ರಾಷ್ಟ್ರಪತಿಯನ್ನು ‘ರಾಷ್ಟ್ರಪತ್ನಿ’ ಎಂದು ಉಲ್ಲೇಖಿಸಿದ ಅಧೀರ್ ರಂಜನ್ ಚೌಧರಿ ; ಕ್ಷಮೆಯಾಚಿಸಿ ಎಂದ ಬಿಜೆಪಿ

Adir ranjan

ಕಾಂಗ್ರೆಸ್ ಸಂಸದ(Congress MP) ಅಧೀರ್ ರಂಜನ್ ಚೌಧರಿ(Adhir Ranjan Chowdhuy) ಅವರು ನೂತನ ರಾಷ್ಟ್ರಪತಿ(President) ದ್ರೌಪದಿ ಮುರ್ಮು(Droupadi Murmu) ಅವರನ್ನು ಉಲ್ಲೇಖಿಸಿ ಹೇಳುವಾಗ, ರಾಷ್ಟ್ರಪತಿ ಬದಲು ರಾಷ್ಟ್ರಪತ್ನಿ ಎಂದು ತಪ್ಪಾಗಿ ಹೇಳಿದ್ದಾರೆ. ಅಧೀರ್ ಅವರು ರಾಷ್ಟ್ರಪತ್ನಿ ಎಂದು ಉಲ್ಲೇಖಿಸಿದ ಬೆನ್ನಲ್ಲೇ ಸದನದಲ್ಲಿ ಗದ್ದಲ ಉಂಟಾಗಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಅಧೀರ್, “ನಾನು ಅದನ್ನು ಒಂದೇ ಬಾರಿ ಹೇಳಿದ್ದೇನೆ. ತಪ್ಪಾಗಿ ಹೇಳಲು ನಾಲಿಗೆ ತಡವರಿಸಿತು ಎಂದು ಹೇಳುವ ಮೂಲಕ ಕಾರಣ ಕೊಟ್ಟಿದ್ದಾರೆ. ಈ ವಿಷಯವನ್ನು ಮುಂದಿಟ್ಟುಕೊಂಡ ಬಿಜೆಪಿ, ಕಾಂಗ್ರೆಸ್ ಅನಗತ್ಯ ವಿವಾದವನ್ನು ಹುಟ್ಟುಹಾಕುತ್ತಿದೆ ಎಂದು ಆರೋಪಿಸಿದೆ.

ಇನ್ನು ಚೌಧರಿ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ‘ರಾಷ್ಟ್ರಪತ್ನಿ’ ಎಂದು ಕರೆದ ವೀಡಿಯೊ(Video) ಸಾಮಾಜಿಕ ಜಾಲತಾಣದಲ್ಲಿ(Social Media) ಹರಿದಾಡಿದೆ. ಈ ವಿಷಯದ ಬಗ್ಗೆ ಸದನದಲ್ಲಿ ಆರೋಪ ಮಾಡಿದ ಬಿಜೆಪಿಗೆ ಕಾಂಗ್ರೆಸ್ ಪ್ರತ್ಯುತ್ತರ ಕೊಡಲು ಮುಂದಾಗಿದೆ. ರಾಷ್ಟ್ರಪತ್ನಿ ಎಂಬ ಹೇಳಿಕೆಯನ್ನು ತೀವ್ರ ಖಂಡಿಸಿದ ಬಿಜೆಪಿ, ಕಾಂಗ್ರೆಸ್ ಜೊತೆಗೆ ವಾಗ್ವಾದ ನಡೆಸಿದೆ. ಈ ನಡುವೆ ಕೇಂದ್ರ ಸಚಿವೆ ಸ್ಮೃತಿ ಇರಾನಿ(Smrithi Irani) ಚೌಧರಿ ಅವರ ‘ರಾಷ್ಟ್ರಪತ್ನಿ’ ಹೇಳಿಕೆಗೆ ಸೋನಿಯಾ ಗಾಂಧಿಯನ್ನು(Sonia Gandhi) ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ತಪ್ಪಿಗೆ ಸೋನಿಯಾ ಗಾಂಧಿ ಕ್ಷಮೆಯಾಚಿಸಬೇಕು. ದ್ರೌಪದಿ ಮುರ್ಮು ಅವರನ್ನು ಅವಮಾನಿಸಿದ ಕಾರಣಕ್ಕೆ ಸೋನಿಯಾ ಗಾಂಧಿ ಮತ್ತು ಅವರ ನಾಯಕತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಾಂವಿಧಾನಿಕ ಹುದ್ದೆಗಳಲ್ಲಿ ಮಹಿಳೆಯರನ್ನು ಅವಮಾನಿಸುತ್ತಿದ್ದಾರೆ ಎಂದು ಆರೋಪಿಸಿದರು. ಸಂಸತ್ತಿನಲ್ಲಿ ಮತ್ತು ಭಾರತದ ಬೀದಿಗಳಲ್ಲಿ ಪಕ್ಷವು ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು. ದ್ರೌಪದಿ ಮುರ್ಮು ಅವರು ರಾಷ್ಟ್ರಪತಿ ಸ್ಥಾನಕ್ಕೆ ನಾಮನಿರ್ದೇಶನಗೊಂಡಾಗಿನಿಂದ ಕಾಂಗ್ರೆಸ್‌ನವರು ಅವರನ್ನು ಗುರಿ ಮಾಡುತ್ತಿದ್ದಾರೆ ಎಂದು ಸ್ಮೃತಿ ಇರಾನಿ ಆರೋಪಿಸಿದ್ದಾರೆ.

Exit mobile version