ಕೃಷಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುತ್ತಾರಾ ಎಚ್‌ಡಿ ಕುಮಾರಸ್ವಾಮಿ ?

ಲೋಕಸಭಾ ಚುನಾವಣೆ 2024ರ ಫಲಿತಾಂಶಗಳು ಹೊರಬಿದ್ದಿದ್ದು ಎನ್‌ಡಿಎ ಬಹುಮತ ಪಡೆದಿದ್ದು ಸರ್ಕಾರ (Agriculture Minister HDK) ರಚನೆಗೆ ತಯಾರಿ ಆರಂಭಿಸಿದೆ. ಬುಧವಾರ ನಡೆದ

Agriculture Minister HDK

ಎನ್‌ಡಿಎ ಸಭೆಯಲ್ಲಿ ನರೇಂದ್ರ ಮೋದಿಯನ್ನು ಮುಂದಿನ ಪ್ರಧಾನಿ ಮಾಡಲು ಎಲ್ಲ ನಾಯಕರೂ ಒಮ್ಮತದಿಂದ ಒಪ್ಪಿಗೆ ಸೂಚಿಸಿದ್ದಾರೆ. ಅದರ ಬೆನ್ನಲ್ಲೇ ಚಂದ್ರಬಾಬು ನಾಯ್ಡು ಮತ್ತು ನಿತೀಶ್ ಕುಮಾರ್

ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಮನವಿ (Agriculture Minister HDK) ಮಾಡಿದ್ದಾರೆ.

ಇನ್ನು ಮಂಡ್ಯದಿಂದ ಸ್ಫರ್ಧೆ ಮಾಡಿ ಭರ್ಜರಿ ಜಯಭೇರಿ ಬಾರಿಸಿರುವ ಎಚ್‌ಡಿ ಕುಮಾರಸ್ವಾಮಿ ಎನ್‌ಡಿಎ ಸಭೆಯಲ್ಲಿ ಭಾಗವಹಿಸಿದ್ದರು. ನರೇಂದ್ರ ಮೋದಿ ಸರ್ಕಾರದಲ್ಲಿ ಕೇಂದ್ರ ಸಚಿವ ಸ್ಥಾನ ಪಡೆಯಲು

ಕುಮಾರಸ್ವಾಮಿ ಆಸಕ್ತಿ ಹೊಂದಿದ್ದು ಅದರಲ್ಲೂ ಕೃಷಿ ಖಾತೆ ಮೇಲೆ ಕಣ್ಣಿಟ್ಟಿರುವುದಾಗಿ ತಿಳಿದು ಬಂದಿದೆ. ಇನ್ನು ಈ ಕುರಿತಾಗಿ ಪ್ರತಿಕ್ರಿಯೆ ನೀಡಿರುವ ಎಚ್‌ಡಿ ಕುಮಾರಸ್ವಾಮಿ, ನಮ್ಮಿಂದ ಯಾವುದೇ ದೊಡ್ಡ

ಬೇಡಿಕೆಗಳಿಲ್ಲ ಹಲವು ವರ್ಷಗಳಿಂದ ಕರ್ನಾಟಕದ ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಕರ್ನಾಟಕ ರಾಜ್ಯಕ್ಕೆ ಕ್ಯಾಬಿನೆಟ್ ಸ್ಥಾನ ನೀಡುವ ಬಗ್ಗೆ

ನರೇಂದ್ರ ಮೋದಿ ನಿರ್ಧಾರ ಮಾಡುತ್ತಾರೆ. ಆದರೂ ನನ್ನ ಆಕಾಂಕ್ಷೆಯನ್ನು ಹೇಳಿಕೊಂಡಿದ್ದೇನೆ ಎಂದಿದ್ದಾರೆ.

ಅನಾದಿಕಾಲದಿಂದಲೂ ನಮ್ಮ ಕುಟುಂಬ ರೈತ ಸಮುದಾಯದ ಅಭಿವೃದ್ಧಿಗೆ ಹೋರಾಡಿದೆ. ಕೃಷಿ ಸಮಸ್ಯೆಗಳ ಬಗ್ಗೆ ಸಾಕಷ್ಟು ಮಾಹಿತಿ ಹೊಂದಿರುವವವರಿಗೆ ಕೃಷಿ ಖಾತೆ ಕೊಡಬೇಕು ಎಂದು ನಮ್ಮ

ಪಕ್ಷದ ಹಲವು ನಾಯಕರು ಇದೇ ಆಸೆ ಇಟ್ಟುಕೊಂಡಿದ್ದಾರೆ. ಆದರೆ ಎನ್‌ಡಿಎ ಏನು ನಿರ್ಧಾರ ಮಾಡುತ್ತದೆ ಕಾದು ನೋಡೋಣ ಎಂದು ಹೇಳುವ ಮೂಲಕ ಪರೋಕ್ಷವಾಗಿ ತನಗೆ ಕೃಷಿ ಸಚಿವನಾಗುವ

ಆಸಕ್ತಿ ಇದೆ ಎಂದು ಹೇಳಿಕೊಂಡಿದ್ದಾರೆ.

ಇದನ್ನು ಓದಿ: ಒಡಿಶಾದಲ್ಲಿ ಮೊದಲ ಬಾರಿಗೆ ಅರಳಿದ ಕಮಲ: BJD ಕೋಟೆ ಛಿದ್ರ

Exit mobile version