T20 World Cup 2024: ಇತಿಹಾಸ ಸೃಷ್ಟಿಸಿದ ಅಫ್ಘಾನಿಸ್ತಾನ್!

Kingstown: ಪ್ರಸ್ತುತ ನಡೆಯುತ್ತಿರುವ ಟಿ20 ವಿಶ್ವಕಪ್ ನಲ್ಲಿ ಅಫ್ಘಾನಿಸ್ತಾನ (Afghanistan) ಕ್ರಿಕೆಟ್ ತಂಡ ಹೊಸ ಇತಿಹಾಸ ಸೃಷ್ಟಿಸಿದೆ. ಇದೇ ಮೊದಲ ಬಾರಿಗೆ ಟೆಸ್ಟ್ ಕ್ರಿಕೆಟ್ ಆಡದ ತಂಡವೊಂದು ಸೆಮಿಫೈನಲ್ ತಲುಪಿರುವುದು ವಿಶೇಷ. ಅಫ್ಘಾನಿಸ್ತಾನ್ ತಂಡ ಸಮಿಫೈನಲ್ಗೇರಿದರೆ, ಇನ್ನೊಂದೆಡೆ ಬಲಿಷ್ಠ ಆಸ್ಟ್ರೇಲಿಯಾ ತಂಡ ವಿಶ್ವಕಪ್ ಟೂರ್ನಿಯಿಂದಲೇ ಹೊರಬಿದ್ದಿದೆ.

Cricket

ಸೂಪರ್ 8ರ ತನ್ನ ಕೊನೆಯ ಪಂದ್ಯದಲ್ಲಿ ಅಫ್ಘಾನಿಸ್ತಾನ್ ತಂಡವು ಬಾಂಗ್ಲಾದೇಶವನ್ನು ಸೋಲಿಸುವ ಮೂಲಕ ಸೆಮಿಫೈನಲ್ (Semifinal)ಗೇರಿತು. ಕಿಂಗ್ಸ್ಟೌನ್ನ ಅರ್ನೋಸ್ ವೇಲ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ, ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ್ 20 ಓವರ್ಗಳಲ್ಲಿ 5 ವಿಕೆಟ್ಗೆ 115 ರನ್ ಮಾತ್ರ ಗಳಿಸಿತ್ತು. ಈ ಪಂದ್ಯಕ್ಕೆ ಮಳೆ ಕಾರಣದಿಂದಾಗಿ ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ ಗೆಲುವು ಸಾಧಿಸಲು ಬಾಂಗ್ಲಾದೇಶ ತಂಡವು 19 ಓವರ್ಗಳಲ್ಲಿ 114 ರನ್ಗ (Runs)ಳನ್ನು ಗಳಿಸಬೇಕಿತ್ತು.

ಆದರೆ ಅಫ್ಘಾನಿಸ್ತಾನ್ ತಂಡದ ಬೌಲರ್ಗಳ (Bowler) ದಾಳಿಗೆ ತತ್ತರಿಸಿದ ಬಾಂಗ್ಲಾದೇಶ ಕೇವಲ 105 ರನ್ಗಳಿಗೆ ಸರ್ವಪತನ ಕಂಡಿತು. ಬಾಂಗ್ಲಾದೇಶದ ಆರಂಭಿಕ ಆಟಗಾರ ಲಿಟ್ಟನ್ ದಾಸ್ 49 ಎಸೆತಗಳಲ್ಲಿ 54 ರನ್ಗಳಿಸಿ ಉತ್ತಮ ಹೋರಾಟ ನೀಡಿದರು, ಫಲ ನೀಡಲಿಲ್ಲ.

ಅಫ್ಘಾನಿಸ್ತಾನ್ ತಂಡದ ಪರ ಆರಂಭಿಕ ಆಟಗಾರ ರೆಹ್ಮಾನುಲ್ಲಾ ಗುರ್ಬಾಝ್ 43 ರನ್, ರಶೀದ್ ಖಾನ್ 19 ರನ್, ಇಬ್ರಾಹಿಮ್ 18 ರನ್, ಅಝ್ಮತ್ತುಲ್ಲಾ ಒಮರ್ಝೈ 10 ರನ್ಗಳನ್ನು ಗಳಿಸಿ ತಂಡಕ್ಕೆ ನೆರವಾದರು. ಇನ್ನು ಮಾರಕ ದಾಳಿ ನಡೆಸಿದ ಬೌಲರ್ ನವೀನ್ ಉಲ್ ಹಕ್ 3.5 ಓವರ್ಗಳಲ್ಲಿ 26 ರನ್ ಕೊಟ್ಟು 4 ವಿಕೆಟ್ ಕಬಳಿಸಿದರು, ರಶೀದ್ ಖಾನ್ 4 ಓವರ್ಗಳಲ್ಲಿ 23 ರನ್ ಕೊಟ್ಟು 4 ವಿಕೆಟ್ ಪಡೆದರು.

Exit mobile version