“ಆ ನಿನ್ನದೇ ಸ್ಟೈಲಿನ ಕೊರಳ ದನಿ ಕೇಳಬಹುದೇನೋ ಅಣ್ಣಾ ಎಪ್ಪಡಿ ಇರುಕ್ಕೀಂಗ” – ನಟ ಬಾಲಾಜಿ ನಿಧನಕ್ಕೆ ಕಿಶೋರ್ ಭಾವಪೂರ್ಣ ಪತ್ರ

ಈಗಲೂ ಅನಿಸುತ್ತಿದೆ ನಾನು ಕರೆ ಮಾಡಿದರೆ ಆ ಕಡೆಯಿಂದ ಆ ನಿನ್ನದೇ ಸ್ಟೈಲಿನ ಕೊರಳ ದನಿ ಕೇಳಬಹುದೇನೋ … ಅಣ್ಣಾ .. ಎಪ್ಪಡಿ ಇರುಕ್ಕೀಂಗ ಎಂದು ತಮಿಳು ಚಿತ್ರರಂಗದ ಖ್ಯಾತ ನಟ ಡೇನಿಯಲ್ ಬಾಲಾಜಿ (Daniel Balaji) ನಿಧನಕ್ಕೆ ಕನ್ನಡದ ನಟ ಕಿಶೋರ್ ಕುಮಾರ್ ಭಾವಪೂರ್ಣ ಪತ್ರ ಬರೆದಿದ್ದಾರೆ.

ನಟ ಡೇನಿಯಲ್ ಬಾಲಾಜಿ ಹೃದಯಾಘಾತದಿಂದ (Heart Attack) ನಿಧನರಾಗಿದ್ದು, ಈ ಕುರಿತು ತಮ್ಮ ಫೇಸ್ಬುಕ್ ಮುಖಪುಟದಲ್ಲಿ ಬರೆದುಕೊಂಡಿರುವ ನಟ ಕಿಶೋರ್ ಅವರು, ಗುಡ್ ಬೈ ಬ್ರದರ್.. ವಿಲ್ ಮಿಸ್ ಯು… (Good Bye Brother.. Will Miss You) ಪೊಲ್ಲಾದವನ್ ನಮಗೆಲ್ಲರಿಗೆ ಕೇವಲ ಸಿನಿಮಾ ಆಗಿರಲಿಲ್ಲ ಮನೆಯಾಗಿತ್ತು, ಕುಟುಂಬವಾಗಿತ್ತು.

ನಿಯಮಿತವಾಗಿ ಯಾವುದೇ ಮಾತುಕತೆಯಿಲ್ಲದಿದ್ದರೂ… ನಮ್ಮಲ್ಲಿ ಒಬ್ಬರ ಆಲೋಚನೆಗಳು, ಚಲನಚಿತ್ರಗಳು ಮತ್ತು ಯಶಸ್ಸಿನ ಬಗ್ಗೆ ಯಾವಾಗಲಾದರೂ ಬರುವ ಸುದ್ದಿ ಅಥವಾ ವೀಡಿಯೊವನ್ನು ನೋಡಿದಾಗ ನಮ್ಮ ಮುಖದಲ್ಲಿ ಮೂಡುವ ಆ ಮುಗುಳ್ನಗೆ ..

ನಾವು ಪರಸ್ಪರರ ಬಗ್ಗೆ ಮಾತನಾಡುವಾಗ .. ಹೊಮ್ಮುವ ಆ ಹೆಮ್ಮೆಯ ಭಾವ ನಮ್ಮೊಂದಿಗೆ ಅಥವಾ ನಾವಿಲ್ಲದೆ ನಮ್ಮಲ್ಲಿ ಯಾರು ಯಾವ ಕೆಲಸ ಮಾಡಿದರೂ ನಾವು ಪಡುವ ಆ ಸಂತೋಷ ಏನೆಂದು ಹೇಳಲಿ. ನಾನು ಎಲ್ಲಿ ಹೋದರೂ ಜನ ಯಾವಾಗ ವಡಚೆನ್ನೈ -2 ಎಂದು ಕೇಳುತ್ತಲೇ ಇರುತ್ತಾರೆ.

ನಾನು ತಮಾಷೆಯಾಗಿ ಹೇಳುತ್ತಿರುತ್ತೇನೆ ವೆಟ್ರಿ ಒಪ್ಪಿಕೊಂಡಿರುವ ಸಿನಿಮಾಗಳ ಸಾಲು ನೋಡಿದರೆ ನಾವು 70 ವರ್ಷ ವಯಸ್ಸಿನವರಾದಾಗ ಮಾತ್ರ ಮಾಡಲು ಸಾಧ್ಯವಾಗಬಹುದು ಎಂದು, ಆದರೆ ಈಗಲೂ ಅನಿಸುತ್ತಿದೆ ನಾನು ಕರೆ ಮಾಡಿದರೆ ಆ ಕಡೆಯಿಂದ ಆ ನಿನ್ನದೇ ಸ್ಟೈಲಿನ ಕೊರಳ ದನಿ ಕೇಳಬಹುದೇನೋ … ಅಣ್ಣಾ .. ಎಪ್ಪಡಿ ಇರುಕ್ಕೀಂಗ (Anna Eppadi Irukinga) ಎಂದು ಭಾವಪೂರ್ಣ ಪತ್ರ ಬರೆದಿದ್ದಾರೆ.

Exit mobile version