂದು ಬರಹದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ದವೂ ಟೀಕಾಪ್ರಹಾರ ನಡೆಸಿರುವ ಅವರು, ನಾರಾಯಣ ಮೂರ್ತಿಯವರ (Narayana Murthy) ವಾರದಲ್ಲಿ 70 ಗಂಟೆಗಳ ಕೆಲಸದ ಕಲ್ಪನೆಯನ್ನು ‘ಉತ್ತಮ ಸಲಹೆ’ ಎಂದು ಐಟಿ ಮಂತ್ರಿ ಪ್ರಿಯಾಂಕ್ ಖರ್ಗೆ (Priyanka Kharge) ಕರೆದಿದ್ದಾರೆ. ಇದು ಎಷ್ಟು ಹಾಸ್ಯಾಸ್ಪದ. ಬಂಡವಾಳಶಾಹಿ ಗಣ್ಯರ (ಇಲೀಟ್ಗಳ) ಗುಲಾಮನಾಗುವ ಬದಲು, ಪ್ರಿಯಾಂಕ್ ಖರ್ಗೆ ಅವರು

ಬಾಬಾಸಾಹೇಬ್ ಅಂಬೇಡ್ಕರ್ ಅವರು ಕೆಲಸದ ಸಮಯವನ್ನು ವಾರದಲ್ಲಿ 40/48 ಗಂಟೆಗಳ ಕಾಲ ಜಾರಿಗೊಳಿಸಲು ಕಾರ್ಮಿಕರ ಹಕ್ಕುಗಳಿಗಾಗಿ ಹೇಗೆ ಹೋರಾಡಿದರು ಎಂಬುದನ್ನು ಅಧ್ಯಯನ ಮಾಡಬೇಕು. ಕಾಂಗ್ರೆಸ್/ಬಿಜೆಪಿ (BJP)/ಜೆಡಿಎಸ್ನ ಯಾವ ದಲಿತರೂ ಅಂಬೇಡ್ಕರ್ವಾದಿಯಲ್ಲ ಮತ್ತು ಅವರು ಎಂದೆದಿಗೂ ಆಗಿಲ್ಲಾ ಎಂಬುದನ್ನು ಈ ಸಂಚಿಕೆ ಮತ್ತೊಮ್ಮೆ ನೆನಪಿಸುತ್ತದೆ ಎಂದಿದ್ದಾರೆ.

Exit mobile version